ಬೆಳಗಾವಿ [ಆ.01]:   ರಾಜ್ಯದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕ್ಷೇತ್ರದಲ್ಲಿ ಉಪ ಚುನಾವಣೆ ಶೀಘ್ರವೇ ನಡೆಯಲಿದ್ದು ನಾಯಕರು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. 

ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಒಂದು ಹಂತದಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮವೂ ಆಗಿದೆ.  ಹೈ ಕಮಾಂಡ್ ಮಟ್ಟದಲ್ಲಿ ಫೈನಲ್ ಆಗಬೇಕಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.  

ಇನ್ನು ಅನರ್ಹ ಶಾಸಕರ ಬಗ್ಗೆ ಪ್ರಸ್ತಾಪಿಸಿದ ಜಾರಕಿಹೊಳಿ ಕಾಂಗ್ರೆಸ್ ಬಗ್ಗೆ ಏನೇ ಹೇಳಿದರೂ ಅದು ಈಗ ಮುಗಿದು ಹೋದ ಅಧ್ಯಾಯವಾಗಿದೆ. ಬಿಟ್ಟು ಹೋಗಿ ಕೈ ಮೇಲೆ ಆರೋಪ ಮಾಡುವುದು ಸರಿಯಲ್ಲ. ಅನರ್ಹ ಶಾಸಕರು ಎನೇ ಹೇಳಿದರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು. 

ಅನರ್ಹರಿಗೆ ಮತ್ತೊಂದು ಶಾಕ್ ನೀಡಲು ಮುಂದಾದ ಕಾಂಗ್ರೆಸ್!

ಬೆಳಗಾವಿಯಲ್ಲಿ ಮೂರು ಕ್ಷೇತ್ರ ಗೆಲ್ಲಲು ತಯಾರಿ ನಡೆದಿದೆ.  ಗೋಕಾಕ್ ನಲ್ಲಿ ಸದ್ಯ ಲಖನ್ ಜಾರಕಿಹೊಳಿ ಮಾತ್ರ ಆಕಾಂಕ್ಷಿಯಾಗಿದ್ದಾರೆ. ಅಥಣಿ, ಕಾಗವಾಡ ಕ್ಷೇತ್ರದಲ್ಲಿ ಮೂರು ಮೂರು ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ ಎಂದರು. 

ನಡು ರಸ್ತೆಯಲ್ಲಿ ಡಿಕೆಶಿಗೆ ತಗಲಾಕ್ಕೊಂಡ ಮುನಿರತ್ನ: ಬಾಯ್ಬಿಟ್ರು ಕಟು 'ಸತ್ಯ'!

ಇನ್ನು ಮೈತ್ರಿ ಸರ್ಕಾರ ಪತನವಾಗಲು ಒಂದು ವಸ್ತು ಕಾರಣ ಎಂದು ಹೇಳಿದ್ದ ಜಾರಕಿಹೊಳಿ ಅವರಿಗೆ ಆ ವಸ್ತು ಯಾವುದು ಎಂದು ಕೇಳಿದ್ದಕ್ಕೆ  ಸಮಯ ಬಂದಾಗ ವಸ್ತುವಿನ ಬಗ್ಗೆ ತಿಳಿಸುತ್ತೇನೆ ಎಂದರು.