Asianet Suvarna News Asianet Suvarna News

ಕಾಸರಗೋಡಿಗಾಗಿ ಶುರವಾಯ್ತು ಹೋರಾಟ, ಜಮ್ಮು ಏರ್‌ಬೇಸ್‌ನಲ್ಲಿ ಸ್ಫೋಟ: ಜೂ.27ರ ಟಾಪ್ 10 ಸುದ್ದಿ!

ಕೊರೋನಾ ಕುರಿತು ವದಂತಿಗಳಿಗೆ ಕಿವಿಗೊಡಬೇಡಿ, ಸಾಧ್ಯವಾದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಿ ಎಂದು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಜಮ್ಮು ಮಿಲಿಟರಿ ಏರ್‌ಬೇಸ್‌ನಲ್ಲಿ ಎರಡು ಸ್ಫೋಟ ಸಂಭವಿಸಿದೆ. ಬಿಗ್‌ಬಾಸ್ ವಾರದ ಪಂಚಾಯತಿಯಲ್ಲಿ ದೊಡ್ಡ ಜಗಳವೇ ನಡೆದು ಹೋಗಿದೆ. ಶ್ರೀದೇವಿ ಪುತ್ರಿ ಜಾಹ್ನವಿ ಟಾಪ್‌ಲೆಸ್ ಫೋಟೋಶೂಟ್, ಬಾಲಿವುಡ್‌ ಸಿನಿಮಾ ಕಾಪಿ ಮಾಡ್ಬೇಡಿ ಸೇರಿದಂತೆ ಜೂನ್ 27ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Karnataka kasargod to Jammu airbase blast top 10 News of June 27 ckm
Author
Bengaluru, First Published Jun 27, 2021, 5:06 PM IST
  • Facebook
  • Twitter
  • Whatsapp

ಕೊರೋನಾ ಓಡುತ್ತೆ ಅನ್ನೋ ಭ್ರಮೆ ಬೇಡ, ಲಸಿಕೆ ಹಾಕಿಸ್ಕೊಳ್ಳಿ: ಪಿಎಂ ಮೋದಿ!...

ನರೇಂದ್ರ ಮೋದಿ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನ 78 ನೇ ಸಂಚಿಕೆ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ. ಒಲಂಪಿಕ್‌ನಲ್ಲಿ ವೈಯಕ್ತಿಕವಾಗಿ ಚಿನ್ನದ ಪದಕ ಗೆದ್ದ ಭಾರತೀಯ ಯಾರು? ಎಂಬ ಪ್ರಶ್ನೆ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಇತ್ತೀಚೆಗಷ್ಟೇ ಕೊರೋನಾದಿಂದ ಮೃತಪಟ್ಟ ದಿಗ್ಗಜ ಅಥ್ಲೀಟ್‌ ಮಿಲ್ಖಾ  ಸಿಂಗ್ ಅವರನ್ನು ನೆನಪಿಸಿಕೊಂಡ ಮೋದಿ, ಅವರ ಜೀವನ ಎಲ್ಲರಿಗೂ ಪ್ರೇರಣೆ ಎಂದಿದ್ದಾರೆ.

5 ನಿಮಿಷದ ಅಂತರದಲ್ಲಿ 2 ಸ್ಫೋಟ, ಜಮ್ಮು ಏರ್‌ಫೋರ್ಟ್‌ನಲ್ಲಿ ಆತಂಕ!...

ಜಮ್ಮು ವಿಮಾನ ನಿಲ್ದಾಣದ ತಾಂತ್ರಿಕ ಕ್ಷೇತ್ರದಲ್ಲಿ ಭಾನುವಾರ ಸ್ಪೋಟ ಸಂಭವಿಸಿದೆ. ಭಾರತೀಯ ವಾಯುಪಡೆಯು ನಿರ್ವಹಿಸುತ್ತಿರುವ ವಿಮಾನ ನಿಲ್ದಾಣದ ಒಂದು ಭಾಗದಲ್ಲಿ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಸ್ಫೋಟವು ತಡರಾತ್ರಿ ಎರಡು ಗಂಟೆಗೆ ಸಂಭವಿಸಿದ್ದು, ಬಾಂಬ್ ನಿಷ್ಕ್ರಿಯ ದಳ ಸ್ಫೋಟ ಸಂಭವಿಸಿದ ಸ್ಥಳವನ್ನು ತಲುಪಿದೆ.

ಮೊದಲು ರಾಜ್ಯ ಸ್ಥಾನಮಾನ, ನಂತರ ಚುನಾವಣೆ: ಕಾಶ್ಮೀರ ವಿಪಕ್ಷಗಳ ಪಟ್ಟು!...

ಜಮ್ಮು-ಕಾಶ್ಮೀರದ ಭವಿಷ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಸಭೆ ನಡೆಸಿದ ಬಳಿಕವೂ ವಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ಮುಂದುವರಿಸಿವೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರಳುವವವರೆಗೆ ತಾವು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಸುದೀಪ್ ಎದುರೇ ಜಗಳ; ಪ್ರಶಾಂತ್ ಡರ್‌ಪೋಕ್‌ ಅಂತೆ, ನಿಧಿ ಕೊಚ್ಚೆ ಅಂತ.....

ವೀಕೆಂಡ್‌ನಲ್ಲಿ ವಾರದ ಕಥೆಯನ್ನು ಸ್ಪರ್ಧಿಗಳ ಜೊತೆ ಸುದೀಪ್ ಚರ್ಚಿಸುವಾಗ ಟೇಬಲ್‌ ಮೇಲಿದ್ದ ಚಂಬನ್ನು ತೋರಿಸಿ  ಇದು ಯಾರಿಗೆ ಸೇರಬೇಕು ಎಂದು ಸ್ಪರ್ಧಿಗಳನ್ನು ಕೇಳಲಾಗುತ್ತದೆ. ನಿಧಿ ಕೈ ಸೇರಿದ ಚಂಬು ಪ್ರಶಾಂತ್‌ಗೆ ತಲುಪಿಸುತ್ತಾರೆ. ಈ ವೇಳೆ ಒಬ್ಬರಿಗೊಬ್ಬರು ಕೊಟ್ಟ ಕಾರಣ ಕೇಳಿ ವೀಕ್ಷಕರು ಶಾಕ್ ಆಗಿದ್ದಾರೆ. ಆಲ್ಲದೇ ಸುದೀಪ್ ಎದುರೇ ಮಾತಿನ ಚಕಮಕಿಯೂ ನಡೆಯುತ್ತದೆ. 

ಮಾಜಿ ಬಾಯ್‌ಫ್ರೆಂಡ್ ಮದುವೆಯಾಬೇಕಿದ್ದವಳ ನಗ್ನ ಪೋಟೋ ಶೇರ್ ಮಾಡಿದಳು!...

ಸಾಮಾಜಿಕ ಜಾಲತಾಣಕ್ಕೆ ತನ್ನ ಮಾಜಿ ಬಾಯ್ ಫ್ರೆಂಡ್ ಭಾವಿ ಪತ್ನಿಯ ನಗ್ನ ಪೋಟೋಗಳನ್ನು ಅಪ್ ಲೋಡ್ ಮಾಡಿದ ಆರೋಪದ ಮೇಲೆ  22 ವರ್ಷದ ಯುವತಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.

ಉದ್ದ ಕೂದಲಿನ ಮೈಕಲ್‌ ಜಾಕ್ಸನ್‌ ತಲೆಯಲ್ಲಿ ಒಂದೇ ಒಂದು ಕೂದಲಿರಲಿಲ್ಲ...

ಜಾಕ್ಸನ್ ತಮ್ಮ ವೃತ್ತಿಜೀವನದ ಮೊದಲ ಕೆಲವು ವರ್ಷಗಳಲ್ಲಿ ನೂರಾರು ಕಾಸ್ಮೆಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದರು ಇದಲ್ಲದೆ, ಅವರು ಅನೇಕ ಶಾಶ್ವತ ಕಾಸ್ಮೆಟಿಕ್ ಟ್ಯಾಟೂಗಳನ್ನು ಸಹ ಹೊಂದಿದ್ದರು. ಮೈಕೆಲ್ ಜಾಕ್ಸನ್ ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಶಾಕಿಂಗ್‌ ವಿಷಯಗಳು ಇಲ್ಲಿವೆ.

ಮೂರನೇ ಅಲೆಯಲ್ಲಿ ಈ ಕೆಲವು ಮಕ್ಕಳ ಬಗ್ಗೆ ವಿಶೇಷ ಕಾಳಜಿ ಬೇಕೇ ಬೇಕು...

ಮೂರನೇ ಅಲೆಯಲ್ಲಿ ಕೊರೋನಾ ಕಾಟ ಮಕ್ಕಳಿಗೆ ಜಾಸ್ತಿ ಎಂಬ ಎಚ್ಚರಿಕೆ ಇದೆ. ಹಾಗಾಗಿ ವಿಶೇಷ ಎಚ್ಚರ ವಹಿಸಬೇಕಾಗಿದೆ. ಸ್ಥೂಲಕಾಯದ ಮಕ್ಕಳ ಬಗ್ಗೆ ಮತ್ತಷ್ಟು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.

ಶ್ರೀದೇವಿ ಪುತ್ರಿ ಜಾಹ್ನವಿ ಟಾಪ್‌ಲೆಸ್ ಫೋಟೋಶೂಟ್ ವೈರಲ್!...

ಬಾಲಿವುಡ್‌ ಚಿತ್ರರಂಗದಲ್ಲಿ ಫೇಮ್‌ ಮತ್ತು ಹಣ ಸಂಪಾದಿಸುತ್ತಿದ್ದಂತೆ, ನಟಿ ಜಾಹ್ನವಿ ಕಪೂರ್ ವ್ಯಕ್ತಿತ್ವ ಬದಲಾಗಿದೆ. ಸದಾ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಜಾಹ್ನವಿ, ಇದ್ದಕ್ಕಿದ್ದಂತೆ ಟಾಪ್‌ಲೆಸ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಜಾಹ್ನವಿ  ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಬಾಲಿವುಡ್‌ ಸಿನಿಮಾ ಕಾಪಿ ಮಾಡ್ಬೇಡಿ: ಪಾಕ್ ಪ್ರಧಾನಿ ಸೂಚನೆ...

ಭಾರತದ ಹಿಂದಿ ಚಲನಚಿತ್ರೋದ್ಯಮವಾದ ಬಾಲಿವುಡ್ ಅನ್ನು ಕಾಪಿ ಮಾಡೋ ಬದಲು ಹೊಸ ಮತ್ತು ಮೂಲ ಸ್ವಂತ ವಿಚಾರದ ಸಿನಿಮಾಗಳನ್ನು ಮಾಡುವತ್ತ ಗಮನಹರಿಸಬೇಕೆಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ದೇಶದ ಚಲನಚಿತ್ರ ನಿರ್ಮಾಪಕರಿಗೆ ಸೂಚನೆ ಕೊಟ್ಟಿದ್ದಾರೆ.

ಮಾಜಿ ಸಿಎಂ ಫಡ್ನವೀಸ್ ಬಾಯಲ್ಲಿ ರಾಜಕೀಯ ನಿವೃತ್ತಿ ಮಾತು: ಕಾರಣ ಹೀಗಿದೆ! ...

ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಒಬಿಸಿ ಮೀಸಲಾತಿ ವಿಚಾರ ಸದ್ದು ಮಾಡುತ್ತಿದೆ. ರಾಜ್ಯದ ಬಿಜೆಪಿ ನಾಯಕರು ವಿವಿಧ ಸ್ಥಳಗಳಲ್ಲಿ ಮೀಸಲಾತಿ ಮತ್ತೆ ಜಾರಿಗೊಳಿಸುವಂತೆ ಒತ್ತಾಯಿಸಿ ರಸ್ತೆ ಬಂದ್ ನಡೆಸಿದ್ದಾರೆ. ಇವೆಲ್ಲದರ ನಡುವೆ ಮಹಾರಾಷ್ಟ್ರ ವಿಧಾನಸಭೆಯ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ತಮ್ಮ ಪಕ್ಷ ಅಧಿಕಾರಕ್ಕೇರಿದರೆ ಒಬಿಸಿ ಮೀಸಲಾತಿ ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಹೀಗಾಗದಿದ್ದರೆ ತಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುವುದಾಗಿಯೂ ಘೋಷಿಸಿದ್ದಾರೆ.

ಕಾಸರಗೋಡಿನ ಕೆಲ ಊರುಗಳ ಹೆಸರು ಮಲಯಾಳಂಗೆ, ಕೇರಳ ಸರ್ಕಾರಕ್ಕೊಂದು ಎಚ್‌ಡಿಕೆ ಮನವಿ...

ಕೇರಳ ಸರ್ಕಾರ ಕಾಸರಗೋಡು ಜಿಲ್ಲೆಯ ಊರುಗಳ ಕನ್ನಡ ಹೆಸರನ್ನು ಬದಲಾಯಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

Follow Us:
Download App:
  • android
  • ios