ಹುಲಿಯಂತೆ ಆರ್ಭಟಿಸುತ್ತಿದ್ದ ಜಮೀರ್ ಇದೀಗ ಕೈಕಟ್ಟಿ ನಿಂತಿದ್ದಾರೆ: ಜಗ್ಗೇಶ್

ಚುನಾವಣಾ ಪೂರ್ವದಲ್ಲಿ ಹಾವು-ಮುಂಗುಸಿಗಳಂತೆ ಕಚ್ಚಾಡುತ್ತಿದ್ದ ಜಮೀರ್ ಅಹ್ಮದ್ ಹಾಗೂ ಕುಮಾರ ಸ್ವಾಮಿ ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದಾರೆ. ಇದೀಗ ಹೋದಲ್ಲಿ ಬಂದಲ್ಲಿ ಕುಮಾರಸ್ವಾಮಿಯನ್ನು ಹೊಗಳುತ್ತಿದ್ದಾರೆ. ಇದನ್ನು ಜಗ್ಗೇಶ್ ತಮ್ಮದೇ ಶೖಲಿಯಲ್ಲಿ ತಮಾಷೆ ಮಾಡಿದ್ದಾರೆ. 

ಕುಮಾರಸ್ವಾಮಿ ನೆರಳಲ್ಲೇ ಬೆಳೆದ ಜಮೀರ್ ಅಹ್ಮದ್ ಅವರ ವಿರುದ್ಧವೇ ಮಾತನಾಡತೊಡಗಿದರು. ರಾಜಕೀಯದಲ್ಲಿ ಸ್ನೇಹ, ಸಂಬಂಧಗಳು ಬೆಲೆಯನ್ನೇ ಕಳೆದುಕೊಳ್ಳುತ್ತವೆ ಎಂಬುದಕ್ಕೆ ಇದೇ ಸಾಕ್ಷಿ ಅಂದುಕೊಂಡಿದ್ದೆ. ಹುಲಿಯಂತೆ ಆರ್ಭಟಿಸುತ್ತಿದ್ದ ಜಮೀರ್ ಇದೀಗ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದ್ದಾರೆ.  

Comments 0
Add Comment