ಡಿಕೆಶಿ ಸ್ಥಿತಿ ನೋಡಿದ್ರೆ ಅಶ್ವತ್ ಹಾಡು ನೆನಪಾಗುತ್ತೆ ಎಂದು ತಮಾಷೆ ಮಾಡಿದ ಜಗ್ಗೇಶ್

ಅತ್ತ ಸಚಿವ ಸಂಪುಟ ಕಸರತ್ತಿನಲ್ಲಿ ಡಿ ಕೆ ಶಿವಕುಮಾರ್ ಬ್ಯುಸಿಯಾಗಿದ್ದರೆ ಇತ್ತ ಅವರ ಸ್ನೇಹಿತ ಜಗ್ಗೇಶ್ ಬಹಳ ತಮಾಷೆಯಾಗಿ ಮಾತನಾಡಿದ್ದಾರೆ. 

ಡಿ ಕೆ ಶಿವಕುಮಾರ್ ನನ್ನ ಆತ್ಮೀಯ ಸ್ನೇಹಿತ. ನಮ್ಮ ಪಕ್ಷ ಅಧಿಕಾರಕ್ಕೆ ಬರದಂತೆ ಅವರು ತಡೆದಿರಬಹುದು ಆದರೆ ಅವರ ಬಗ್ಗೆ ನನಗೆ ಮರುಕವಿದೆ. ಅವರು ಬಹಳ ಕಷ್ಟಪಟ್ಟು ತನು, ಮನ. ಧನ ಎಲ್ಲವನ್ನು ಖರ್ಚುಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಆದರೆ ಈಗಿನ ಅವರ ಸ್ಥಿತಿ ನೋಡಿದರೆ ಮರುಕವೆನಿಸುತ್ತದೆ ಎಂದು ಜಗ್ಗೇಶ್ ಹೇಳಿದ್ದಾರೆ. 

Comments 0
Add Comment