ಬೆಂಗಳೂರು[ಫೇ. 17]  ಪಕ್ಷದ ಶಾಸಕಾಂಗ ಸಭೆಗೆ ಹಾಜರಾಗದೇ ನೇರವಾಗಿ ವಿಧಾನಸಭೆಗೆ ಹೋಗಿ ಜಿಟಿ ದೇವೇಗೌಡ್ರು ಮತ ಚಲಾಯಿಸಿ, ಜೆಡಿಎಸ್ ವರಿಷ್ಠರ ಕೆಂಗಣ್ಣಿಗೆ ಗುರಿಯಾದರು. ಬಜೆಟ್ ಅಧೀವೇಶನದಲ್ಲಿ ರಾಜ್ಯಪಾಲರ ಭಾಷಣ. ಕೌಟುಂಬಿಕ ಕಲಹಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಗಾಯಕಿ. ಕೇಂದ್ರ ಸಚಿವರಿಗೆ ಎಚ್ಚರಿಕೆ ನೀಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ.. ಖಾಲಿ ಜಾಗಕ್ಕಾಗಿ ಚಿಕ್ಕಬಳ್ಳಾಪುರ ಮಹಿಳೆಯರ ಜಗಳ... ಫೆಬ್ರವರಿ 17ರ ಟಾಫ್ 10 ಸುದ್ದಿಗಳು..

ಕೇಂದ್ರ ಸಚಿವರಿಗೆ ಖಡಕ್ ಎಚ್ಚರಿಕೆ ನೀಡಿದ ನಡ್ಡಾ

ಉತ್ತರ ಪ್ರದೇಶದ ದೇವಬಂದ್‌ ಪಟ್ಟಣವು ಭಯೋತ್ಪಾದನೆಯ ಗಂಗೋತ್ರಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಎಚ್ಚರಿಕೆ ನೀಡಿದ್ದಾರೆ.


ಅಧಿವೇಶನದ ಸಂದರ್ಭ ಜೆಡಿಎಸ್‌ಗೆ ಗುಮ್ಮಿದ ಜಿಟಿ ದೇವೇಗೌಡ

ಪಕ್ಷದ ಶಾಸಕಾಂಗ ಸಭೆಗೆ ಹಾಜರಾಗದೇ ನೇರವಾಗಿ ವಿಧಾನಸಭೆಗೆ ಹೋಗಿ ಜಿಟಿ ದೇವೇಗೌಡ್ರು ಮತ ಚಲಾಯಿಸಿ, ಜೆಡಿಎಸ್ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಪಾತ್ರ ಮಾಡಲೇಬೇಕು ಎಂದು ಹಠತೊಟ್ಟ ಚಾಲೆಂಜಿಂಗ್ ಸ್ಟಾರ್

ಸಂಗೊಳ್ಳಿ ರಾಯಣ್ಣ, ಧುರ್ಯೋಧನ, ವೀರ ಮದಕರಿ ನಾಯಕ ನಂತರ ಇದೀಗ ದರ್ಶನ್ ಅಂತದ್ದೇ ಐತಿಹಾಸಿಕ ಚಿತ್ರ ಮಾಡಬೇಕು ಅಂತಿದ್ದಾರಂತೆ. ಹಾಗಾದರೆ ಯಾವುದು ನೋಡಿಕೊಂಡು ಬನ್ನಿ

ಖಾಲಿ ನಿವೇಶನಕ್ಕಾಗಿ ಚಿಕ್ಕಬಳ್ಳಾಪುರದಲ್ಲಿ ಜಡೆ ಜಗಳ

ಖಾಲಿ ನಿವೇಶನಕ್ಕಾಗಿ ಮಹಿಳೆಯರು ಕಾದಾಡಿಕೊಂಡಿದ್ದಾರೆ. ಮಹಿಳೆಯರ ಹೊಡೆದಾಟದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಿಳೆಯರು ಹೊಡೆದಾಡಿಕೊಂಡಿರುವ ದೃಶ್ಯ ಫುಲ್ ವೈರಲ್ ಆಗಿದೆ.

ಹಿಂದಿಯಲ್ಲೇ ರಾಜ್ಯಪಾಲರ ಭಾಷಣಕ್ಕೆ ವಿರೋಧ

2015ರ ಫೆಬ್ರುವರಿಯಲ್ಲಿ ನಡೆದ ಜಂಟಿ ಅಧಿವೇಶನದಲ್ಲಿ ಮೊದಲ ಬಾರಿಗೆ ರಾಜ್ಯಪಾಲ ವಜುಭಾಯಿ ವಾಲಾ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದರು. ಹಿಂದಿಯಲ್ಲಿ ಮಾತನಾಡಿದ ಕಾರಣ ಪ್ರತಿಪಕ್ಷಗಳಿಂದ ವಿರಿಧ ವ್ಯಕ್ತವಾಗಿದೆ. 

ಸಿಎಂ ಭೇಟಿ ಮಾಡಿದ ಕಂಬಳ ವೀರ ಶ್ರೀನಿವಾಸ ಗೌಡ

ಬೋಲ್ಟ್ ವೇಗದಲ್ಲಿ ಓಡಿ ಇತಿಹಾಸ ಸೃಷ್ಟಿಸಿದ್ದ ಕಂಬಳವೀರ ಶ್ರೀನಿವಾಸ ಗೌಡ ಸೋಮವಾರ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. 

 

ಮನನೊಂದ ಸ್ಯಾಂಡಲ್ ವುಡ್ ಗಾಯಕಿ ಆತ್ಮಹತ್ಯೆಗೆ ಶರಣು

ಕೌಟುಂಬಿಕ ಕಲಹಕ್ಕೆ ಬೇಸತ್ತು ಗಾಯಕಿ ಸುನೀತಾ ನೇಣಿಗೆ ಶರಣಾಗಿದ್ದಾರೆ.  ' ನನ್ನ ಸಾವಿಗೆ ಗಂಡನ ಮನೆಯವರೇ ಕಾರಣ ಎಂದು ಪತ್ರೆ ಬರೆದಿಟ್ಟಿದ್ದಾರೆ.

ಭಾರತ-ಚೀನಾ ಗಡಿಯಲ್ಲಿದೆ ರಹಸ್ಯಮಯ ಕಣಿವೆ, ಪ್ರತಿ ದಿನ ಅಚ್ಚರಿ

ಜೇಮ್ಸ್ ಹಿಲ್ಟನ್ ತನ್ನ ಕೃತಿ ಲಾಸ್ಟ್ ಹೊರಾಯ್ಸನ್ ನಲ್ಲಿ ರಹಸ್ಯಮಯ ಶಾಂಗ್ರಿಲಾ ಕಣಿವೆ ಕುರಿತು ಉಲ್ಲೇಖಿಸಿದ್ದಾರೆ. ಇದನ್ನು ಹೊರತುಪಡಿಸಿ ಹಲವಾರು ಪುಸ್ತಕಗಳಲ್ಲಿ ಈ ಕುರಿತು ಬರೆಯಲಾಗಿದೆ.

ಗಂಡಸರು ಏಳು ನಿಮಿಷಕ್ಕೊಮ್ಮೆ ಸೆಕ್ಸ್ ಬಗ್ಗೆ ಯೋಚಿಸ್ತಾರಾ?

ನಾವು ಪ್ರೀತಿ- ಪ್ರೇಮದ ಬಗೆಗಾದರೂ ಅಷ್ಟೊಂದು ಯೋಚಿಸ್ತೇವೋ ಇಲ್ಲವೋ. ಆದರೆ ಸೆಕ್ಸ್ ಬಗ್ಗೆಯಂತೂ ಯೋಚಿಸೋದು ಖಂಡಿತ. ಯಾಕೆಂದರೆ ಅದೊಂದು ಅಗತ್ಯ

 

ಕಿವೀಸ್ ಟೆಸ್ಟ್ ; ಕನ್ನಡಿಗ ಮಯಾಂಕ್ ಗೆ ಅಗ್ನಿಪರೀಕ್ಷೆ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನದಿಂದ ಗಮನಾರ್ಹ ಪ್ರದರ್ಶನ ನೀಡುತ್ತಾ ಬಂದಿದ್ದ ಮಯಾಂಕ್ ಅಗರ್‌ವಾಲ್ ಅವರಿಗೆ ಈಗ ಅಸಲಿ ಅಗ್ನಿ ಪರೀಕ್ಷೆ ಎದುರಾಗಿದೆ.