ವಿಮಾನ ನಿಲ್ದಾಣದಲ್ಲಿ ಡಿಕೆಶಿಗೆ ರಾಹುಲ್ ಹೇಳಿದ ರಹಸ್ಯ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Nov 2018, 8:59 PM IST
Karnataka Minister DK Shivakumar gets new responsibility from congress high command
Highlights

ಸದ್ಯಕ್ಕೆ ರಾಜ್ಯ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಅವರೆ ಬಾಸ್. ಅವರಿಗೆ ಪಕ್ಷ ನೀಡುವ ಜವಾಬ್ದಾರಿಯನ್ನು ಯಶಸ್ವಿಯಾಗಿಯೇ ಪೂರೈಸಿಕೊಂಡು ಬರುತ್ತಿದ್ದಾರೆ. ಅವರು ಎಡವಿದ್ದು ಎಲ್ಲಿಯೂ ಇಲ್ಲ. ಇದೀಗ ಡಿಕೆ ಶಿವಕುಮಾರ್‌ಗೆ ಹೈಕಮಾಂಡ್ ಮತ್ತೊಂದು ಹೊಸ ಜವಾಬ್ದಾರಿಯನ್ನು ನೀಡಿದೆ.

ಬೆಂಗಳೂರು[ನ.24]  ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಳ್ಳಾರಿಯನ್ನು ಗೆದ್ದುಕೊಟ್ಟ ಡಿಕೆಶಿ ಹೆಗಲಿಗೆ ಮತ್ತೊಂದು ಜವಾಬ್ದಾರಿ ನೀಡಲಾಗಿದೆ. ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯೇ ಜವಾಬ್ದಾರಿ ನೀಡಿ ತೆರಳಿದ್ದಾರೆ. ಹಾಗಾದರೆ ಅಷ್ಟಕ್ಕೂ ಡಿಕೆಶಿಗೆ ನೀಡಿದ ಹೊಸ ಜವಾಬ್ದಾರಿ ಏನು?

ಬಳ್ಳಾರಿ ಗೆಲುವು: ಶ್ರೀರಾಮುಲು ಅವರನ್ನು ಎದುರು ಹಾಕಿಕೊಂಡು ಬಳ್ಳಾರಿಯಲ್ಲಿ ಡಿಕೆಶಿ ಕಾಂಗ್ರೆಸ್ ಗೆ ಗೆಲುವು ತಂದುಕೊಟ್ಟರು. ಬೆಂಗಳೂರಿನಿಂದ ತೆರಳಿ ನಾಮಪತ್ರ ಸಲ್ಲಿದಿದ್ದ ಉಗ್ರಪ್ಪ ಗೆಲ್ಲಲು ಡಿಕೆಶಿ ಕಾರ್ಯತಂತ್ರವೇ ಕಾರಣ

ಕಬ್ಬು ಬೆಳೆಗಾರರ ಮನವೊಲಿಕೆ: ಖುದ್ದು ಸಿಎಂ ಕುಮಾರಸ್ವಾಮಿ ಮುಂದಾಗಿದ್ದರೂ ರೈತರು ಪಟ್ಟು ಸಡಿಲಿಸಿರಲಿಲ್ಲ. ಬೆಳಗಾವಿಯಲ್ಲಿ ಉಪವಾಸ ಕುಳಿತಿದ್ದ ರೈತರು ಡಿಕೆಶಿ ಮಾತಿಗೆ ಬೆಲೆ ಕೊಟ್ಟು ಪ್ರತಿಭಟನೆ ಹಿಂದಕ್ಕೆ ಪಡೆದರು.

ಟ್ರಬಲ್‌ ಶೂಟರ್‌ ಡಿಕೆಶಿಯಿಂದ ಮತ್ತೊಂದು ಬಿಗ್ ಡೀಲ್

ಟ್ರಬಲ್ ಶೂಟರ್: ಐಟಿ, ಇಡಿಯ ದಾಳಿಯ ನಡುವೆಯೂ ಡಿಕೆ ಶಿವಕುಮಾರ್ ಟ್ರಬಲ್ ಶೂಟರ್ ಆಗಿ ಹೊರಹೊಮ್ಮಿದ್ದಾರೆ. ಸರ್ಕಾರಕ್ಕೆ ಆತಂಕ ಬರುವ ಸಂಭವ ಎದುರಾದಗಲೆಲ್ಲ ಡಿಕೆಶಿ ಎಲ್ಲವನ್ನು ನಿವಾರಿಸಿಕೊಂಡು ಬರುತ್ತಿದ್ದಾರೆ. ವಿಶ್ವಾಸಮತದ ವೇಳೆ ಆನಂದ್ ಸಿಂಗ್ ಮತ್ತು ಶಂಕರ್ ಕರೆದುಕೊಂಡು ಬಂದಲ್ಲಿಂದ ಹಿಡಿದು, ಗುಜರಾತ್ ಶಾಸಕರನ್ನು ಸೇವ್ ಮಾಡಿದ್ದನ್ನು ಹೈಕಮಾಂಡ್ ಪರಿಗಣಿಸಿದೆ.

ನೀಡಿರುವ ಹೊಸ ಜವಾಬ್ದಾರಿ ಏನು? ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅಪಸ್ವರಕ್ಕೆ ಅವಕಾಶ ನೀಡದಂತೆ ಉಭಯ ಪಕ್ಷಗಳ ಸಚಿವರು ಹಾಗೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೋಸ್ತಿ ಸರ್ಕಾರಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಡಿಕೆಶಿಯೇ ಇನ್ನು ಮುಂದೆ ಸಂಪೂರ್ಣವಾಗಿ ಹೊರಲಿದ್ದಾರೆ.  ತೆಲಂಗಾಣದಲ್ಲಿಯೂ ತಮ್ಮ ಛಾಪು ಮೂಡಿಸಿರುವ ಡಿಕೆಶಿಗೆ ಖುದ್ದು ರಾಹುಲ್ ಗಾಂಧಿಯೇ  ನೀಡಿದ್ದಾರೆ.

 

 

 

 

 

loader