ಬೆಂಗಳೂರು[ನ.06] ದೇವೇಗೌಡರ ನಿವಾಸಕ್ಕೆ ಸಚಿವ ಸ್ಥಾನದಿಂದ ವಂಚಿತವಾರಿದ್ದ ಪ್ರಮುಖ ನಾಯಕರು ದೌಡಾಯಿಸಿದ್ದಾರೆ. ಶಿವಾಜಿನಗರದ ಶಾಸಕ ರೋಶನ್ ಬೇಗ್ ದೇವೇಗೌಡರ ನಿವಾಸಕ್ಕೆ ತೆರಳಿ ಚರ್ಚೆ ಮಾಡಿದ್ದಾರೆ.

ಸಂಜೆ ವೇಳೆಗೆ ಪರಿಸ್ಥಿತಿ ಮತ್ತಷ್ಟು ಬದಲಾಗಲಿದೆ. ಮಹೇಶ್ ರಾಜೀನಾಮೆಯಿಂದ ತೆರವಾಗಿರುವ ಪ್ರಾಥಮಿಕ ಶಿಕ್ಷಣ, ಸಿಎಂ ಬಳಿಯೇ ಇರುವ ಇಂಧನ ಮತ್ತು ವಾರ್ತಾ ಇಲಾಖೆಯ ಹಂಚಿಕೆ ಬಗ್ಗೆ ಲಾಬಿ ಆರಂಭವಾಗಿದೆ. ಎಲ್ಲದಕ್ಕೂ ದೇವೇಗೌಡರು ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತೀರ್ಮಾನವೇ ಅಂತಿಮವಾಗಲಿದೆ.

ಸಚಿವ ಸ್ಥಾನದ ರೇಸ್ ನಲ್ಲಿ ರೋಶನ್ ಬೇಗ್, ಎಚ್ ಕೆ ಪಾಟೀಲ್, ಎಂಬಿ ಪಾಟೀಲ್, ಬಿಸಿ ಪಾಟೀಲ್, ಬಸವರಾಜ ಹೊರಟ್ಟಿ, ಡಾ.ಕೆ ಸುಧಾಕರ್ ಮತ್ತೆ ಕಾಣಿಸಿಕೊಂಡರೆ ಆಶ್ಚರ್ಯ ಇಲ್ಲ.