ಬೆಂಗಳೂರು[ನ.23] ಮಾಧ್ಯಮಗಳ ಜತೆ ಸದಾ ಮಾತನಾಡುತ್ತಿದ್ದ ಮಾಜಿ ಸಚಿವೆ, ಸಂಸದೆ, ರಾಜ್ಯದ ಪ್ರಭಾವಿ ನಾಯಕಿ ಶೋಭಾ ಕರಂದ್ಲಾಜೆ ಎಲ್ಲಿ ಹೋದರು? ಅವರು ಈಗ ಏನು ಮಾಡುತ್ತಿದ್ದಾರೆ? ಇದು ಅವರ ರಾಜಕಾರಣದ ಜೀವನಕ್ಕೆ ಸಂಬಂಧಿಸಿದ ಸುದ್ದಿ ಅಲ್ಲ. ಇದು ಅವರ ವೈಯಕ್ತಿಕ ಬದುಕಿಗೆ ಸಂಬಂಧಿಸಿದ ಸುದ್ದಿ.

ಹೌದು ಮಾಜಿ  ಸಚಿವೆ ಶೋಭಾ ಕರಂದ್ಲಾಜೆ ಮನಸ್ಸು ಆಧ್ಯಾತ್ಮದ ಕಡೆ ವಾಲಿದೆಯಾ? ಮಾಂಸಾಹಾರವನ್ನು ಶೋಭಾ ತ್ಯಜಿಸಿರುವುದೇಕೆ? ಶೋಭಾ ಕರಂದ್ಲಾಜೆ ರಾಜಕಾರಣದಿಂದ ದೂರವಾಗುತ್ತಾರಾ? ಎಂಬೆಲ್ಲ ಪ್ರಶ್ನೆಗಳು ಮೂಡಿದೆ.

ಪರ ಊರಿಗೆ ತೆರಳುವ ಶೋಭಾ ಮಠ-ಮಂದಿರಗಳಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಇಂಕಾ ನಾಗರಿಕತೆಯ ಜನರು ಸೂರ್ಯ ದೇವನ ಪೂಜೆ ಮಾಡುವ ಜಾಗಕ್ಕೂ ತೆರಳಿದ್ದರು.  ತಮ್ಮ ಗುರುಗಳಾದ ತುಮಕೂರಿನ ಚಿಕ್ಕ ಗುಬ್ಬಿಯ ಕೃಷ್ಣಾನಂದ ಗುರುಗಳನ್ನು ಭೇಟಿ ಮಾಡುತ್ತಿದ್ದ ಶೋಭಾ ಇದೀಗ ಅವರ ಶಿಷ್ಯ ನ್ಯೂಜಿಲೆಂಡ್ ನ ಸುಲಂತ್ರಾ ಕಿಂಗ್ ಮಾರ್ಗದರ್ಶನದಲ್ಲಿ ಆಧ್ಯಾತ್ಮದ  ಮಾರ್ಗದರ್ಶನ ಪಡೆದುಕೊಳ್ಳುತ್ತಾರೆ.