ಬೆಂಗಳೂರು(ಜು.30) ಉದ್ಯಮಿ ಅವಿನಾಶ್ ಲಾಕರ್ ನಲ್ಲಿ ಪತ್ತೆಯಾಗಿದ್ದ ಪ್ರಸಾದ್ ರೆಡ್ಡಿ ಆಸ್ತಿ ಪತ್ರದ ಜಾಡು ಹಿಡಿದ ಪೊಲೀಸರು ಅವರಿಗೆ ಸಂಬಂಧಿಸಿದ ಮೂರು ಕಡೆ ದಾಳಿ ಮಾಡಿದ್ದಾರೆ.  ಬಿಜೆಪಿ ನಾಯಕ ಜಿ.ಪ್ರಸಾದ್ ರೆಡ್ಡಿಗೆ ಸಂಬಂಧಿಸಿದಂತೆ ಮೂರು ಕಡೆ ದಾಳಿ ಮಾಡಲಾಗಿದೆ ಎಂದು ಇಲಾಖೆ  ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದೆ.

ಜಿ.ಪ್ರಸಾದ್ ರೆಡ್ಡಿ ನಿವಾಸ, ಜಿ.ಪ್ರಸಾದ್ ರೆಡ್ಡಿ ಕಚೇರಿಯಲ್ಲಿ ಸೋಮವಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪ್ರಸಾದ್ ರೆಡ್ಡಿ ಆಪ್ತ ಸಯ್ಯದ್ ಅಲೀಮುದ್ದೀನ್ ಮನೆಯಲ್ಲೂ ಪರಿಶೀಲನೆ ನಡೆದಿದೆ. ಬೆಳಗ್ಗೆಯಿಂದ ದಾಖಲೆ ಪರಿಶೀಲನೆ ನಡೆಸಿದ್ದ ಆದಾಯತೆರಿಗೆ ಅಧಿಕಾರಿಗಳು ಬಿಜೆಪಿ ನಾಯಕ ಜಿ.ಪ್ರಸಾದ್ ರೆಡ್ಡಿ ಜೊತೆಗೆ ವ್ಯವಹಾರ ಅವಿನಾಶ್ ವ್ಯವಹಾರ ಇಟ್ಟುಕೊಂಡಿದ್ದ ಎಂಬ ಆಧಾರದಲ್ಲಿ ಪ್ರಶ್ನೆ ಮಾಡಿದ್ದಾರೆ.

ಕ್ಲಬ್ ಲಾಕರ್ ರಹಸ್ಯ: ಅವ್'ನಾಶ್’ಗೆ ರಾಜಕಾರಣಿ, ನಟರ ನಂಟು...!

ಅವಿನಾಶ್ ಮಾಲೀಕತ್ವದ ಅನೂಷ್ಕಾಎಸ್ಟೇಟ್ಸ್ ನಿಂದ ನಿವೇಶನಗಳ ಖರೀದಿ ನಡೆದಿತ್ತು. ಜಿ.ಪ್ರಸಾದ್ ರೆಡ್ಡಿಗೆ ಸೇರಿದ ಹಲವು ಸೈಟ್ ಗಳನ್ನು ಅವಿನಾಶ್ ಖರೀದಿಸಿದ್ದ. ಅವಿನಾಶ್ ಲಾಕರ್ ತೆರೆದ ಸಂದರ್ಭ ಪತ್ತೆಯಾಗಿದ್ದ 7ಒರಿಜಿನಲ್ ಪತ್ರಗಳಲ್ಲಿ ಪ್ರಸಾದ್ ರೆಡ್ಡಿಗೆ ಸೇರಿದ ದಾಖಲೆಗಳಿದ್ದವು.