ಮೈಸೂರು[ನ.16]  ಕೊಡಗು ಜಲಪ್ರಳಯದ ಕುರಿತು ತಮಿಳುನಾಡು ಸರ್ಕಾರ ಮೌನ ತಾಳಿದೆ. ತಲಮಿಳುನಾಡಿಗೆ ಕೊಡಗಿನ ನೀರು ಬೇಕು ಆದರೆ ಸಂಕಷ್ಟ ಅನುಭವಿಸುವರ ಪಾಡಿಗೆ ಸ್ಪಂದಿಸುವುದು ಬೇಕಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ವಿಚಾರವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಅವರು ಕಾವೇರಿ ನೀರಿಗಾಗಿ ಪ್ರತಿ ವರ್ಷವೂ ಒಂದಿಲ್ಲೊಂದು ರೀತಿಯಲ್ಲಿ ತಮಿಳುನಾಡು ತಗಾದೆ ತೆಗೆಯುತ್ತಲೇ ಇರುತ್ತದೆ. ಆದರೆ ಈಗ ಕೊಡಗಿನಲ್ಲಿ ಆಗಿರುವ ನಷ್ಟಕ್ಕೆ ಮಾತ್ರ ಪ್ರತಿಕ್ರಿಯೇ ನೀಡದೇ ಮೌನವಾಗಿದೆ ಎಂದು ವಾಸ್ತವ ತೆರೆದಿಟ್ಟಿದ್ದಾರೆ.

ಮಳೆಗಾಗಿ ಕೊಡಗಿನಲ್ಲಿ ಕಾಡು ಬೆಳೆಸುವ ಕರ್ತವ್ಯ ಕರ್ನಾಟಕದ್ದು. ಅದರ ಫಲ ಉಣ್ಣುವ ಹಕ್ಕು ಮಾತ್ರ ತಮಿಳುನಾಡಿನದ್ದು. ಇದೊಂದು ವಿಷಯ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ. ಕಾವೇರಿ ನೀರಿಗಾಗಿ ತಮಿಳುನಾಡಿನ ತಗಾದೆಗೆ ಹೇಗೆ ಪ್ರತಿತಂತ್ರ ರೂಪಿಸಬಹುದು  ಎಂಬ ಎಚ್ಚರಿಕೆಯನ್ನು ಭೈರಪ್ಪ ನೀಡಿದ್ದಾರೆ.

ಪತ್ರದ ಏನು ಹೇಳುತ್ತಿದೆ? ಒಂದು ವಿಷಯ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ. ಹೆಚ್ಚು ಮಳೆ ಮತ್ತು ಬಿರುಗಾಳಿಯಿಂದಾಗಿ ಕೊಡಗಿನಲ್ಲಿ ಭಾರೀ ಹಾನಿಯಾಗಿದೆ. ಇದಕ್ಕೆ ಕರ್ನಾಟಕ ಸರ್ಕಾರ ಮಾಡಬೇಕಾಗಿರುವ ಸಾವಿರಾರು ಕೋಟಿ ರೂ. ಖರ್ಚು ಹಾಗೂ ಸಾರ್ವಜನಿಕರು ಕೊಡುತ್ತಿರುವ ದೇಣಿಗೆಗಳು ಸರ್ವವಿಧಿತ. ಹೆಚ್ಚು ಮಳೆಯಾಗಲಿ, ಸಾಧಾರಣ ಮಳೆಯಾದರೂ ತಮಿನಾಡು ಸರ್ಕಾರ ಕಾದು ಕುಳಿತು, ತಗಾದೆ ತೆಗೆಯುವ ಮೂಲಕ ನೀರನ್ನು ಕಬಳಿಸುತ್ತದೆ. ಆಗದೇ ಇದ್ದಾಗ ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯವನ್ನು ಒತ್ತಾಯಿಸುತ್ತದೆ.

ಕೊಡಗಿನ ನೀರು ಬೇಕು, ಆದರೆ ಅದರ ಹಾನಿಯನ್ನು ತುಂಬಲು ತನ್ನ ಯಾವ ಕರ್ತವ್ಯವೂ ಇಲ್ಲವೆಂಬಂತೆ ತೆಪ್ಪಗಿದೆ. ಮಳೆಗಾಗಿ ಕೊಡಗಿನಲ್ಲಿ ಕಾಡು ಬೆಳೆಸುವ ಕರ್ತವ್ಯ ಕರ್ನಾಟಕದ್ದು. ಅದರ ಫಲ ಉಣ್ಣುವ ಹಕ್ಕು ಮಾತ್ರ ತಮಿಳುನಾಡಿನದ್ದು. ಈ ಅಂಶಗಳನ್ನು ಒಳಗೊಂಡು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕಾಗಲಿ, ಸಂಬಂಧಿಸಿದ ಟ್ರಿಬ್ಯೂನಲ್ ಅಥವಾ ನ್ಯಾಯಾಲಯಕ್ಕಾಗಲಿ ಹಕ್ಕೊತ್ತಾಯ ಮಾಡುವುದು ಅತ್ಯಗತ್ಯವೆಂದು ನನ್ನ ಭಾವನೆ.

ಮೇಲಿನವರು ನಮ್ಮ ಹಕ್ಕೊತ್ತಾಯವನ್ನು ಈಗ ಮನ್ನಿಸದೇ ಇದ್ದರೂ ನಮ್ಮ ಪಾಲಿನ ನೀರಿನ ಹಕ್ಕೊತ್ತಾಯ ಮಾಡುವಾಗ ಈ ಅಂಶವನ್ನು ಸೇರಿಸಲು ಇದು ಆಧಾರವಾಗುತ್ತದೆ. ಈ ಬಗೆಗೆ ತಾವು ತಕ್ಷಣ ಕಾರ್ಯೋನ್ಮುಖರಾಗುತ್ತೀರಿ  ಭರವಸೆ ಇದೆ ಎಂದು ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಭೈರಪ್ಪ ಹೇಳಿದ್ದಾರೆ.