ಚೆನೈ (ಜ. 30):  ಇಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ, ಚಂಚಲ ಮನಸ್ಥಿತಿ ಪ್ರದರ್ಶಿಸುತ್ತಿದ್ದರು.

ಕೆಲವೊಮ್ಮೆ ಅವರು ಮಂದಸ್ಮಿತರಾಗಿರುತ್ತಿದ್ದರು, ಇನ್ನು ಕೆಲವೊಮ್ಮೆ ನನ್ನನ್ನು ಏಕಾಂಗಿಯಾಗಿ ಬಿಡಿ ಎಂದು ಸೂಚಿಸುತ್ತಿದ್ದರು. ಹೀಗೆ ಅವರು ಮನೋಭಾವದ ಏರಿಳಿತದ ಸಮಸ್ಯೆಗೆ ಈಡಾಗಿದ್ದರು ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ನ್ಯಾ.ಎ.ಆರ್ಮುಗಸ್ವಾಮಿ ಆಯೋಗದ ಮುಂದೆ ಹೇಳಿಕೆ ನೀಡಿದ್ದಾರೆ.

2016 ಡಿ.4ರಂದು ಹೃದಯಾಘಾತಕ್ಕೆ ತುತ್ತಾಗಿದ್ದ ಜಯಾ, ಡಿ.5ರಂದು ಸಾವನ್ನಪ್ಪಿದ್ದರು. ಆದರೆ ಅವರ ಸಾವಿನಲ್ಲಿ ಸಂಶಯವಿದೆ ಎಂದು ಆರೋಪಿಸಿ ಎಐಎಡಿಎಂಕೆ ಸರ್ಕಾರ ಈ ಆಯೋಗವನ್ನು ವಿಚಾರಣೆಗೆ ನೇಮಕ ಮಾಡಿದೆ.