ನವದೆಹಲಿ(ಡಿ.09) ಉಪಚುನಾವಣೆಯಲ್ಲಿ ಬಿಜೆಪಿ ಹದಿನೈದರಲ್ಲಿ ಹನ್ನೆರಡು ಸ್ಥಾನದಲ್ಲಿ ಗೆದ್ದು ಬೀಗಿದೆ. ಬಿಎಸ್ ವೈ ಅವರ ಈ ಸಾಧನೆಯನ್ನು ಅವರ ಗೆಳೆಯ ಸುಬ್ರಮಣಿಯನ್ ಸ್ವಾಮಿ ಹಾಡಿ ಹೊಗಳಿದ್ದಾರೆ. 

ನನ್ನ ಸಹೋದ್ಯೋಗಿ, ಸ್ನೇಹಿತ ಬಿಎಸ್ ಯಡಿಯೂರಪ್ಪ ಕರ್ನಾಟಕದ ಮಹತ್ವದ ಚುನಾವಣೆಯಲ್ಲಿ ಸಾಕಷ್ಟು ಸ್ಥಾನ ಗೆದ್ದಿದ್ದಾರೆ. ಎನ್ನುವ ಮೂಲಕ ಬಿಎಸ್ ಯಡಿಯೂರಪ್ಪ ಅವರನ್ನು ಸ್ವಾಮಿ ಕೊಂಡಾಡಿದ್ದಾರೆ.

ಬದಲಾದ ರಾಜಕಾರಣದ ವಾತಾವರಣದಲ್ಲಿ ಕರ್ನಾಟಕದ ಹದಿನೈದು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಡಿಸೆಂಬರ್ 5 ರಂದು ಮತದಾನ ನಡೆದು ಇಂದು ಅಂದರೆ ಡಿಸೆಂಬರ್ 9  ರಂದು ಫಲಿತಾಂಶ ಪ್ರಕಟವಾಗಿದೆ.

ನನಗೂ ಸಚಿವ ಸ್ಥಾನ ಕೊಡಿ, ಬಿಎಸ್ ವೈ ಮಾನಸ ಪುತ್ರ

ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಬಿಎಸ್ ಯಡಿಯೂರಪ್ಪ ಅವರನ್ನು ಹೊಗಳಿರುವುದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಸ್ವಾಮಿ ಅವರ ಹೊಗಳಿಕೆಗೆ ಯಡಿಯೂರಪ್ಪ ಸಹ ಅಭಿನಂದನೆ ಸಲ್ಲಿಸಿದ್ದಾರೆ.