Asianet Suvarna News Asianet Suvarna News

ದ್ರಾವಿಡ ಮಣ್ಣು ಸೇರಿದ ‘ನಿಧಿ’ ಮತ್ತೆ ಹುಟ್ಟಿ ಬಾ ಕರುಣಾ..

ಲಕ್ಷಾಂತರ ಅಭಿಮಾನಿಗಳ ಕಣ್ಣಲ್ಲಿ ಕಣ್ಣೀರು, ದಕ್ಷಿಣ ಭಾರತದ ನಾಯಕನಿಗೆ ಎಲ್ಲರಿಂದ ಅಂತಿಮ ನಮನ, ಸಿನಿಮಾ, ಹೋರಾಟ, ದ್ರಾವಿಡ ಚಳವಳಿಗಳ ಮೂಲಕವೇ ಜನಮಾನಸದಲ್ಲಿ  ಕರುಣಾನಿಧಿ ಚಿರಸ್ಥಾಯಿ. ಅವರ ಜೀವನದ ಒಂದೊಂದು ಅಧ್ಯಾಯಗಳು ಮುಂದಿನ ಪೀಳಿಗೆಗೆ ಪಾಠ.

Kalaignar M Karunanidhi being laid to rest at MarinaBeach, next to Anna memorial
Author
Bengaluru, First Published Aug 8, 2018, 7:10 PM IST

ಚೆನ್ನೈ[ಆ.8]  ತಮಿಳುನಾಡನ್ನು ಹಲವು ದಶಕಗಳ ಕಾಲ ಆಳಿದ್ದ ಕರುಣಾನಿಧಿ, ದ್ರಾವಿಡ ಚಳವಳಿಯ ನಾಯಕ ಮರೀನಾ ಬೀಚ್ ನಲ್ಲಿ ಮಣ್ಣಾಗಿದ್ದಾರೆ. ಸಕಲ ಸರಕಾರಿ ಗೌರವಗಳೊಂದಿಗೆ ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಅಂತ್ಯ ಸಂಸ್ಕಾರ ಬುಧವಾರ ನೆರವೇರಿತು.

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಕೆ.ಸಿ.ಚಂದ್ರಶೇಖರ್ ರಾವ್ ಸೇರಿದಂತೆ ಅನೇಕ ಗಣ್ಯರು ಕರುಣಾನಿಧಿ ಅಂತಿಮ ದರ್ಶನ ಪಡೆದರು. ದ್ರಾವಿಡ ಚಳವಳಿ ಆಶಯದಂತೆ ಕರುಣಾನಿಧಿ ಅಂತ್ಯ ಸಂಸ್ಕಾರ ಸಂಜೆ ಬುಧವಾರ ಸಂಜೆ 7.15ಕ್ಕೆ ನೆರವೇರಿತು.

ಕರುಣಾನಿಧಿ ಸಕಲ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ತಮಿಳುನಾಡು ಮುಖ್ಯಮಂತ್ರಿಯಾಗಿದ್ದಾಗಲೇ ಕೊನೆಯುಸಿರೆಳೆದ ಜಯಲಲಿತಾ ಹಾಗೂ ಇತರೆ ದ್ರಾವಿಡ ನಾಯಕರ ಸಮಾಧಿ ಸಮೀಪದಲ್ಲಿ ಕರುಣಾನಿಧಿ ಅಂತ್ಯ ಸಂಸ್ಕಾರವೂ ನೆರವೇರಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷದ ಪರಮೋಚ್ಛ ನೇತಾರ ಮುತ್ತುವೇಲ್ ಕರುಣಾನಿಧಿ ಮಂಗಳವಾರ ಸಾಯಂಕಾಲ ಚೆನ್ನೈನಲ್ಲಿರುವ ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. 

Follow Us:
Download App:
  • android
  • ios