ಬೆಂಗಳೂರು (ಫೆ. 20): ದೇವೇಗೌಡರ ದೆಹಲಿ ಶಿಷ್ಯ ಅಂದರೆ ಡ್ಯಾನಿಷ್ ಆಲಿ. 1996 ರಿಂದ ಪ್ರತಿ ಬಾರಿ ನಿನ್ನನ್ನೇ ರಾಜ್ಯಸಭೆಗೆ ಕಳಿಸುತ್ತೇನೆ ಎಂದು ಹೇಳುವ ದೇವೇಗೌಡರು, ದಿಲ್ಲಿಯ ಪಾಲಿಟಿಕ್ಸ್‌ಗೋಸ್ಕರ ಡ್ಯಾನಿಷ್‌ರನ್ನು ಬಳಸುತ್ತಾರೆ. ಹಿಂದಿನಿಂದ ದೇವೇಗೌಡರು ರಾಜ್ಯಸಭಾ ಸೀಟು ಕೊಡಲಿಲ್ಲ ಎಂದು ದೂಷಿಸುವ ಡ್ಯಾನಿಷ್ ಕ್ಯಾಮೆರಾ ಶುರು ಆದ ತಕ್ಷಣ ದೇವೇಗೌಡರ ಮಾನಸ ಪುತ್ರನಂತೆ ಹೇಳಿಕೆ ಕೊಡುತ್ತಾರೆ.

ಅಖಿಲೇಶ್‌ಗೆ ಪ್ರಿಯಾಂಕಾ ಚಿಂತೆ, ಮಾಯಾಗೆ ಓಟ್‌ ಬ್ಯಾಂಕ್ ಬೇಕಂತೆ!

ಮೊನ್ನೆ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಡ್ಯಾನಿಷ್, ‘ಕರ್ನಾಟಕದ ಸಮ್ಮಿಶ್ರ ಸರ್ಕಾರ ಉಳಿದಿರುವುದೇ ನನ್ನಿಂದ ಮತ್ತು ವೇಣುಗೋಪಾಲ್ ಅವರಿಂದ. ನಾವಿಬ್ಬರು ಹೇಗೋ ಮಾಡಿ ಸರ್ಕಾರ ಹಿಡಿದಿಟ್ಟುಕೊಂಡಿದ್ದೇವೆ. ನಾನು ಹೇಳಿದ್ದರಿಂದಲೇ ದೇವೇಗೌಡರು ಕಾಂಗ್ರೆಸ್ ಜೊತೆ ಉಳಿದುಕೊಂಡರು. ಇಲ್ಲವಾದಲ್ಲಿ ಯಾವಾಗಲೋ ಬೇರೆ ಆಗುತ್ತಿದ್ದರು’ ಎಂದು ಡ್ಯಾನಿಷ್ ಬಡಬಡಿಸುತ್ತಿದ್ದರು.

ಉಡುಪಿಯಿಂದ ಸ್ಪರ್ಧಿಸಲು ಶೋಭಾ ಕರಂದ್ಲಾಜೆ ರೆಡಿ : ಬಿಜೆಪಿ ನಾಯಕರಿಂದ ಕ್ಯಾತೆ

- ಪ್ರಶಾಂತ್ ನಾತು 

ರಾಜಕಾರಣದ ಸುದ್ಧಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ