Asianet Suvarna News Asianet Suvarna News

ಭುವನೇಶ್ವರದಿಂದ ಮೋದಿ ಸ್ಪರ್ಧೆ?

-ಲೋಕಸಭಾ ಚುನಾವಣೆಗೆ ಮೋದಿ ಅಂಡ್ ಟೀಂ ಭರ್ಜರಿ ಸಿದ್ಧತೆ 

- ಭುವನೇಶ್ವರದಿಂದ ಸ್ಪರ್ಧಿಸುತ್ತಾರಾ ಮೋದಿ? 

- ಈಗಿನಿಂದಲೇ ಶುರುವಾಗಿದೆ ತಯಾರಿ 

Is PM Modi Contest from Bhuvaneshvar?
Author
Bengaluru, First Published Aug 14, 2018, 1:54 PM IST

ನವದೆಹಲಿ (ಆ. 14): ದೇಶದಾದ್ಯಂತ ಅನೇಕ ಕಾರ್ಯಕ್ರಮಗಳಿಗೆ ಸ್ವತಃ ಮೋದಿ ಸಾಹೇಬರು ಬರಬೇಕು ಎಂಬ ಅಪೇಕ್ಷೆ ಇರುವುದು ಸ್ವಾಭಾವಿಕ.

ಇತ್ತೀಚೆಗೆ ಅಥಣಿಯಿಂದ ಕೂಡ ಜಾಧವ್‌ಜಿ ಶಾಲೆಯ ಆಡಳಿತ ಮಂಡಳಿ ಸದಸ್ಯರು ಮೋದಿ ಅವರನ್ನು ಭೇಟಿಯಾಗಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ಬರಲೇಬೇಕು ಎಂದರಂತೆ. ಇಲ್ಲವೇ ಇಲ್ಲ ಎಂದ ಮೋದಿ ಸಾಹೇಬರು 2019 ತಕ್ ಕಹಿ ನಹೀ ಆವೂಂಗಾ, ಸಿರ್ಫ್ ಚುನಾವ್ ಕಿ ತಯಾರಿ ಮೇ ಲಗಾ ಹೂಂ, ಫೋರ್ಸ್ ಮತ್ ಕೀಜಿಯೇ ಎಂದರಂತೆ.

ಅಂದ ಹಾಗೆ ಮುಂದಿನ ಚುನಾವಣೆ ತಯಾರಿಗಾಗಿ ಮೋದಿ ಮತ್ತು ಶಾ ಈಗಾಗಲೇ ತಮ್ಮ ತಂಡಗಳೊಂದಿಗೆ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದು, ಬಿಜೆಪಿ ಕಾರ್ಯಾಲಯದ ಮೂಲಗಳ ಪ್ರಕಾರ ಕಾಶಿ ಜೊತೆಗೆ ಭುವನೇಶ್ವರ್ನಿಂದ ಮೋದಿ ಸ್ಪರ್ಧಿಸಬಹುದಂತೆ. ಯುಪಿಯಲ್ಲಿ ಕಮ್ಮಿ ಆಗುವ ಸೀಟ್‌ಗಳನ್ನು ಒಡಿಶ್ಸಾ ಮತ್ತು ಪಶ್ಚಿಮ ಬಂಗಾಳದಿಂದ ತುಂಬಿಕೊಳ್ಳುವ ಪ್ಲಾನ್ ರೂಪಿಸಲಾಗುತ್ತಿದೆ.
 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

Follow Us:
Download App:
  • android
  • ios