Asianet Suvarna News Asianet Suvarna News

ಇರುವೆ ಬಗ್ಗೆ ಮಾತನಾಡಲ್ಲ ಎಂದು ಡಿಕೆಶಿ ತೆಗಳಿದ ಬಿಜೆಪಿ ನಾಯಕ

Oct 14, 2018, 7:03 PM IST

ಮುಧೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ನಾಯಕ ಜನಾರ್ದನ್ ರೆಡ್ಡಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇರುವೆಗೆ ಹೋಲಿಕೆ ಮಾಡಿದ್ದಾರೆ. ಡಿಕೆಶಿ ಆಟ ಕನಕಪುರ ಹಾಗೂ ರಾಮನಗರಲ್ಲಿ ಅಷ್ಟೆ. ಹೈದರಾಬಾದ್ ಕರ್ನಾಟಕದಲ್ಲಿ ಅವರ ಆಟ ನಡೆಯಲ್ಲ. ಅವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬಳ್ಳಾರಿಯಲ್ಲಿ ಶಾಂತಾ ಅವರೆ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.