Asianet Suvarna News Asianet Suvarna News

ಮತ್ತೊಮ್ಮೆ ಚುನಾವಣೆ ನಡೆಸಲು ದಿನಾಂಕವೂ ಫಿಕ್ಸ್

ಇದೀಗ ಮತ್ತೊಮ್ಮೆ ಚುನಾವಣೆ ನಡೆಸುವುದು ಬಹುತೇಕ ಪಕ್ಕಾ ಆಗಿದ್ದು ಜನವರಿ 5ಕ್ಕೆ ಚುನಾವಣಾ ದಿನಾಂಕ ಫಿಕ್ಸ್ ಆಗಿದೆ. ಮೈತ್ರಿಪಾಲ ಸಿರಿಸೇನಾ ಅವರು ಒಟ್ಟು 225 ಸದಸ್ಯ ಬಲದ ಸಂಸತ್ತನ್ನು ಶುಕ್ರವಾರ ವಿಸರ್ಜಿ ಸಿದ್ದಾರೆ. ಈ ಮೂಲಕ ಅವಧಿಗೆ 2 ವರ್ಷ ಮುನ್ನವೇ ಚುನಾವಣೆ ಹೇರಿದ್ದಾರೆ. 

January 5th Election Hold In Sri Lanka
Author
Bengaluru, First Published Nov 10, 2018, 12:43 PM IST

ಕೊಲಂಬೋ: ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ತಾರ್ಕಿಕ ಅಂತ್ಯಕಂಡಿದ್ದು, ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಒಟ್ಟು 225 ಸದಸ್ಯ ಬಲದ ಸಂಸತ್ತನ್ನು ಶುಕ್ರವಾರ ವಿಸರ್ಜಿ ಸಿದ್ದಾರೆ. ಈ ಮೂಲಕ ಅವಧಿಗೆ 2 ವರ್ಷ ಮುನ್ನವೇ ಚುನಾವಣೆ ಹೇರಿದ್ದಾರೆ. 

ಕೆಲ ದಿನಗಳ ಹಿಂದೆ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಸಿರಿಸೇನಾ ಪದಚ್ಯುತಗೊಳಿಸಿ, ತಮ್ಮ ಪಕ್ಷದ ಮಹಿಂದ ರಾಜಪಕ್ಸೆ ಅವರನ್ನು ಪ್ರಧಾನಿ ಹುದ್ದೆಗೆ ನೇಮಿಸಿದ್ದರು. 

ಆದರೆ, ರಾಜಪಕ್ಸೆ ಸಂಸತ್ತಿನಲ್ಲಿ ಸಂಖ್ಯಾಬಲದ ಕೊರತೆ ಎದುರಿಸುತ್ತಿದ್ದರು. ಹೀಗಾಗಿ ಸಂಸತ್ತನ್ನು ವಿಸರ್ಜಿಸಿ ಹೊಸದಾಗಿ 2019 ರ ಜ.5 ರಂದು ಚುನಾವಣೆ ನಡೆಸುವ ನಿರ್ಧಾರವನ್ನು ಅಧ್ಯಕ್ಷ ಸಿರಿಸೇನಾ ಕೈಗೊಂಡಿದ್ದಾರೆ. 

ಈ ಹಿಂದೆ ಸಿರಿಸೇನಾ ಅವರು ನ. 16 ರವರೆಗೂ ಸಂಸತ್ತನ್ನು ಅಮಾನತಿನಲ್ಲಿಟ್ಟಿದ್ದರು. ಆದರೆ, ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ನ.1 ರಂದು ಅಮಾನತು ಆದೇಶವನ್ನು ತೆರವುಗೊಳಿಸಿ, ರಾಜಪಕ್ಸೆಯನ್ನು ಪ್ರಧಾನಿಯಾಗಿ ನೇಮಿಸಿದ್ದರು.

Follow Us:
Download App:
  • android
  • ios