ನವದೆಹಲಿ (ಫೆ. 20): ನಿಯಮಗಳ ಪ್ರಕಾರ ಸುಪ್ರೀಂಕೋರ್ಟ್ ಕೇಸ್‌ಗಳನ್ನು ವರದಿ ಮಾಡಲು ಹೋಗುವ ವರದಿಗಾರರು ಮತ್ತು ನೋಡಲು ಹೋಗುವ ಸಾಮಾನ್ಯರಿಗೆ ಕೋರ್ಟ್‌ನಲ್ಲಿ ಮಾತನಾಡುವ ಅಧಿಕಾರ ಇಲ್ಲ. ಅಲ್ಲಿ ಏನಿದ್ದರೂ ವಕೀಲರ ಮೂಲಕವೇ ಮಾತು.

ಮೊನ್ನೆ ಬಿ ಕೆ ಪವಿತ್ರಾ ಕೇಸ್ ವಿಚಾರಣೆ ನಡೆಯುತ್ತಿದ್ದಾಗ, ಇಬ್ಬರು ನ್ಯಾಯಮೂರ್ತಿಗಳು ‘ ನಾಡೋಜ ಅಂದರೆ ಏನು’ ಎಂದು ವಕೀಲ ಬಸವಪ್ರಭು ಪಾಟೀಲರನ್ನು ಪ್ರಶ್ನಿಸಿದರು. ಇದು ಗೊತ್ತಿಲ್ಲದ ಬಸವಪ್ರಭು ಆ ಕಡೆ ಈ ಕಡೆ ನೋಡಿದಾಗ ಅಲ್ಲಿದ್ದ ಕನ್ನಡದ ಪತ್ರಕರ್ತರೊಬ್ಬರು ಜೋರಾಗಿ ಕನ್ನಡ ವಿಶ್ವವಿದ್ಯಾಲಯ ಕೊಡುವ ಡಾಕ್ಟರೆಟ್ ಎಂದು ಹೇಳಿಬಿಟ್ಟರು!

ಎಲ್ಲಿ ನ್ಯಾಯಮೂರ್ತಿಗಳು ಬಯ್ಯುತ್ತಾರೋ ಎಂದು ವಕೀಲರು ‘ಹುಷ್.. ಹುಷ್’ ಎಂದರು. ಆದರೆ ಅಪರೂಪಕ್ಕೆ ಏನೂ ಅನ್ನದ ನ್ಯಾಯಮೂರ್ತಿಗಳು, ಯಾವ ಯೂನಿವರ್ಸಿಟಿ ಕೊಡುತ್ತದೆ? ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಉಂಟಾ ಎಂದೆಲ್ಲ ಪತ್ರಕರ್ತರನ್ನು ಕೇಳಿ ತಿಳಿದುಕೊಂಡರು. ಹೊರಗೆ ಬಂದ ಮೇಲೆ ಆ ಪತ್ರಕರ್ತನ ಬೆನ್ನನ್ನು ಎಲ್ಲರೂ ತಟ್ಟಿದ್ದೇ ತಟ್ಟಿದ್ದು.

- ಪ್ರಶಾಂತ್ ನಾತು 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ