ರಾಷ್ಟ್ರವಿರೋಧಿ ಸುದ್ದಿ ಬಿತ್ತರಿಸುವ ವಾಹಿನಿಗಳು ಬ್ಯಾನ್!

First Published 18, Jul 2018, 8:23 PM IST
Jammu & Kashmir govt shuts down 30 TV channels for pushing anti-India propaganda
Highlights

ರಾಷ್ಟ್ರ ವಿರೋಧಿ ಸುದ್ದಿ ಪ್ರಸಾರ ಮಾಡುವ ಚಾನಲ್ ಗಳಿಗೆ ಜಮ್ಮು ಮತ್ತು ಕಾಶ್ಮೀರ ಸರಕಾರ ಬ್ರೇಕ್ ಹಾಕಿದೆ. ಕಲ್ಲು ಎಸೆಯುತ್ತಿದ್ದವರ ಮೇಲೆ ಸರ್ಜಿಕಲ್ ದಾಳಿ ನಡೆದಂತೆ ಇದೀಗ ಕೆಲ ಮಾಧ್ಯಮಗಳ ಮೇಲೆ ದಾಳಿ ನಡೆದಿದೆ.

ಶ್ರೀನಗರ[ಜು.18] ದೇಶ ವಿರೋಧಿ ವರದಿಗಳನ್ನು ಪ್ರಸಾರ ಮಾಡುತ್ತಿರುವ 30ಕ್ಕೂ ಅಧಿಕ ಸುದ್ದಿ ವಾಹಿನಿಗಳ ಪ್ರಸಾರ ತಕ್ಷಣವೇ ಬಂದ್ ಮಾಡುವಂತೆ ಜಮ್ಮು ಕಾಶ್ಮೀರ ಸರಕಾರ ಸ್ಥಳೀಯ ಕೇಬಲ್ ಆಪರೇಟರ್ ಗಳಿಗೆ ತಿಳಿಸಿದೆ.

ಪಾಕಿಸ್ತಾನ ಮೂಲದ ಚಾನಲ್ ಗಳಾದ GEO, ARY, QTV ಮತ್ತು  Peace TV ಸಾರ್ವಜನಿಕ ಶಾಂತಿ ಮತ್ತು ಭಾವೈಕ್ಯಕ್ಕೆ ಧಕ್ಕೆ ತರುವಂತ ವರದಿ ಪ್ರಸಾರ ಮಾಡುತ್ತಿದ್ದು ಬಂದ್ ಮಾಡಿ ಎಂದು ಹೇಳಿದೆ. ಇದೇ ಆರೋಪದಲ್ಲಿ ಸರಕಾರ 22 ಸೋಶುಯಲ್ ಮೀಡಿಯಾ ಸೈಟ್ ಗಳನ್ನು ಬಂದ್ ಮಾಡಿತ್ತು. 

ಶ್ರೀನಗರದ ಹೆಚ್ಚುವರಿ ಡಿಸಿ ಜುಲೈ 12 ರಂದೇ ಆದೇಶ ಹೊರಡಿಸಿದ್ದಾರೆ. ಕೆಲ ವಾಹಿನಿಗಳಿಗೆ ಬಿತ್ತರವಾದ ಕಾರ್ಯಕ್ರಮ ಉಲ್ಲೇಖಿಸಿ ನೋಟಿಸ್ ಸಹ ನೀಡಲಾಗಿದ್ದು ಉತ್ತರಿಸಬೇಕು ಎಂದು ಹೇಳಿದೆ. ಪಾಕ್ ಮೂಲದ ಅನೇಕ ಚಾನಲ್ ಗಳ ಪ್ರಸಾರವನ್ನು ತಕ್ಷಣ ನಿಲ್ಲಿಸಬೇಕು. ಮಾಧ್ಯಮಗಳು ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು ಬದಲಾಗಿ ದಾರಿ ತಪ್ಪಿಸಬಾರದು ಎಂದು ಹೇಳಿದೆ.

ಇದೇ ಸುದ್ದಿ ಇಂಗ್ಲಿಷ್ ನಲ್ಲಿ ಓದಿ

loader