ಉ.ಪ್ರ.ದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಕಬ್ಬಿಣದ ಪಂಜರ!

First Published 13, Apr 2018, 7:10 AM IST
Iron cage for Ambedkar statue in Uttar Pradesh
Highlights

ಉತ್ತರ ಪ್ರದೇಶದಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗಳ ಮೇಲೆ ದಾಳಿಗಳು ಮುಂದುವರಿದಿರುವ ನಡುವೆ, ಬದಾಯೂನ ಗಡ್ಡಿ ಚೌಕ್‌ ಪ್ರದೇಶದ ಅಂಬೇಡ್ಕರ್‌ ಪ್ರತಿಮೆಗೆ ಯಾರೋ ಅನಾಮಧೇಯರು ಕಬ್ಬಿಣದ ಪಂಜರ ಹಾಕಿದ್ದಾರೆ.

ಬದಾಯೂಂ: ಉತ್ತರ ಪ್ರದೇಶದಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗಳ ಮೇಲೆ ದಾಳಿಗಳು ಮುಂದುವರಿದಿರುವ ನಡುವೆ, ಬದಾಯೂನ ಗಡ್ಡಿ ಚೌಕ್‌ ಪ್ರದೇಶದ ಅಂಬೇಡ್ಕರ್‌ ಪ್ರತಿಮೆಗೆ ಯಾರೋ ಅನಾಮಧೇಯರು ಕಬ್ಬಿಣದ ಪಂಜರ ಹಾಕಿದ್ದಾರೆ.

ಸದರ್‌ ಕೊತ್ವಾಲಿ ಪೊಲೀಸ್‌ ಠಾಣಾ ವ್ಯಾಪ್ತಿಯ ಅಂಬೇಡ್ಕರ್‌ ಪ್ರತಿಮೆ ಸುತ್ತ ಪಂಜರ ಹಾಕಲಾಗಿದೆ. ಆದರೆ ಇದನ್ನು ಯಾರು ಹಾಕಿದ್ದಾರೆ ಎಂಬುದು ಪೊಲೀಸರಿಗೂ ಗೊತ್ತಿಲ್ಲ. ಅಂಬೇಡ್ಕರ್‌ ಜಯಂತಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಎಲ್ಲ ಪ್ರತಿಮೆಗಳಿಗೂ ರಕ್ಷಣೆ ಒದಗಿಸಲು ನಿರ್ದೇಶಿಸಲಾಗಿದೆ. ಬೇಲಿ ಹಾಕಲ್ಪಟ್ಟಅಂಬೇಡ್ಕರ್‌ ಪ್ರತಿಮೆಯ ರಕ್ಷಣೆಗೆ ಈಗ ಭದ್ರತೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಚ್ಚರದಿಂದ ಇರಿ:

ಅಂಬೇಡ್ಕರ್‌ ಜಯಂತಿ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಜ್ಯ ಸರ್ಕಾರಗಳು ಕಟ್ಟೆಚ್ಚರ ವಹಿಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚಿಸಿದೆ.

loader