ಬೆಂಗಳೂರು, [ಜ.06]: ಸ್ಯಾಂಡಲ್​ವುಡ್​​ ನಟ ಹಾಗೂ ನಿರ್ಮಾಪಕರ ಮನೆ ಮೇಲೆ ನಡೆದ ಐಟಿ ದಾಳಿಗೆ ಸಂಬಂಧಿಸಿದಂತೆ ಇಂದು [ಭಾನುವಾರ] ಆದಾಯ ತೆರಿಗೆ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. 

ಜ.3ರಂದು ನಟ ಯಶ್​, ಪುನೀತ್ ರಾಜ್​ಕುಮಾರ್​​, ಶಿವರಾಜ್​ಕುಮಾರ್​, ಸುದೀಪ್​, ನಿರ್ಮಾಪಕ ವಿಜಯ್​ ಕಿರಗಂದೂರು, ರಾಕ್​ಲೈನ್​ ವೆಂಕಟೇಶ್​ ಸೇರಿದಂತೆ ಹಲವರ ಮನೆ ಮೇಲೆ ಐಟಿ ರೇಡ್​​ ನಡೆದಿತ್ತು. 

ಆಪರೇಷನ್ ಸ್ಯಾಂಡಲ್‌ವುಡ್ 2nd ಹಾಫ್: Exclusive ಡೀಟೆಲ್ಸ್...

ಈ ದಾಳಿಯಲ್ಲಿ ಒಟ್ಟಾರೆ 25.3 ಕೆಜಿ ಚಿನ್ನಾಭರಣ, 2.85 ಕೋಟಿ ನಗದು ಸೇರಿದಂತೆ 11 ಕೋಟಿ ಮೊತ್ತದ ಅಘೋಷಿತ ಆಸ್ತಿಯನ್ನ ಜಪ್ತಿ ಮಾಡಲಾಗಿದೆ.

ಚಿನ್ನ ಹಾಗೂ ಆಸ್ತಿ ಮೊತ್ತ ಬರೋಬ್ಬರಿ  109 ಕೋಟಿ ಮೊತ್ತದ ದಾಖಲೆರಹಿತ ಆದಾಯ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಐಟಿ ಅಧಿಕಾರಗಳ ಶೋಧ ಅಂತ್ಯ: ಈ ಬಗ್ಗೆ ಯಶ್ ಹೇಳಿದ್ದೇನು?

ಕರ್ನಾಟಕ ಹಾಗೂ ಗೋವಾದ ಸುಮಾರು 180 ಅಧಿಕಾರಿಗಳಿಂದ 21 ಸ್ಥಳಗಳಲ್ಲಿ ಐಟಿ ದಾಳಿ ನಡೆಸಿತ್ತು. ದಾಳಿಗೂ ಮುನ್ನ 3 ತಿಂಗಳ ಕಾಲ ಇಲಾಖೆ ತನಿಖೆ ನಡೆಸಿ ಮಾಹಿತಿ ಕಲೆ ಹಾಕಲಾಗಿತ್ತು.  

ಪ್ರೊಡಕ್ಷನ್ ಕಂಪನಿಗಳು, ನಿರ್ಮಾಪಕರು, ಸಿನಿಮಾ ಫೈನಾನ್ಶಿಯರ್​​ಗಳು ಹಾಗೂ ನಟರ ಮನೆಗಳ ಮೇಲೆ ಈ ದಾಳಿ ನಡೆದಿದೆ. ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲಿ ದಾಖಲೆಯಿಲ್ಲದ ಖರ್ಚು ವೆಚ್ಚಗಳ ಬಗ್ಗೆ ಸಾಕ್ಷಿ ಸಿಕ್ಕಿದೆ.

ಅದರಲ್ಲೂ ದಾಖಲೆಯಿಲ್ಲದ ಥಿಯೇಟರ್​ ಕಲೆಕ್ಷನ್​​ ಹಾಗೂ ತೆರಿಗೆ ವಂಚನೆ ಎಸಗಿರುವುದು ಪತ್ತೆಯಾಗಿದೆ ಎಂದು ಐಟಿ ಇಲಾಖೆ ಹೇಳಿದೆ. ಐಟಿ ದಾಳಿಯಿಂದ ನಟರು ಹಾಗೂ ನಿರ್ಮಾಪಕರು ದಾಖಲೆರಹಿತ ಆದಾಯದಿಂದ ಆಸ್ತಿ ಹಾಗೂ ಆಭರಣಗಳಿಗೆ ಹಣ ಹೂಡಿರುವುದು ಪತ್ತೆಯಾಗಿದೆ. 

ಆಡಿಯೋ, ಡಿಜಿಟಲ್​ ಹಾಗೂ ಸ್ಯಾಟಿಲೈಟ್​​​ ರೈಟ್ಸ್​​​ಗಳ ಮಾರಾಟದಲ್ಲೂ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಆದಾಯ ತೆರಿಗೆ ಇಲಾಖೆ ಬಹಿರಂಗಪಡಿಸಿದೆ.