ಉಡುಪಿ[ನ.05]   ಅಯ್ಯಪ್ಪ ದೇವರೇ ಅಲ್ಲ ಎಂದಿರುವ ಪ್ರಕಾಶ್ ರೈ ಇನ್ನೂ  ಗೌರಿ ಲಂಕೇಶ್ ಮಾನಸಿಕತೆಯಿಂದ ಹೊರಬಂದಿಲ್ಲ  ಎಂದು  ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.

ಗೌರಿಯ ಹತ್ಯೆ ನಮಗೆಲ್ಲಾ ನೋವು ತಂದಿದೆ. ಯಾವ ಹಿಂಸೆಯನ್ನೂ ಸಹಿಸಲು ನಮಗೆ ಸಾಧ್ಯವಿಲ್ಲ. ಆದರೆ ಗೌರಿ ಹಿಂದೂ ಧರ್ಮ ಧರ್ಮವೇ ಅಲ್ಲ ಅಂದಿದ್ದರು, ಹಿಂದೂ ದೇವರು ದೇವರೇ ಅಲ್ಲ ಅಂದಿದ್ದರು. ಆ ಬಗೆಯ ಮಾನಸಿಕತೆಯಿಂದ ಪ್ರಕಾಶ್ ರೈ ಹೊರ ಬಂದಿಲ್ಲ ಅನ್ನೋದೇ  ನೋವು ತಂದಿದೆ ಎಂದಿದ್ದಾರೆ.

ಅಯ್ಯಪ್ಪ ಸ್ವಾಮಿ ದೇವರೇ ಅಲ್ಲ : ಪ್ರಕಾಶ್ ರೈ ವಿವಾದದ ಕಿಡಿ

ಬುದ್ದಿಜೀವಿಗಳು, ನಗರ ನಕ್ಸಲರ ಮಾತಿಗೆ ಅವರೇ ಸ್ಪಷ್ಟನೆ ಕೊಡಬೇಕು. ಇತರ ಧರ್ಮಗಳ ವಿಚಾರವನ್ನು ಆಯಾ ಧರ್ಮಗಳು ನಿರ್ಧರಿಸುತ್ತೆ. ಹಿಂದೂ ಧರ್ಮದ ವಿಚಾರದಲ್ಲಿ ನ್ಯಾಯಾಲಯ, ಸರ್ಕಾರ ಹಸ್ತಕ್ಷೇಪ ಮಾಡುತ್ತದೆ. ಶಬರಿಮಲೆ ವಿಚಾರದಲ್ಲಿ ಧಾರ್ಮಿಕ ನಂಬಿಕೆಗೆ ಬೆಲೆ ಕೊಡಬೇಕು. ನ್ಯಾಯಾಲಯ ಕ್ಕೆ ಮೇಲ್ಮನವಿ ಮಾಡಿದ ನಂತರವೂ ಪಿಣರಾಯಿ ವಿಜಯನ್  ವರ್ತನೆ ಸರಿಯಾಗಿಲ್ಲ. ನಂಬಿಕೆಯ ಮೇಲಿನ ಬಲಾತ್ಕಾರ, ದಬ್ಬಾಳಿಕೆ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.