ಮೈಸೂರು[ಡಿ.06]  ರಾಜ್ಯದಲ್ಲಿ ಭೂಕಂಪ ಹಾಗುತ್ತೆ  ಅಂತ ಯಾವ ವಿಜ್ಞಾನಿ  ತಿಳಿಸಿದ್ದಾರೆ ಅಂತ ನನಗೆ ಗೊತ್ತಿಲ್ಲ. ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಅವರಿಗೆ ಟಾಂಗ್ ನೀಡಿದ ಸಚಿವ ಜಿಟಿ ದೇವೇಗೌಡ.  ಮಾನವ ಸಂಪನ್ಮೂಲ ಸಚಿವರಾಗಿರುವುದರಿಂದ ಅವರು ವೈಜ್ಞಾನಿಕ ಭೂಕಂಪದ ಬಗ್ಗೆ ಮಾತನಾಡಿದ್ದಾರೆ.

ರಾಜ್ಯದ ರಾಜಕೀಯ ಭೂಕಂಪದ ಬಗ್ಗೆ ಅವರು ಹೇಳಿಲ್ಲ. ಇನ್ನೂ ಬಿಜೆಪಿ ನಾಯಕರು ಸಮ್ಮಿಶ್ರ ಸರ್ಕಾರದ ಶಾಸಕರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದರು. ಆದರೇ ಈಗ ಅವರು ಏನು ಮಾಡಿದ್ರೂ ಸಾಧ್ಯವಿಲ್ಲ. ಶಾಸಕರು ಮುಂಬೈನಲ್ಲಿ ಪ್ಲೈಟ್ ಹತ್ತುತ್ತಿದ್ದಾರೆ. ರೆಸಾರ್ಟ್ ರಾಜಕಾರಣ ಎಂಬ ರಾಗವೆಲ್ಲ ಮುಗಿದಿದೆ ಎಂದು ವ್ಯಂಗ್ಯವಾಡಿದರು.

'ರಾಜಕಾರಣದಲ್ಲಿ ಕಂಪನವೂ ಆಗಲ್ಲ, ಮಣ್ಣಂಗಟ್ಟಿಯೂ ಇಲ್ಲ'

ಇನ್ನೂ ಏನೇ ಮಾಡಿದರು ನಮ್ಮ ಸಮ್ಮಿಶ್ರ ಸರ್ಕಾರವನ್ನು ಏನು ಮಾಡಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಸುಭದ್ರ ವಾಗಿದೆ ಎಂದಿರುವ ಜಿಟಿ ದೇವೇಗೌಡ ಹೇಳಿಕೆಗೆ ಒಂದು ದಿನ ತಡವಾಗಿ ಪ್ರತಿಕ್ರಿಯೆ ನೀಡಿದ್ದಾರೆ.