ಮದುರೈ (ಜ. 15):  ಸುಗಂಧ ಪರಿಮಳ ಬೀರುವ ಹಾಗೂ ಮದುರೈ ಮಲ್ಲಿ ಎಂದೇ ಪ್ರಖ್ಯಾತಿ ಗಳಿಸಿರುವ ಮಲ್ಲಿಗೆ ಹೂವಿಗೆ ತಮಿಳುನಾಡಿನಲ್ಲಿ ಭಾರೀ ಬೇಡಿಕೆ ಬಂದಿದೆ.

ರಾಜ್ಯಾದ್ಯಂತ ವಿಜೃಂಭಣೆಯಿಂದ ಆಚರಿಸುವ ಸಂಕ್ರಾಂತಿ ಸಂದರ್ಭದಲ್ಲೇ ಮಲ್ಲಿಗೆ ಹೂವಿನ ಪೂರೈಕೆಯಲ್ಲಿ ಕೊರತೆ ಉಂಟಾಗಿದ್ದರಿಂದಾಗಿ ಪ್ರತೀ ಕೇಜಿ ಮಲ್ಲಿಗೆ ಹೂವಿನ ದರ 3500 ರು.ಗೆ ಏರಿಕೆಯಾಗಿದೆ. ತಮಿಳುನಾಡಿನ ಹೂವಿನ ಮಾರುಕಟ್ಟೆಯಲ್ಲಿ ಅತಿದೊಡ್ಡ ಹೂವಿನ ಮಾರುಕಟ್ಟೆಯಾದ ಮದುರೈನಲ್ಲಿ ದಿನಕ್ಕೆ 10 ಟನ್‌ಗಳಷ್ಟುಮಲ್ಲಿಗೆ ಹೂವು ಮಾರಾಟವಾಗುತ್ತದೆ.