ಗೆದ್ದವರೆಲ್ಲಾ ಮಂತ್ರಿಗಳಲ್ಲ; ಹೈಕಮಾಂಡ್ ಸಂಪುಟ ರಚನೆ ಆಟ ಬಲ್ಲವರಿಲ್ಲ...

ಬಿಎಸ್‌ವೈ ಸರ್ಕಾರದಲ್ಲಿ ಸಂಪುಟ ರಚನೆ ಕಸರತ್ತು ಶುರುವಾಗಿದೆ. ಆದರೆ ಇದು ಸುಲಭವಲ್ಲ. ಬಿಜೆಪಿ ಪಕ್ಷದೊಳಗೆ ಮಂತ್ರಿಗಿರಿಗಾಗಿ ಪೈಪೋಟಿ ಶುರುವಾಗಿದೆ. ಗೆದ್ದ ಅನರ್ಹರಿಗೆ ಖಾತೆ ಕೊಡುತ್ತೇವೆ ಎಂದು ಸಿಎಂ ಈ ಹಿಂದೆ ಹೇಳಿದ್ದು ಬಿಸಿತುಪ್ಪವಾಗಿದೆ. 

ಎಲ್ಲರಗೂ ಮಂತ್ರಿಗಿರಿ ಇಲ್ಲ ಎನ್ನುವ ಮಾತಿಗೆ ಪರೋಕ್ಷ ಎಚ್ಚರಿಕೆ ರವಾನಿಸಿದ ಅರ್ನಹ ಶಾಸಕ...

ಬೈ ಎಲೆಕ್ಷನ್ ನಲ್ಲಿ ಗೆದ್ದ ನೂತನ ಅರ್ಹ ಶಾಸಕರಲ್ಲಿ ಕೆಲವರಿಗೆ ಮಾತ್ರ ಸಚಿವ ಸ್ಥಾನ ನೀಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಇದ್ರಿಂದ ನೂತನ ಶಾಸಕರು ಆತಂಕದಲ್ಲಿದ್ದಾರೆ. ಇನ್ನು ಈ ಸುದ್ದಿ ಹಬ್ಬುತ್ತಿದ್ದಂತೆಯೇ ಅನರ್ಹ ಶಾಸಕ, ತಮ್ಮ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

PK ಟ್ವೀಟ್ ಬೆನ್ನಲ್ಲೇ ಬಿಹಾರ ಸಿಎಂ ಮಹತ್ವದ ಘೋಷಣೆ: ಬಿಜೆಪಿಗೆ ಆಘಾತ!

ಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪೌರತ್ವ ಕಾಯ್ದೆ ಹಾಗೂ NRC ಸಂಬಂಧ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ಪೌರತ್ವ ಕಾಯ್ದೆ ಸಂಬಂಧ ಮಾತುಕತೆ ನಡೆಯಬೇಕು. ಆದರೆ ಯಾವುದೇ ಕಾರಣಕ್ಕೂ NRC ಜಾರಿಗೊಳಿಸಲು ಬಿಡುವುದಿಲ್ಲ ಎಂದಿದ್ದಾರೆ. 

'ರಾಷ್ಟ್ರ ವಿರೋಧಿ ಘೋಷಣೆ ಕೂಗುವವರನ್ನು ಮುಲಾಜಿಲ್ಲದೇ ಜೈಲಿಗಟ್ಟುತ್ತೇವೆ'

ಪೌರತ್ವ ತಿದ್ದುಪಡಿ ಕಾಯ್ದೆಯ ಅನ್ವಯ ಪಾಕಿಸ್ತಾನದ ನಿರಾಶ್ರಿತರಿಗೆ ಭಾರತೀಯ ಪೌರತ್ವ ಕೊಡಿಸುವವರಗೆ ಕೇಂದ್ರ ಸರ್ಕಾರ ವಿರಮಿಸುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ದೃಢ ಸ್ವರದಲ್ಲಿ ಹೇಳಿದರು. ಇದೇ ವೇಳೆ ದೇಶ ವಿರೋಧಿ ಘೋಷಣೆ ಕೂಗುವವರನ್ನು ಜೈಲಿಗಟ್ಟುತ್ತೇವೆ ಎಂದಿದ್ದಾರೆ.

150 ಕೋಟಿ ಸಾಲ ಕೊಡಿಸೋದಾಗಿ ಬಿಜೆಪಿಗೆ ಮುಖಂಡಗೆ 4.25 ಕೋಟಿ ನಾಮ!

 ಬಿಜೆಪಿ ಮುಖಂಡ, ಮಾಜಿ ಪಾಲಿಕೆ ಸದಸ್ಯರೊಬ್ಬರಿಗೆ 150 ಕೋಟಿ ರು. ಸಾಲ ಕೊಡಿಸುವ ಆಮಿಷವೊಡ್ಡಿ ಶುಲ್ಕದ ಹೆಸರಿನಲ್ಲಿ ಬರೋಬ್ಬರಿ 4.25 ಕೋಟಿ ರು. ಹಣ ಪಡೆದು ಟೋಕಿ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬಿಸಿಸಿಐ ಅಧ್ಯಕ್ಷನ ಬಿಂದಾಸ್ ಸ್ಟೆಪ್, ದಾದಾಗೆ ಭಜ್ಜಿ ಸಾಥ್!

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲೂ ಭರ್ಜರಿ ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದಾರೆ. ಗಂಭೀರವಾಗಿ ಕಾಣಿಸುವ ಗಂಗೂಲಿ, ತಮ್ಮ ಖಡಕ್ ಮಾತಿನಿಂದಲೇ ತಿರುಗೇಟು ನೀಡುತ್ತಾರೆ. ಆದರೆ ದಾದಾ ಇದೀಗ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಗಂಗೂಲಿ ಜೊತೆ ಹರ್ಭಜನ್ ಸಿಂಗ್ ಕೂಡ ಡ್ಯಾನ್ಸ್‌ನಲ್ಲಿ ಮಿಂಚಿದ್ದಾರೆ. 

13ನೇ ವಯಸ್ಸಿಗೇ ಅತ್ಯಾಚಾರಕ್ಕೊಳಗಾದ ಕಿರುತರೆ ನಟಿ ಬಾಯ್ಬಿಟ್ಟ ಸತ್ಯ!

ಬಿಗ್‌ ಬಾಸ್‌ ಮನೆಯಲ್ಲಿ ನೀಡಲಾಗಿದ್ದ ಟಾಸ್ಕ್‌ನಲ್ಲಿ ತಮ್ಮ ಜೀವನದ ಕರಾಳ ಘಟನೆಯೊಂದನ್ನು ಕಿರುತೆರೆ ನಟಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. 13ನೇ ವಯಸ್ಸಿಗೇ ಅತ್ಯಾಚಾರಕ್ಕೊಳಗಾದ ಕಹಿ ಘಟನೆಯನ್ನು ತೆರೆದಿಟ್ಟಿದ್ದಾರೆ.

ಮುಸ್ಲಿಂ ರಾಷ್ಟ್ರ ಇಂಡೋನೇಷ್ಯಾದಲ್ಲಿ ಬೃಹತ್‌ ಗಣೇಶ ವಿಗ್ರಹ ಪತ್ತೆ!

ಹಿಂದು ಹಾಗೂ ಬೌದ್ಧ ಧರ್ಮದ ಪಾರಂಪರಿಕ ಕ್ಷೇತ್ರಗಳನ್ನು ಒಳಗೊಂಡಿರುವ ಇಂಡೋನೇಷ್ಯಾದ ಸೆಂಟ್ರಲ್‌ ಜಾವಾದಲ್ಲಿ ಬೃಹತ್‌ ಗಾತ್ರದ ಗಣಪತಿ ವಿಗ್ರಹವೊಂದು ಪತ್ತೆಯಾಗಿದೆ. ಸಾಂಸ್ಕೃತಿಕ ಪಾರಂಪರಿಕ ಕ್ಷೇತ್ರಗಳ ರಕ್ಷಣಾ ಸಂಸ್ಥೆ(ಬಿಪಿಸಿಬಿ)ಯು ಸೆಂಟ್ರಲ್‌ ಜಾವಾದ ವೊನೊಸೊಬೊ ಜಿಲ್ಲೆಯ ಡೀಂಗ್‌ ವೆಟನ್‌ ಗ್ರಾಮದಲ್ಲಿ ಉತ್ಖನನ ನಡೆಸುತ್ತಿದ್ದ ವೇಳೆ ಭೂಮಿಯೊಳಗೆ ಹೂತು ಹೋಗಿದ್ದ ಈ ಭಾರೀ ದೊಡ್ಡದಾದ ಗಣೇಶನ ಪ್ರತಿಮೆ ಪತ್ತೆಯಾಗಿದೆ.

ಬ್ರೈನ್ ಟ್ಯೂಮರ್‌; ಹೆಣ್ಣು ಮಗಳ ಸಹಾಯಕ್ಕೆ ಮುಂದಾದ ಡಿ ಬಾಸ್ ಅಭಿಮಾನಿಗಳು!


ಸ್ಟಾರ್ ಹುಟ್ಟುಹಬ್ಬ ಅಂದ್ಮೆಲೆ ಅಲ್ಲಿ ಜಾತ್ರೆ ಹಾಗೂ ಹಬ್ಬದ ಸಂಭ್ರಮ ಮನೆ ಮಾಡೋದು ಕಾಮನ್ ವಿಚಾರ. ಅದರಂತೆ ದರ್ಶನ್ ಹುಟ್ಟುಹಬ್ಬದಲ್ಲಿಯೂ ಸಂಭ್ರಮ ಶುರುವಾಗಿದೆ. ಬರ್ತಡೇಯನ್ನು ಅರ್ಥಪೂರ್ಣವಾಗಿ ಆಚರಿಸಲು ಈಗಾಗಲೇ ದರ್ಶನ್ ಅಭಿಮಾನಿ ಸಂಘಟನೆಗಳು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿವೆ

ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2019-20ನೇ ಸಾಲಿಗೆ ಈ ಕೆಳಕಂಡ ಯೋಜನೆಗಳಡಿ ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.