ಇನ್ನೂ ಎರಡು ದಿನ ಕಾಯಿರಿ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಮತ್ತೆ ಹೈಕಮಾಂಡ್ ಬಿಗ್ ಶಾಕ್ ಕೊಟ್ಟಿದೆ. ಇತ್ತ ಆಸೀಸ್ ಪ್ರವಾಸದಲ್ಲಿ ಕೆಎಲ್ ರಾಹುಲ್ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕಾಶಿಯಲ್ಲಿ ಮೋದಿ ದೇವ ದೀಪಾವಳಿಗೆ ಚಾಲನೆ ನೀಡಿದ್ದಾರೆ. ಮೊದಲ ಬಾರಿಗೆ ಬಾಟಾ ಶೋ ಕಂಪನಿ CEO ಆಗಿ ಭಾರತೀಯ ಆಯ್ಕೆ, ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ನಾಯಕರು ಸೇರಿದಂತೆ ಡಿಸೆಂಬರ್ 1ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
ದೆಹಲಿ ಗುರುದ್ವಾರ ಮಂದಿರ ಆಸ್ಪತ್ರೆಯಲ್ಲಿ ಅತೀ ಕಡಿಮೆ ದರದಲ್ಲಿ ಸೇವೆ; 50 ರೂ.ಗೆ MRI ಸ್ಕಾನ್!...
ಚುನಾವಣಾ ಪ್ರಚಾರದ ವೇಳೆ ಎಲ್ಲಾ ಪಕ್ಷಗಳು ಅತೀ ಕಡಿಮೆ ದರದಲ್ಲಿ ಆರೋಗ್ಯ ಸೇವೆ, ಬಡವರಿಗೆ ಉಚಿತ ಅನ್ನೋ ಘೋಷವಾಕ್ಯಗಳು ಮೊಳಗಿಸುವುದು ಸಾಮಾನ್ಯ. ಆದರೆ ಯಾವ ಸರ್ಕಾರಗಳು ಕಾರ್ಯಗತ ಮಾಡಿಲ್ಲ. ಇದೀಗ ದೆಹಲಿಯ ಗುರುದ್ವಾರ ಮಂದಿರ ಆಸ್ಪತ್ರೆ ಇದೀಗ ದೇಶದಲ್ಲೇ ಅತ್ಯಂತ ಕಡಿಮೆ ದರದಲ್ಲಿ ಆರೋಗ್ಯ ಸೇವೆ ನೀಡುತ್ತಿದೆ.
ಜೇಬಿನಲ್ಲಿದೆಯಾ ಹರಿದ 10 ರೂ. ನೋಟು, ಕ್ಷಣಾರ್ಧದಲ್ಲಿ ಶ್ರೀಮಂತರಾಗಿ!..._
ನೋಟು ಬ್ಯಾನ್ ಬಳಿಕ ಬಂದ 500 ಹಾಗೂ ಎರಡು ಸಾವಿರ ರೂಪಾಯಿ ನೋಟು ಸದ್ಯ ಎಲ್ಲರ ಬಳಿಯೂ ಇದೆ. ಹೀಗಿದ್ದರೂ ಅನೇಕ ಮಂದಿಗೆ ಹಳೆ ನೋಟುಗಳ ಮೇಲೆ ಭಾರೀ ಆಸಕ್ತಿ ಇದೆ. ಹೀಗಿರುವಾಗ ಈ ಹಳೆ ನೋಟುಗಳ ಮೂಲಕ ನೀವು ಹೇಗೆ ಶ್ರೀಮಂತರಾಗಬಹುದು? ಇಲ್ಲಿದೆ ಉತ್ತರ
ಕಾಶಿಯಲ್ಲಿ ಮೋದಿ ದೇವ ದೀಪಾವಳಿ: ಬೋಟ್‌ನಲ್ಲಿ ಪ್ರಧಾನಿ ಗಂಗಾಯಾನ!...
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿಯ ಗಂಗಾ ತಟದಲ್ಲಿ ಮೊದಲ ದೀಪ ಬೆಳಗುವ ಮೂಲಕ ‘ದೇವ ದೀಪಾವಳಿ’ಯ ದೀಪೋತ್ಸವಕ್ಕೆ ಚಾಲನೆ ನೀಡಿದರು.
ಬಾಟಾ ಕಂಪನಿಗೆ ಭಾರತೀಯ CEO; 126 ವರ್ಷ ಇತಿಹಾಸದಲ್ಲಿ ಇದೇ ಮೊದಲು!...
ಗೂಗಲ್ ಸೇರಿದಂತೆ ವಿಶ್ವದ ಪ್ರಮುಖ ಕಂಪನಿಗಳಿಗೆ ಇದೀಗ ಭಾರೀಯರೇ ಮುಖ್ಯಸ್ಥರಾಗಿದ್ದಾರೆ. ಹಲವು ಬಹುರಾಷ್ಟ್ರೀಯ ಕಂಪನಿಗಳು ಕೂಡ ಭಾರತೀಯರನ್ನೇ ಆಯ್ಕೆ ಮಾಡುತ್ತಿದೆ. ಇದೀಗ ಬಾಟಾ ಶೂ ಸರದಿ. ಇದೇ ಮೊದಲ ಬಾರಿಗೆ ಬಾಟಾ ಶೋ ಕಂಪನಿ CEO ಆಗಿ ಭಾರತೀಯ ಆಯ್ಕೆಯಾಗಿದ್ದಾರೆ.
ಡೇವಿಡ್ ವಾರ್ನರ್ ಗಾಯಗೊಂಡಿದ್ದು ಒಳ್ಳೇದಾಯ್ತು: ಕೆ.ಎಲ್ ರಾಹುಲ್ ಹೇಳಿಕೆಗೆ ಭಾರೀ ಟೀಕೆ...
ಆಸ್ಟ್ರೇಲಿಯಾ ತಂಡದ ಅರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಗಾಯಗೊಂಡಿದ್ದರ ಬಗ್ಗೆ ಕೆ.ಎಲ್. ರಾಹುಲ್ ನೀಡಿದ ಹೇಳಿಕೆ ಸಾಕಷ್ಟು ವಿವಾದಕ್ಕೆ ಗುರಿಯಾಗಿದೆ
ತೆಲುಗು ಬಿಗ್ ಬಾಸ್‌ನಲ್ಲಿ ಕಿಚ್ಚ ಸುದೀಪ್; ಕನ್ನಡದಲ್ಲಿ ಮಾತನಾಡಿದ ವಿಡಿಯೋ ವೈರಲ್!...
ಕಿಚ್ಚ ಸುದೀಪ್ ಕಳೆದ ವೀಕೆಂಡ್‌ನಲ್ಲಿ ತೆಲುಗು ಬಿಗ್ ಬಾಸ್ ಸೀಸನ್ 4ರಲ್ಲಿ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಅಕ್ಕಿನೇನಿ ನಾಗಾರ್ಜುನ್ ಜೊತೆ ಸ್ಟೇಜ್ ಹಂಚಿಕೊಂಡ ಕಿಚ್ಚ ಅಲ್ಲಿಯೂ ಸ್ಪರ್ಧಿಗಳ ಜೊತೆ ಕನ್ನಡದಲ್ಲಿ ಮಾತನಾಡಿದ್ದಾರೆ.
ಜಾರಕಿಹೊಳಿ ನೇತೃತ್ವ : ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ನಾಯಕರು...
ಬಿಜೆಪಿ ಮುಖಂಡರು ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
ನೋಕಿಯಾ ಲ್ಯಾಪ್‌ಟ್ಯಾಪ್! ಸ್ಮಾರ್ಟ್‌ಫೋನಲ್ಲಿ ಹೋದ ಮಾನ ಲ್ಯಾಪ್‌ಟಾಪಲ್ಲಿ ಸಿಗುತ್ತಾ?...
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಜಾಲತಾಣದಲ್ಲಿ ನೋಕಿಯಾ ಲ್ಯಾಪ್‌ಟ್ಯಾಪ್ ಸರ್ಟಿಫೈಡ್ ಮಾಡಿದ ಮಾಹಿತಿ ಬಹಿರಂಗವಾಗಿದೆ. ನೋಕಿಯಾ ಮೊಬೈಲ್ ಫೋನ್‌ಗಳ ಬಳಕೆ ನೆಚ್ಚಿನ ಮಾರುಕಟ್ಟೆಯಾದ ಭಾರತದಲ್ಲಿ ಈ ಲ್ಯಾಪ್‌ಟ್ಯಾಪ್‌ಗಳು ಬಿಡುಗಡೆಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಈ ಬಗ್ಗೆ ಕಂಪನಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಬಿಎಸ್ ಯಡಿಯೂರಪ್ಪಗೆ ಮತ್ತೆ ಹೈಕಮಾಂಡ್ ಬಿಗ್ ಶಾಕ್...!...
ಇನ್ನೂ ಎರಡು ದಿನ ಕಾಯಿರಿ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಮತ್ತೆ ಹೈಕಮಾಂಡ್ ಬಿಗ್ ಶಾಕ್ ಕೊಟ್ಟಿದೆ.
ಬಾಬಾ ಅಮ್ಟೆ ಮೊಮ್ಮಗಳು ಡಾ. ಶೀತಲ್ ಆತ್ಮಹತ್ಯೆ, ಕಾರಣ ನಿಗೂಢ!...
ಖ್ಯಾತ ಸಾಮಾಜಿಕ ಕಾರ್ಯಕರ್ತ ಬಾಬಾ ಆಮ್ಟೆ ಮೊಮ್ಮಗಳು ಡಾ. ಶೀತಲ್ ಆಮ್ಟೆ ಕಾರಜಿಗಿ(39) ಸೋಮವಾರದಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 1, 2020, 5:06 PM IST