ಸೇನೆ ದಾಳಿಗೆ 12 ಉಗ್ರರು ಫಿನೀಶ್, ರಾಜ್ಯಕ್ಕೆ ಬರುತ್ತಾ ಲಾಕ್‌ಡೌನ್ ರೂಲ್ಸ್ ? ಏ.11ರ ಟಾಪ್ 10 ಸುದ್ದಿ
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 12 ಉಗ್ರರರನ್ನು ಹತ್ಯೆ ಮಾಡಲಾಗಿದೆ. ಕಾಶಿ ಮಸೀದಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದವರಿಗೆ ಹತ್ಯೆ ಬೆದರಿಕೆ ಎದುರಾಗಿದೆ. ಪ್ರಧಾನಿ ಮೋದಿ ಕರೆ ನೀಡಿದ ಲಸಿಕಾ ಉತ್ಸವ ಆರಂಭಗೊಂಡಿದೆ. ಭಾರತೀಯ ಚಿತ್ರರಂಗದಲ್ಲಿ ಅಲ್ಲು ಅರ್ಜುನ್ ಹೊಸ ದಾಖಲೆ ಬರೆದಿದ್ದಾರೆ. ಕರ್ನಾಟಕದಲ್ಲಿ ಜಾರಿಯಾಗುತ್ತಾ ಲಾಕ್‌ಡೌನ್? ಬಿಜೆಪಿ ಅಭ್ಯರ್ಥಿ ಅಣ್ಣಾಮಲೈಗೆ ಕೊರೋನಾ ಸೇರಿದಂತೆ ಏಪ್ರಿಲ್ 11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ತಪ್ಪಿತು ಬಹುದೊಡ್ಡ ದುರಂತ; 72 ಗಂಟೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ 12 ಉಗ್ರರ ಹತ್ಯೆ!...
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸಕ್ಕೆ ಭಾರತೀಯ ಸೇನೆ ಬ್ರೇಕ್ ಹಾಕುತ್ತಿದೆ. ಇದರ ನಡುವೆ ಅಡಗುತಾಣದಲ್ಲಿ ಕುಳಿತು ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿರುವ ಉಗ್ರರನ್ನು ಸೇನೆ ಹುಡುಕಿ ಹೊಡೆದುರುಳಿಸಿತ್ತುದೆ. ಇದೀಗ ಕಳೆದ 72 ಗಂಟೆಯಲ್ಲಿ ಭಾರತೀಯ ಸೇನೆ 12 ಉಗ್ರರರನ್ನು ಹತ್ಯೆ ಮಾಡಿ ಬಹುದೊಡ್ಡ ಅನಾಹುತವನ್ನು ತಪ್ಪಿಸಿದೆ.
ಕಾಶಿ ಮಸೀದಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದವರಿಗೆ ಹತ್ಯೆ ಬೆದರಿಕೆ!...
ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಮಂದಿರಕ್ಕೆ ಅಂಟಿಕೊಂಡಂತಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆಗೆ ಸ್ಥಳೀಯ ಕೋರ್ಟ್ ಆದೇಶಿಸಿದ ಬೆನ್ನಲ್ಲೇ, ಕಾಶಿಯಲ್ಲಿರುವ ಮಸೀದಿ ವಿರುದ್ಧ ಕಾನೂನು ಹೋರಾಟಕ್ಕೆ ಧುಮುಕಿದ ಅರ್ಜಿದಾರ ಹರಿಹರ ಪಾಂಡೆ ಅವರಿಗೆ ಜೀವ ಬೆದರಿಕೆಯ ಕರೆಗಳು ಬಂದಿವೆ.
ಕೇರಳದಲ್ಲಿ ಹೆಲಿಕಾಪ್ಟರ್ ಪತನ: ಲುಲು ಗ್ರೂಪ್ ಮುಖ್ಯಸ್ಥ ಯೂಸುಫ್ ಸೇರಿ 7 ಮಂದಿ ಪಾರು!...
ಲುಲು ಗ್ರೂಪ್ ಮಾಲೀಕ ಯೂಸುಫ್ ಅಲಿ, ಅವರ ಪತ್ನಿ ಸೇರಿದಂತೆ ಒಟ್ಟು 7 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಭಾನುವಾರಬೆಳಗ್ಗೆ ಕೇರಳದ ಕೊಚ್ಚಿಯಲ್ಲಿ ಪತನಗೊಂಡಿದೆ. ಅದೃಷ್ಟವಶಾತ್ ಹೆಲಿಕಾಪ್ಟರ್‌ನಲ್ಲಿದ್ದವರು ಸುರಕ್ಷಿತವಾಗಿದ್ದಾರೆ.
ಇಂದಿನಿಂದ 4 ದಿನ ಲಸಿಕಾ ಉತ್ಸವ: ಕೊರೋನಾ ವಿರುದ್ಧ ಹೋರಾಟಕ್ಕೆ ಪಣ!...
ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ‘ಲಸಿಕಾ ಉತ್ಸವ’ ಭಾನುವಾರದಿಂದ ಬುಧವಾರದವರೆಗೆ ದೇಶಾದ್ಯಂತ ನಡೆಯಲಿದೆ.
ಎಲಿಮಿನೇಟ್ ಆಗಿದ್ದು ಶಮಂತ್, ಹೊರ ಬರೋದು ವೈಜಯಂತಿ ಅಡಿಗ; ಏನಿದೆ ಗೇಮ್ ಪ್ಲಾನ್?...
ಅಮ್ಮಚ್ಚಿ ಎಂಬ ನೆನಪು ಸಿನಿಮಾ ನಟಿ ಬಿಗ್‌ಬಾಸ್ ಮನೆಗೆ ಬಂದಷ್ಟೇ ವೇಗವಾಗಿ ವಾಪಾಸ್ ಬಂದಿದ್ದಾರೆ. ಕೇವಲ ನಾಲ್ಕೇ ನಾಲ್ಕು ದಿನಗಳಲ್ಲಿ ಹೊರಬರುವಂಥ ಅಂಥಾ ಯಾವ ತಪ್ಪನ್ನು ವೈಜಯಂತಿ ಮಾಡಿದ್ರು?
ಅನ್‌ಲಿಮಿಟೆಡ್ ಡೇಟಾ, ಕಾಲ್ ಸೇವೆ ಒದಗಿಸುವ STV ಪ್ಲ್ಯಾನ್ ವಿಸ್ತರಿಸಿದ BSNL...
ಕಳೆದ ಜನವರಿಯಲ್ಲಿ ಪರಿಚಯಿಸಲಾಗಿದ್ದ 398 ರೂ. ಎಸ್‌ಟಿವಿ ಪ್ರಿಪೇಡ್ ಪ್ಲ್ಯಾನ್ ಅನ್ನು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ ಲಿ. ಮತ್ತೆ ಮೂರು ತಿಂಗಳವರೆಗೂ ವಿಸ್ತರಿಸಿದೆ. ಈ ಪ್ಲ್ಯಾನ್‌ನಲ್ಲಿ ಪ್ರಿಪೇಡ್ ಗ್ರಾಹಕರು ಅನಿಯಂತ್ರಿತ ಕಾಲ್ಸ್ ಮತ್ತು ಡೇಟಾ ಸೇವೆ ಪಡೆದುಕೊಳ್ಳಬಹುದಾಗಿದೆ.
ಈ ಎರಡು ಫೀಚರ್ಸ್ ನಿಮ್ಮ ಬೈಕ್, ಸ್ಕೂಟರ್‌ನಲ್ಲಿ ಇಲ್ಲದಿದ್ದರೆ ಬೀಳುತ್ತೆ ದಂಡ!...
ಎರಡು ಫೀಚರ್ಸ್ ನಿಮ್ಮ ದ್ವಿಚಕ್ರ ವಾಹನದಲ್ಲಿ ಇಲ್ಲದಿದ್ದರೆ ಅಥವಾ ಕಾರ್ಯನಿರ್ವಹಿಸದ್ದರೆ ದಂಡ ಬೀಳುವುದು ಖಚಿತ. ಇಷ್ಟು ದಿನ ಈ ಫೀಚರ್ಸ್ ಇದ್ದರೂ ಹಾಕುವ ಅಥವಾ ಉಪಯೋಗಿಸುವ ಅಭ್ಯಾಸ ಹೆಚ್ಚಿನವರಿಗೆ ಇರಲಿಲ್ಲ. ಇದೀಗ ಬೆಂಗಳೂರು ಪೊಲೀಸರು ದಂಡ ಹಾಕಲು ನಿರ್ಧರಿಸಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದ ಅಲ್ಲು ಅರ್ಜುನ್!...
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬದ ದಿನ 'ಪುಷ್ಪ' ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ರಶ್ಮಿಕಾ ಮಂದಣ್ಣ ಪಕ್ಕಾ ಹಳ್ಳಿ ಹುಡುಗಿ ಅವತಾರದಲ್ಲಿ ಕಾಣಿಸಿಕೊಂಡಿದ್ದು ಡಾಲಿ ಧನಂಜಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುಷ್ಪ ಚಿತ್ರದ ಟೀಸರ್ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಮಾಡಿದೆ..
ಮಾಜಿ IPS ಅಧಿಕಾರಿ, ಬಿಜೆಪಿ ನಾಯಕ ಅಣ್ಣಾಮಲೈಗೆ ಕೊರೋನಾ!...
ಕರ್ನಾಟಕ ಸಿಂಗಂ ಖ್ಯಾತಿಯ ಮಾಜಿ ಐಪಿಎಸ್ ಆಫೀಸರ್ ಅಣ್ಣಾಮಲೈಗೆ ಈ ಕೊರೋನಾ ಸೋಂಕು ತಗುಲಿದೆ.
ಶಾಕಿಂಗ್: ಲಾಕ್ ಡೌನ್ ಸುಳಿವು ನೀಡಿದ ಸಚಿವ ಸುಧಾಕರ್!...
ಮೂರು ಕ್ಷೇತ್ರಗಳ ಉಪಚುನಾವಣೆ ಮುಗಿದ ನಂತರ ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಜಾರಿ ಮಾಡುವ ಸಾಧ್ಯತೆಗಳಿವೆ. ಇನ್ನು ಈ ಬಗ್ಗೆ ಸ್ವತಃ ಆರೋಗ್ಯ ಸಚಿವರೇ ಸುಳಿವು ಕೊಟ್ಟಿದ್ದಾರೆ.