Asianet Suvarna News Asianet Suvarna News

ಮಹಿಳೆ ಅತ್ಯಾಚಾರ, ಕೊಲೆ: ಗೋವಾದಲ್ಲಿ ಬೆಳಗಾವಿ ವ್ಯಕ್ತಿ ಸೆರೆ

ಆರೋಪಿಯನ್ನು ಬೆಳಗಾವಿ ಮೂಲದ ಮಂಜುನಾಥ್ ದೊಡ್ಡಮನಿ ಎಂದು ಗುರುತಿಸಲಾಗಿದೆ. ಈತ ತನ್ನ ಪೋಷಕರೊಂದಿಗೆ ಹಳೆಯ ಗೋವಾದಲ್ಲಿ ನೆಲೆಸಿದ್ದ. ಸಂತ್ರಸ್ತೆಯ ಮೃತ ದೇಹ ಕೆಲ ದಿನಗಳ ಹಿಂದೆ ಪತ್ತೆಯಾಗಿತ್ತು. 

Karnataka Man Arrested After Allegedly Raping In Goa
Author
Panaji, First Published Oct 15, 2018, 8:54 AM IST
  • Facebook
  • Twitter
  • Whatsapp

ಪಣಜಿ(ಅ.15): ಮಧ್ಯವಯಸ್ಕ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪದ ಮೇಲೆ ಕರ್ನಾಟಕ ಮೂಲದ 23 ವರ್ಷದ ವ್ಯಕ್ತಿಯೊಬ್ಬನನ್ನು ಹಳೆಯ ಗೋವಾ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ. 

ಆರೋಪಿಯನ್ನು ಬೆಳಗಾವಿ ಮೂಲದ ಮಂಜುನಾಥ್ ದೊಡ್ಡಮನಿ ಎಂದು ಗುರುತಿಸಲಾಗಿದೆ. ಈತ ತನ್ನ ಪೋಷಕರೊಂದಿಗೆ ಹಳೆಯ ಗೋವಾದಲ್ಲಿ ನೆಲೆಸಿದ್ದ. ಸಂತ್ರಸ್ತೆಯ ಮೃತ ದೇಹ ಕೆಲ ದಿನಗಳ ಹಿಂದೆ ಪತ್ತೆಯಾಗಿತ್ತು. 

ಆರೋಪಿಯ ಪತ್ತೆಗೆ 15 ಪೊಲೀಸರ ತಂಡ ರಚಿಸಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಶನಿವಾರ ರಾತ್ರಿ ಆರೋಪಿಯನ್ನು ಬಂಧಿಸಲಾಗಿದೆ. ದೊಡಮನಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

Follow Us:
Download App:
  • android
  • ios