Asianet Suvarna News Asianet Suvarna News

ಜಮಖಂಡಿಯ ಬಿಜೆಪಿ ಟಿಕೆಟ್ ಯಾರಿಗೆ..?

Oct 9, 2018, 9:02 PM IST

ಜಮಖಂಡಿ[ಅ.09]: ಜಮಖಂಡಿ ವಿಧಾನಸಭಾ ಕ್ಷೇತ್ರದ ಮರುಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಸಿದ್ದುನ್ಯಾಮಗೌಡ ಅವರಿಂದ ತೆರವಾದ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಅವರ ಮಗನಿಗೆ ಟಿಕೆಟ್ ನಿಗದಿ ಪಡಿಸಿದೆ. ಇದೀಗ ಬಿಜೆಪಿಯಲ್ಲಿ ಗೊಂದಲ ಮುಂದುವರೆದಿದೆ. ಇನ್ನೊಂದು ಮೂಲಗಳ ಪ್ರಕಾರ ಶ್ರೀಕಾಂತ್ ಕುಲಕರ್ಣಿಗೆ ಬಿಜೆಪಿ ಟಿಕೆಟ್ ಫೈನಲ್ ಎನ್ನಲಾಗುತ್ತಿದೆ.

ಮುರುಗೇಶ್ ನಿರಾಣಿ ಸಹೋದರ ಸಂಗಮೇಶ್ ನಿರಾಣಿ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದು, ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವುದು ಇನ್ನಷ್ಟೇ ಬಯಲಾಗಬೇಕಿದೆ.