Asianet Suvarna News Asianet Suvarna News

ಬಡಿದಾಡಬೇಡಿ: ಭಾರತ-ಪಾಕ್‌ಗೆ ಜಪಾನ್ ಮನವಿ!

ಭಾರತ-ಪಾಕ್ ನಡುವಿನ ಬಿಗುವಿನ ವಾತಾವರಣ ನಿರ್ಮಾಣ| ಯುದ್ಧ ಭೀತಿಗೆ ವಿಶ್ವದ ಇತರ ರಾಷ್ಟ್ರಗಳ ಆತಂಕ| ಪರಿಸ್ಥಿತಿಯನ್ನು ಶಾಂತಿಯಿಂದ ನಿಭಾಯಿಸುವಂತೆ ಮನವಿ| ಎರಡೂ ದೇಶಗಳ ನಡುವೆ ಸಂಧಾನಕಾರನಾಗಲು ಸಿದ್ಧ ಎಂದ ರಷ್ಯಾ| ಶಾಂತಿ ಮಾತುಕತೆಗೆ ಮುಂದಾಗುವಂತೆ ಜಪಾನ್ ಸಲಹೆ|

Japan Urges India and Pakistan For Peace Dialogue
Author
Bengaluru, First Published Feb 28, 2019, 1:10 PM IST

ಟೊಕಿಯೋ(ಫೆ.28): ಭಾರತ-ಪಾಕ್ ನಡುವಿನ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ವಿಶ್ವದ ಇತರ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ.

ಭಾರತ-ಪಾಕ್ ಯುದ್ಧ ಭೀತಿ ಅಮೆರಿಕ, ರಷ್ಯಾ, ಫ್ರಾನ್ಸ್, ಜಪಾನ್ ಮುಂತಾದ ರಾಷ್ಟ್ರಗಳಿಗೆ ಆತಂಕ ಮೂಡಿಸಿದ್ದು, ಪರಿಸ್ಥಿತಿಯನ್ನು ಶಾಂತಿಯಿಂದ ನಿಭಾಯಿಸುವಂತೆ ಎರಡೂ ರಾಷ್ಟ್ರಗಳಿಗೆ ಮನವಿ ಮಾಡುತ್ತಿವೆ.

ನಿನ್ನೆಯಷ್ಟೇ ಭಾರತ-ಪಾಕ್ ನಡುವೆ ಸಂಧಾನಕಾರನಾಗಿ ಕೆಲಸ ನಿರ್ವಹಿಸಲು ಸಿದ್ಧವಿರುವುದಾಗಿ ರಷ್ಯಾ ಹೇಳಿತ್ತು. ಇಂದು ಜಪಾನ್ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಭಾರತ-ಪಾಕ್ ನಡುವಿನ ಯುದ್ಧ ಪರಿಸ್ಥಿತಿ ಕುರಿತು ಆತಂಕ ವ್ಯಕ್ತಪಡಿಸಿದೆ.

ಈ ಕುರಿತು ಮಾತನಾಡಿರುವ ಜಪಾನ್ ವಿದೇಶಾಂಗ ಮಂತ್ರಿ ಟೊಕೊ ಕೊನೊ, ಪಾಕ್ ನೆಲದಲ್ಲಿ ಭಾರತ ವಾಯುದಾಳಿ ಮಾಡಿದ ಬಳಿಕ ಪರಿಸ್ಥಿತಿ ಬಿಗಡಾಯಿಸಿದ್ದು, ಎರಡೂ ರಾಷ್ಟ್ರಗಳು ಶಾಂತಿ ಮಾತುಕತೆಗೆ ಮುಂದಾಗುವ ಮೂಲಕ ಯುದ್ಧ ಭೀತಿಯನ್ನು ದೂರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Follow Us:
Download App:
  • android
  • ios