ಬೆಂಗಳೂರು, [ಜ10]: ರಾಕಿಂಗ್ ಸ್ಟಾರ್ ಯಶ್ ಅವರ ಆಡಿಟರ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ [ಐಟಿ] ದಾಳಿ ಮಾಡಿದೆ. 

ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ  ನಟ ಯಶ್ ಆಡಿಟರ್ ಆಗಿರುವ ಬಸವರಾಜ್ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಐಟಿ ಅಧಿಕಾರಗಳ ಶೋಧ ಅಂತ್ಯ: ಈ ಬಗ್ಗೆ ಯಶ್ ಹೇಳಿದ್ದೇನು?

ಮೊನ್ನೇ ಅಷ್ಟೇ ಸ್ಯಾಂಡಲ್ ವುಡ್ ನ ಯಶ್, ಸುದೀಪ್, ಶಿವರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್ ಸೇರಿದಂತೆ ನಿರ್ಮಾಪಕರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು.

ಯಶ್ ಮನೆಯಲ್ಲಿ ಐಟಿ ಶೋಧ ಕಾರ್ಯ ಅಂತ್ಯ: ಸಿಕ್ಕಿದ್ದೇನು?

ಇದೀಗ ಆಡಿಟರ್ ಬಸವರಾಜ್ ಮನೆ ಮೇಲೆ ಐಟಿ ದಾಳಿಯಾಗಿರುವುದಕ್ಕೆ ಕಾರಣವೂ ಇದೆ. ಅದೇನೆಂದರೆ ಬಸವರಾಜ್ ನಟ ಯಶ್ ಸೇರಿದಂತೆ ಹಲವು ನಿರ್ಮಾಪಕ ಹಾಗೂ ನಟರಿಗೆ ಆಡಿಟರ್ ಆಗಿದ್ದಾರೆ.

ಈ ಹಿನ್ನಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು‌‌ ದಾಳಿ ನಡೆಸಿದ್ದು, ಲೆಕ್ಕಪತ್ರಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.