Asianet Suvarna News Asianet Suvarna News

ಸಚಿವರಿಗೆ ಐಟಿ ಶಾಕ್ : ಬೆಳ್ಳಂಬೆಳಗ್ಗೆ 16 ಸ್ಥಳಗಳ ಮೇಲೆ ದಾಳಿ

ಸಾರಿಗೆ ಸಚಿವರಿಗೆ ಬುಧವಾರ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಐಟಿ ಇಲಾಖೆಯ ಒಟ್ಟು 30 ಅಧಿಕಾರಿಗಳ ತಂಡ ದಿಲ್ಲಿ ಸಾರಿಗೆ ಸಚಿವರಿಗೆ ಸೇರಿದ 16 ಸ್ಥಳಗಳ ಮೇಲೆ ದಾಳಿ ನಡೆಸಿದೆ. 

IT Raid At Delhi Transport Minister Resident
Author
Bengaluru, First Published Oct 10, 2018, 1:12 PM IST

ನವದೆಹಲಿ : ದಿಲ್ಲಿ ಸಾರಿಗೆ ಸಚಿವರಿಗೆ ಐಟಿ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. 

ಸಚಿವ ಕೈಲಾಶ್ ಗೆಹ್ಲೋಟ್ ಅವರಿಗೆ ಸೇರಿದ ನಿವಾಸ ಹಾಗೂ 15 ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಲಾಶ್ ಅವರಿಗೆ ಸೇರಿದ ಆಸ್ತಿ ಪಾಸ್ತಿಗಳ ಮೇಲೆ ದಾಳಿ ನಡೆದಿದೆ. 

ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಗೆಹ್ಲೋಟ್ ಅವರಿಗೆ ಸೇರಿದ ಆಸ್ತಿ ಪಾಸ್ತಿಗಳ ಮೇಲೆ ದಾಳಿ ನಡೆಸಿದ್ದಾರೆ. 

ಆಮ್ ಆದ್ಮಿ ಪಕ್ಷದ ನಜಾಫ್ಗರ್ ಅಸೆಂಬ್ಲಿಯ ಶಾಸಕರಾಗಿರುವ  ಗೆಹ್ಲೋಟ್ ಅವರು ಕಾನೂನು ಹಾಗೂ ಕಂದಾಯ ಖಾತೆಗಳನ್ನೂ ಕೂಡ ನಿರ್ವಹಿಸುತ್ತಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿದ ಪಕ್ಷದ ಮುಖಂಡರು ಇದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ ಎಂದು ಹೇಳಿದ್ದಾರೆ. 

 

Follow Us:
Download App:
  • android
  • ios