Asianet Suvarna News Asianet Suvarna News

IPL 2021 ಫೈನಲ್ ಕದನ, ಮೈಸೂರಿನಲ್ಲಿ ದಸರಾ ಸಂಭ್ರಮ; ಅ.15ರ ಟಾಪ್ 10 ಸುದ್ದಿ!

ಭಾರತದ ಗಡಿ ಪ್ರದೇಶದಲ್ಲಿ ಸೇನಾ ಪಡೆಯಲ್ಲಿ ಮತ್ತಷ್ಟು ಬಲಪಡಿಸಬೇಕು ಎಂದು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಇತ್ತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತೆ ಏರಿಕೆ ಕಂಡಿದೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಸಿಎಸ್‌ಕೆ ಕೆಕೆಆರ್ ಹೋರಾಟ ನಡೆಸಲಿದೆ. ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಸಂಭ್ರಮ ಕಳೆಗಟ್ಟಿದೆ. ಶಿವಣ್ಣ ಅಪ್ಪುಗೆ, ಲಿಂಕ್ಡ್ ಇನ್ ಸ್ಥಗಿತ ಸೇರಿದಂತೆ ಅಕ್ಟೋಬರ್ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

IPL 2021 Final CSK vs KKR to Mysuru Dasara top 10 News of October 15 ckm
Author
Bengaluru, First Published Oct 15, 2021, 5:09 PM IST
  • Facebook
  • Twitter
  • Whatsapp

ಭಾರತದ ಗಡಿಗಳನ್ನು ಇನ್ನಷ್ಟು ಭದ್ರಪಡಿಸುವ ಅಗತ್ಯವಿದೆ : ಮೋಹನ್ ಭಾಗ್ವತ್

IPL 2021 Final CSK vs KKR to Mysuru Dasara top 10 News of October 15 ckm

ಭಾರತದ (India) ಗಡಿ ಪ್ರದೇಶಗಳಲ್ಲಿ ಸೇನಾಪಡೆಯನ್ನು (Army) ಇನ್ನಷ್ಟು ಬಲಪಡಿಸಬೇಕು ಎಂದು ರಾಷ್ಟ್ರಿಯ ಸ್ವಯಂ ಸೇವಕ ಸಂಘದ (RSS) ಮುಖ್ಯಸ್ಥರಾದ ಮೋಹನ್ ಭಾಗ್ವತ್ (Mohan Bhagwath) ಕರೆ ನೀಡಿದರು. 

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ, 150 ರೂ ಆದರೂ ಅಚ್ಚರಿಯಿಲ್ಲ!

IPL 2021 Final CSK vs KKR to Mysuru Dasara top 10 News of October 15 ckm

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಲ್ಲಾ ದಾಖಲೆ ಮುರಿದು ಮುನ್ನುಗ್ಗುತ್ತಿದೆ. ಶತಕ ದಾಟಿದ್ದ ಪೆಟ್ರೋಲ್ ಬೆಲೆ ಇದೀಗ 150 ರೂಪಾಯಿ ಆದರೂ ಅಚ್ಚರಿಯಿಲ್ಲ, ಇತ್ತ ಡೀಸೆಲ್ ಪೆಟ್ರೋಲನ್ನೇ ಹಿಂಬಾಸಿಲಿಕೊಂಡು ಬರುತ್ತಿದೆ. ಮೊದಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಇದೀಗ ಮತ್ತೆ ಪೆಟ್ರೋಲ್ ಹಾಗೂ ಡೀಸೆಲೆ ಬೆಲೆ ಏರಿಕೆ ಇನ್ನಷ್ಟು ಶಾಕ್ ನೀಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ 

ಚೀನಾದಲ್ಲಿ ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್ ಸ್ಥಗಿತ; ಕಾರಣ ತಿಳಿಸಿದ ಮೈಕ್ರೋಸಾಫ್ಟ್!

IPL 2021 Final CSK vs KKR to Mysuru Dasara top 10 News of October 15 ckm

ಚೀನಾದಲ್ಲಿ ಇತರ ದೇಶದ ಸಾಮಾಜಿಕ ಜಾಲತಾಣಗಳು, ಆ್ಯಪ್‌ಗಳಿಗೆ ಅವಕಾಶವಿಲ್ಲ. ಆದರೆ ಅಮೆರಿಕದ ಮೂಲದ ಅತೀ ದೊಡ್ಡ ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್ ಚೀನಾದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಚೀನಾದಲ್ಲಿ ಲಿಂಕ್ಡ್ ಇನ್ ಸೇವೆ ಕೂಡ ಸ್ಥಗಿತಗೊಳ್ಳುತ್ತಿದೆ. ಈ ಕುರಿತು ಮೈಕ್ರೋಸಾಫ್ಟ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ರಾಜೀನಾಮೆ ಹಿಂಪಡೆವ ಸುಳಿವು ನೀಡಿದ ಸಿಧು : ಮತ್ತೆ ವಾಪಸ್

IPL 2021 Final CSK vs KKR to Mysuru Dasara top 10 News of October 15 ckm

 ಪಂಜಾಬ್‌ (Punjab) ಕಾಂಗ್ರೆಸ್‌ನಲ್ಲಿ (Congress) ಉಂಟಾಗಿದ್ದ ಅಸಮಾಧಾನದ ಬಿರುಗಾಳಿ ಕೊಂಚ ಶಮನವಾದ ಲಕ್ಷಣಗಳು ಕಂಡು ಬರುತ್ತಿದೆ. ಅಸಮಾಧಾನಗೊಂಡು ರಾಜೀನಾಮೆ (Resignation) ನೀಡಿ ತೆರಳಿದ್ದ ನವಜೋತ್ ಸಿಂಗ್ ಸಿಧು (Navjoth Singh Sidhu)  ಮತ್ತೆ ವಾಪಸಾಗಿ ಪಂಜಾಬ್ ಕಾಂಗ್ರೆಸ್ (Congress) ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆಗಳಿದೆ. 

IPL 2021 CSK vs KKR ಫೈನಲ್‌: ದುಬೈ ಪಿಚ್‌ನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿವೆ ನೋಡಿ..!

IPL 2021 Final CSK vs KKR to Mysuru Dasara top 10 News of October 15 ckm

 ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್‌ (IPL 2021) ಚಾಂಪಿಯನ್‌ ಯಾರಾಗಲಿದ್ದಾರೆ ಎನ್ನುವ ಕುತೂಹಲ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಇಯಾನ್ ಮಾರ್ಗನ್ (Eoin Morgan) ನೇತೃತ್ವದ ಕೋಲ್ಕತ ನೈಟ್ ರೈಡರ್ಸ್‌ (Kolkata Knight Riders) ತಂಡಗಳಿಂದು ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಸೆಣಸಾಟ ನಡೆಸಲಿವೆ. 

ತಬ್ಬಿಕೊಂಡು ಮುದ್ದಾಡಿದ ಅಭಿಮಾನಿಗೆ ಶಿವಣ್ಣ ಕೊಟ್ಟ ಪ್ರೀತಿಯ ಪಂಚ್

IPL 2021 Final CSK vs KKR to Mysuru Dasara top 10 News of October 15 ckm

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಶಿವರಾಜ್‌ಕುಮಾರ್ ಮತ್ತು ಅಭಿಮಾನಿಯೊಬ್ಬನ ವಿಡಿಯೋ ವೈರಲ್ ಆಗುತ್ತಿದೆ. ಶಿವಣ್ಣನ ಜೊತೆ ಫೋಟೋ ಕ್ಲಿಕಿಸಿಕೊಳ್ಳುವ ರಭಸದಲ್ಲಿ ತಬ್ಬಿಕೊಂಡು, ನೂಕಾಡಿದ್ದಾನೆ. ಇದನ್ನು ಶಿವಣ್ಣ ರಿಯಾಕ್ಟ್ ಮಾಡಿದ್ದು ಹೇಗಿತ್ತು ನೋಡಿ

ಮಂಗ್ಳೂರು: ಹೆರಿಗೆಯಾಗಿದ್ದು ಹೆಣ್ಣು, ಆಸ್ಪತ್ರೆಯವರು ಕೊಟ್ಟಿದ್ದು ಗಂಡು ಮಗು..!

IPL 2021 Final CSK vs KKR to Mysuru Dasara top 10 News of October 15 ckm

ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ(Government Maternity Hospital) ನವಜಾತ ಶಿಶು ಬದಲಿಸಿದ ಗಂಭೀರ ಆರೋಪ ನಗರದ(Mangaluru) ಸರ್ಕಾರಿ ಲೇಡಿಗೋಷನ್ ಹೆರಿಗೆ ಆಸ್ಪತ್ರೆ(Govt Lady Goschen Hospital) ವಿರುದ್ಧ ಕೇಳಿ ಬಂದಿದೆ. ಈ ಸಂಬಂಧ ಲೇಡಿಗೋಷನ್ ಹೆರಿಗೆ ಆಸ್ಪತ್ರೆ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಬೆಟ್ಟದಿಂದ ಅರಮನೆಯತ್ತ ಹೊರಟ ನಾಡ ದೇವತೆ ಚಾಮುಂಡೇಶ್ವರಿ ಮೆರವಣಿಗೆ

IPL 2021 Final CSK vs KKR to Mysuru Dasara top 10 News of October 15 ckm

ಅರಮನೆ ನಗರಿ ಮೈಸೂರಿನಲ್ಲಿ ದಸರಾ ವೈಭವ ಕಳೆಗಟ್ಟಿದೆ. ಚಾಮುಂಡಿ ಬೆಟ್ಟದಿಂದ ನಾಡದೇವತೆ ಚಾಮುಂಡಿ ತಾಯಿಯನ್ನು ಮೆರವಣಿಗೆ ಮೂಲಕ ಅರಮನೆಯತ್ತ ಕರೆತರಲಾಗುತ್ತಿದೆ. ದಾರಿಯುದ್ಧಕ್ಕೂ ತಾಯಿ ಚಾಮುಂಡೇಶ್ವರಿಗೆ ಅದ್ಧೂರಿ ಸ್ವಾಗತ ಕೋರಲಾಗುತ್ತಿದೆ. ಇನ್ನೊಂದೆಡೆ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ.

Follow Us:
Download App:
  • android
  • ios