ಶೋಪಿಯಾನ(ಜ.22): ಗಡಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ.

ಇಲ್ಲಿನ ಹೆಪ್ಪಾ ಪ್ರದೇಶದಲ್ಲಿ  ಉಗ್ರರು ಅಡಗಿರುವ ಸುಳಿವು ಪಡೆದ ಸೇನಾಪಡೆ, ಕಾರ್ಯಾಚರಣೆ ಆರಂಭಿಸಿತು ಮೂವರನ್ನು ಹತ್ಯೆಗೈದಿದೆ.

ಇನ್ನು ಹತ್ಯೆಯಾದ ಮೂವರು ಉಗ್ರರ ಪೈಕಿ ಶಮ್ಶೂಲ್ ಹಕ್ ಮೆಂಗ್ನೂ ಐಪಿಎಸ್ ಅಧಿಕಾರಿ ಇನಾಮುಲ್ ಹಕ್ ಮೆಂಗ್ನೂ ಅವರ ಸಹೋದರನಾಗಿದ್ದು, ಇವರು ೨೦೧೨ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಶ್ರೀನಗರದ ಕಾಲೇಜ್‌ನಲ್ಲಿ ಯುನಾನಿ ಮೆಡಿಸಿನ್ ಅಧ್ಯಯನ ನಡೆಸುತ್ತಿದ್ದ ಶಮ್ಶೂಲ್, ನಂತರ ಉಗ್ರವಾದವನ್ನು ಅಪ್ಪಿಕೊಂಡು ಭಯೋತ್ಪಾದಕನಾಗಿ ಪರಿವರ್ತಿತನಾಗಿದ್ದ ಎಂದು ಹೇಳಲಾಗಿದೆ.