ಪೌಡರ್ ನಿಂದ ಕ್ಯಾನ್ಸರ್‌ : ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಗೆ ಭಾರೀ ದಂಡ

https://static.asianetnews.com/images/authors/b348a094-0bef-5801-a1f6-61e57071185f.jpg
First Published 14, Jul 2018, 11:07 AM IST
Johnson And Johnson To Pay Damages in Talc Canver Case
Highlights

ಅಮೆರಿಕದ ಸೇಂಟ್‌ ಲೂಯಿಸ್‌ ನ್ಯಾಯಾಲಯವೊಂದು ಮಕ್ಕಳ ಉತ್ಪನ್ನಗಳನ್ನು ತಯಾರಿಸುವ ‘ಜಾನ್ಸನ್‌ ಆ್ಯಂಡ್‌ ಜಾನ್ಸನ್‌’ಗೆ 32195 ಕೋಟಿ ರು. ದಂಡ ವಿಧಿಸಿದೆ. 

ಸೇಂಟ್‌ ಲೂಯಿಸ್‌: ಅಮೆರಿಕದ ಸೇಂಟ್‌ ಲೂಯಿಸ್‌ ನ್ಯಾಯಾಲಯವೊಂದು ಮಕ್ಕಳ ಉತ್ಪನ್ನಗಳನ್ನು ತಯಾರಿಸುವ ‘ಜಾನ್ಸನ್‌ ಆ್ಯಂಡ್‌ ಜಾನ್ಸನ್‌’ಗೆ 32195 ಕೋಟಿ ರು. ದಂಡ ವಿಧಿಸಿದೆ.

ಕಂಪನಿಯ ಟಾಲ್ಕಂ ಪೌಡರ್‌ನಲ್ಲಿದ್ದ ಕಲ್ನಾರು ಅಂಶದ ಪರಿಣಾಮ ತಮಗೆ ಅಂಡಾಶಯ ಕ್ಯಾನ್ಸರ್‌ ಬಂದಿದೆ ಎಂಬ 22 ಮಹಿಳೆಯರು ಮತ್ತು ಅವರ ಕುಟುಂಬದ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ದೂರುದಾರರಿಗೆ ಈ ಹಣ ಕೊಡುವಂತೆ ಕಂಪನಿಗೆ ಸೂಚಿಸಿದೆ. ಆದರೆ ತಮ್ಮ ಉತ್ಪನ್ನಗಳಲ್ಲಿ ಕಲ್ನಾರು ಅಂಶವಿಲ್ಲ, ಅದು ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ.

ಈ ಬಗ್ಗೆ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಕಂಪನಿ ವಕ್ತಾರರು ಹೇಳಿದ್ದಾರೆ. ಪ್ರಕರಣದ 22 ಅರ್ಜಿದಾರರಲ್ಲಿ ಆರು ಮಂದಿ ಅಂಡಾಶಯ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. 9,000ಕ್ಕೂ ಅಧಿಕ ಮಹಿಳೆಯರು ಟಾಲ್ಕಂ ಪೌಡರ್‌ನಿಂದ ತಮಗೆ ಅಂಡಾಶಯ ಕ್ಯಾನ್ಸರ್‌ ಆಗಿದೆ ಎಂದು ಕಂಪೆನಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ, ಕಂಪೆನಿ ಆರೋಪವನ್ನು ನಿರಾಕರಿಸುತ್ತಲೇ ಬಂದಿತ್ತು.

loader