ಪಂಚಕುಳ, [ಜ.17]:  2002ರಲ್ಲಿ ನಡೆದ ಪತ್ರಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಪಂಚಕುಳ ವಿಶೇಷ ಸಿಬಿಐ ನ್ಯಾಯಾಲಯವು ಇಂದು [ಗುರುವಾರ] ಗುರ್ಮೀತ್ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ರಾಮ್ ರಹೀಂ ಆಶ್ರಮದ ನೀರಿನಡಿ ಸೆಕ್ಸ್ ಗುಹೆ..!

ರಾಮ್ ರಹೀಮ್ ನನ್ನು ಜ.11 ರಂದು ಹರ್ಯಾಣದ ಪಂಚಕುಳ ನ್ಯಾಯಲಯ ದೋಷಿ ಎಂದು ಪರಿಗಣಿಸಿ, ಶಿಕ್ಷೆಯ ಪ್ರಮಾಣದ ತೀರ್ಪನ್ನು ಜ.17ಕ್ಕೆ ಕಾಯ್ದಿರಿಸಲಾಗಿತ್ತು. ಅದರಂತೆ ಇಂದು ವಿಶೇಷ ಸಿಬಿಐ ಮಹತ್ವದ ತೀರ್ಪು ನೀಡಿದೆ.
  
ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 51 ವರ್ಷ ವಯಸ್ಸಿನ ರಾಮ್ ರಹೀಮ್ ಸದ್ಯಕ್ಕೆ ರೋಹ್ಟಕ್ ನ ಸುನಾರಿಯಾ ಜೈಲಿನಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. 

ಇದೀಗ ಪತ್ರಕರ್ತ ರಾಮಚಂದ್ರ ಛತ್ರಪತಿ ಎಂಬುವವರನ್ನು ಪಿತೂರಿ ಮಾಡಿ ಕೊಲೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.