ಬೆಂಗ​ಳೂರು :  ಕಡೆಗೂ ರಾಜ್ಯ ಸಚಿವ ಸಂಪುಟ ವಿಸ್ತ​ರ​ಣೆಗೆ ಮಹೂರ್ತ ನಿಗ​ದಿ​ಯಾ​ಗಿದ್ದು, ಬೆಳ​ಗಾವಿ ವಿಧಾ​ನ​ಸಭಾ ಅಧಿ​ವೇ​ಶನ ಮುಕ್ತಾ​ಯ​ಗೊಂಡ ಮಾರನೇ ದಿನ ಅಂದರೆ ಡಿ.22ರಂದು ಬಹು ನಿರೀ​ಕ್ಷಿತ ಸಂಪುಟ ವಿಸ್ತ​ರಣೆ ಮಾಡಲು ಬುಧ​ವಾರ ನಡೆದ ಸಮ​ನ್ವಯ ಸಮಿತಿ ಸಭೆ ತೀರ್ಮಾ​ನಿ​ಸಿ​ದೆ.

ಆಪ​ರೇ​ಷನ್‌ ಕಮಲದ ಭೀತಿ ಹಾಗೂ ಸಚಿವ ಸ್ಥಾನಾ​ಕಾಂಕ್ಷಿಗಳ ಒತ್ತಡ ತೀವ್ರ​ಗೊಂಡಿದ್ದ ಹಿನ್ನೆ​ಲೆ​ಯಲ್ಲಿ ಬೆಳ​ಗಾವಿ ಅಧಿ​ವೇ​ಶ​ನಕ್ಕೆ ಮುನ್ನ ಸಂಪುಟ ವಿಸ್ತ​ರಣೆ ಮಾಡ​ಬೇಕೋ ಬೇಡವೋ ಎಂಬ ತೀವ್ರ​ ಗೊಂದಲ ಉಭಯ ಪಕ್ಷ​ಗಳ ನಾಯ​ಕ​ರಿಗೂ ಇತ್ತು. ಅಂತಿ​ಮ​ವಾಗಿ ಬೆಳ​ಗಾವಿ ಅಧಿ​ವೇ​ಶನ ಮುಗಿದ ನಂತ​ರವೇ ಸಂಪುಟ ವಿಸ್ತ​ರಣೆ ಸೂಕ್ತ ಎಂಬ ತೀರ್ಮಾ​ನಕ್ಕೆ ಸಭೆ ಬಂದಿದೆ.

ಸಭೆಯ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಸಮ​ನ್ವಯ ಸಮಿತಿ ಅಧ್ಯಕ್ಷ ಸಿದ್ದ​ರಾ​ಮಯ್ಯ ಅವರು, ಡಿ.22ರಂದು ಸಚಿವ ಸಂಪುಟ ವಿಸ್ತ​ರಣೆ ಮಾಡ​ಲಾ​ಗು​ವುದು, ಅಂದೇ ನಿಗಮ ಮಂಡಳಿ ಅಧ್ಯಕ್ಷರ ನೇಮ​ಕ ಹಾಗೂ ಆರು ಮಂದಿ ಸಂಸ​ದೀಯ ಕಾರ್ಯ​ದ​ರ್ಶಿ​ಗಳ ನೇಮ​ಕ​ ಸಹ ಮಾಡ​ಲಾ​ಗು​ವುದು. ಈ ಹಿಂದೆ ಒಪ್ಪಂದ ಮಾಡಿ​ಕೊಂಡಂತೆ ಕಾಂಗ್ರೆಸ್‌ನ 20 ಹಾಗೂ ಜೆಡಿ​ಎಸ್‌ನ 10 ಮಂದಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ​ ನೀಡಿ ಡಿ.22ರಂದು ಅಧಿ​ಸೂ​ಚನೆ ಹೊರ​ಡಿ​ಸ​ಲಾ​ಗು​ವುದು. ಬಹು​ತೇಕ ಉಭಯ ಪಕ್ಷದ ಶಾಸ​ಕ​ರಿಗೇ ಈ ಸ್ಥಾನ​ಗ​ಳನ್ನು ನೀಡ​ಲಾ​ಗು​ವುದು ಎಂದು ಅವರು ಹೇಳಿ​ದ​ರು.

ವಾಸ್ತ​ವ​ವಾಗಿ ಸಚಿವ ಸಂಪುಟ ವಿಸ್ತ​ರ​ಣೆ​ಯನ್ನು ಡಿ.9ರಂದೇ ಮಾಡುವ ಉದ್ದೇ​ಶ​ವನ್ನು ಹೊಂದಿ​ದ್ದೆವು. ಆದರೆ, ಡಿ.10ರಂದೇ ಬೆಳ​ಗಾವಿ ಅಧಿ​ವೇ​ಶನ ಆರಂಭ​ಗೊ​ಳ್ಳ​ಲಿ​ರು​ವು​ದ​ರಿಂದ ಸಮಯ ಬಹಳ ಕಡಿ​ಮೆ​ಯಿದೆ. ಹೀಗಾಗಿ ಬೆಳ​ಗಾವಿ ಅಧಿ​ವೇ​ಶನ ಮುಕ್ತಾ​ಯ​ಗೊಂಡ ಕೂಡಲೇ ಸಂಪುಟ ವಿಸ್ತ​ರಣೆ ಮಾಡಲು ತೀರ್ಮಾ​ನಿ​ಸ​ಲಾ​ಯಿತು ಎಂದು ಅವರು ಹೇಳಿ​ದ​ರು.

ಸಚಿವ ಸ್ಥಾನ, ನಿಗಮ ಮಂಡಳಿ ಸ್ಥಾನ ಹಾಗೂ ಸಂಸ​ದೀಯ ಕಾರ್ಯ​ದರ್ಶಿ ಹುದ್ದೆ ಸೇರಿ​ದಂತೆ ಎಲ್ಲಾ ರೀತಿಯ ಅಧಿ​ಕಾ​ರವನ್ನು ಕಾಂಗ್ರೆಸ್‌ ಹಾಗೂ ಜೆಡಿ​ಎಸ್‌ ನಡುವೆ ಮೂರನೇ ಒಂದು ಹಾಗೂ ಮೂರನೇ ಎರಡು ಅನು​ಪಾ​ತ​ದಲ್ಲಿ ಹಂಚಿ​ಕೊ​ಳ್ಳ​ಲಾ​ಗು​ವುದು ಎಂದು ಈ ಸಂದ​ರ್ಭ​ದಲ್ಲಿ ಅವರು ಹೇಳಿ​ದ​ರು.

ಡಿ.9ರಂದೇ ಸಂಪುಟ ವಿಸ್ತರಣೆ ಉದ್ದೇಶವಿತ್ತು

ವಾಸ್ತ​ವ​ವಾಗಿ ಡಿ.9ರಂದು ಸಚಿವ ಸಂಪುಟ ವಿಸ್ತ​ರಣೆ ನಡೆ​ಸ​ಬೇಕು ಎಂಬ ಉದ್ದೇಶ ನಮಗೆ ಇತ್ತು. ಆದರೆ, ಡಿ.10ರಿಂದಲೇ ಬೆಳ​ಗಾವಿ ಅಧಿ​ವೇ​ಶನ ಆರಂಭ​ವಾ​ಗ​ಲಿ​ದೆ. ಇಷ್ಟುಕಡಿಮೆ ಅವಧಿ ಇರು​ವಾಗ ಸಂಪುಟ ವಿಸ್ತ​ರಣೆ ಬೇಡ ಎಂದು ಅಧಿ​ವೇ​ಶನ ಮುಕ್ತಾ​ಯಗೊಂಡ ಕೂಡಲೇ, ಅಂದರೆ ಡಿ.22ರಂದು ಸಂಪುಟ ವಿಸ್ತ​ರಣೆ ಮಾಡಲು ಉಭಯ ಪಕ್ಷ​ಗಳ ನಾಯ​ಕರು ತೀರ್ಮಾ​ನಿ​ಸಿ​ದ್ದೇವೆ. ಅಂದೇ 30 ನಿಗಮ ಮಂಡಳಿ ಅಧ್ಯ​ಕ್ಷರು ಹಾಗೂ ಸಂಸ​ದೀಯ ಕಾರ್ಯ​ದ​ರ್ಶಿ ಹುದ್ದೆ ನೇಮ​ಕವೂ ನಡೆ​ಯ​ಲಿ​ದೆ.

- ಸಿದ್ದ​ರಾ​ಮಯ್ಯ, ಸಮ​ನ್ವಯ ಸಮಿತಿ ಅಧ್ಯ​ಕ್ಷ

ಡಿ.8ರ ಶಾಸಕಾಂಗ ಸಭೆ ಮುಂದೂಡಿಕೆ

ಕುತೂ​ಹ​ಲ​ಕಾರಿ ಸಂಗ​ತಿ​ಯೆಂದರೆ, ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಅವರ ಪಾಲ್ಗೊ​ಳ್ಳು​ವಿ​ಕೆ​ಯೊಂದಿಗೆ ಡಿ.8ರಂದು ನಡೆ​ಯ​ಬೇ​ಕಿದ್ದ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ಸಭೆ​ಯನ್ನು ಹಠಾತ್‌ ಮುಂದೂ​ಡ​ಲಾ​ಗಿದೆ. ಈ ಬಗ್ಗೆ ಸಮ​ಜಾ​ಯಿಷಿ ನೀಡಿದ ಸಿದ್ದ​ರಾ​ಮಯ್ಯ, ಶಾಸ​ಕಾಂಗ ಪಕ್ಷದ ಸಭೆ​ಯನ್ನು ಬೆಳ​ಗಾವಿ ಅಧಿ​ವೇ​ಶ​ನದ ವೇಳೆ ನಡೆ​ಸ​ಲಾ​ಗು​ವುದು ಎಂದರು. 

ಆದರೆ, ಈ ಮುಂದೂ​ಡಿ​ಕೆಗೆ ಕಾರ​ಣ​ವೇನು ಮತ್ತು ಬೆಳ​ಗಾ​ವಿ​ಯಲ್ಲಿ ನಡೆ​ಯುವ ಸಂಪುಟ ಸಭೆ​ಯಲ್ಲಿ ಕುಮಾ​ರ​ಸ್ವಾಮಿ ಪಾಲ್ಗೊ​ಳ್ಳು​ವರೋ ಇಲ್ಲವೋ ಎಂಬು​ದನ್ನು ಅವರು ಸ್ಪಷ್ಟ​ಪ​ಡಿ​ಸ​ಲಿ​ಲ್ಲ. ಇದೇ ವೇಳೆ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಜೆಡಿ​ಎ​ಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯ​ದರ್ಶಿ ಡ್ಯಾನೀಶ್‌ ಅಲಿ ಅವರು, ಸಚಿವ ಸಂಪುಟ ವಿಸ್ತರಣೆಯನ್ನು ಡಿ.22ರಂದು ನಡೆ​ಸುವ ಬಗ್ಗೆ ಜೆಡಿ​ಎಸ್‌ ವರಿಷ್ಠ ಎಚ್‌.ಡಿ.ದೇವೇ​ಗೌಡ ಹಾಗೂ ಎಐ​ಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವ​ರೊಂದಿಗೆ ಸಮಾ​ಲೋ​ಚನೆ ನಡೆ​ಸಿದ ನಂತ​ರವೇ ತೀರ್ಮಾ​ನಿ​ಸ​ಲಾ​ಗಿದೆ ಎಂದು ಹೇಳಿ​ದ​ರು.