ದಿಲ್ಲಿಯಿಂದಲೇ ಬ್ರೇಕಿಂಗ್ ನ್ಯೂಸ್ ಕೊಟ್ಟ ಬಿಎಸ್‌ವೈ, ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ...

ಸೆ.21ರಿಂದ ಆರಂಭವಾಗಲಿರುವ ಅಧಿವೇಶನಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ ಮಾಡಲು ಬಿಎಸ್‌ ಯಡಿಯೂರಪ್ಪ ಇಚ್ಛಿಸಿದ್ದಾರೆ. ಇದರ ಮಧ್ಯೆ ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ರಾಗಿಣಿ-ಸಂಜನಾಗೆ ಜೈಲೇ ಗತಿ; ಸದ್ಯಕ್ಕಿಲ್ಲ ಜಾಮೀನು ಭಾಗ್ಯ!...

ರಾಗಿಣಿ- ಸಂಜನಾಗೆ ಇನ್ನೆರಡು ದಿನ ಜೈಲೇ ಗತಿಯಾಗಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ  ಮುಂದೂಡಿಕೆಯಾಗಿದೆ. ಈಗಾಗಲೇ ಸಂಜನಾ- ರಾಗಿಣಿಗೆ ಟೆನ್ಷನ್ ಶುರುವಾಗಿದೆ. ಸಂಜನಾ ಚಿಕನ್ ಹಾಗೂ ಸಿಗರೇಟ್ ಕೇಳುತ್ತಿದ್ದಾರೆ. 

ಯುವರಾಜ್‌ಗೆ ಮುಳುವಾಗುತ್ತಾ ಡ್ರಗ್ ಪೆಡ್ಲರ್ ಜೊತೆಗಿನ ನಂಟು?...

ಕಾಂಗ್ರೆಸ್ ಮಾಜಿ ಶಾಸಕ ಆರ್. ವಿ ದೇಜರಾಜ್ ಪುತ್ರ ಯುವರಾಜ್‌ಗೆ ಸಿಸಿಬಿ ವಿಚಾರಣೆ ನಡೆಸುತ್ತಿದೆ. ನಟಿ ಸಂಜನಾ ಗರ್ಲಾನಿ ಸೇರಿದಂತೆ ಸಾಕಷ್ಟು ಜನರೊಂದಿಗೆ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮುಂಬೈನ ಕುಖ್ಯಾತ ಡ್ರಗ್ ಪೆಡ್ಲರ್ ಅಜಾಜ್ ಖಾನ್ ಜೊತೆ ನಂಟಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಸಿಕ್ಕಿದೆ. 

ಲಾಕ್‌‌ಡೌನ್‌ನಿಂದ ಇಎಂಐ ವಿನಾಯ್ತಿ ಪಡೆದ ಗ್ರಾಹಕರಿಗೆ ಮತ್ತೊಂದು ಗುಡ್‌ ನ್ಯೂಸ್?...

ಕೊರೋನಾ ವೈರಸ್‌ ಲಾಕ್‌ಡೌನ್‌ ವೇಳೆ ಬ್ಯಾಂಕುಗಳು ಸಾಲಗಾರರಿಗೆ 6 ತಿಂಗಳ ಕಾಲ ಮಾಸಿಕ ಕಂತು (ಇಎಂಐ) ಪಾವತಿಯಿಂದ ವಿನಾಯ್ತಿ ನೀಡಿದ್ದ ಅವಧಿಗೆ ಚಕ್ರಬಡ್ಡಿ ಮನ್ನಾ ಮಾಡುವ ಸಾಧ್ಯತೆಯಿದೆ. ಅಂದರೆ, ಇಎಂಐ ಮುಂದೂಡಿಕೆಯಾಗಿದ್ದ ಅವಧಿಗೂ ಸಾಲಗಾರರು ಈಗಾಗಲೇ ಇರುವ ನಿಯಮದಂತೆ ಬಡ್ಡಿ ಪಾವತಿಸಲೇಬೇಕು, ಆದರೆ ಅವರಿಗೆ ಚಕ್ರಬಡ್ಡಿಯ ಹೊರೆಯಿಂದ ಮುಕ್ತಿ ಸಿಗುವ ಸಾಧ್ಯತೆಯಿದೆ.

ಲವ್ ಜಿಹಾದ್ ನಿಷೇಧಕ್ಕೆ ಸಿಎಂ ಯೋಗಿ ಸುಗ್ರೀವಾಜ್ಞೆ?...

ಪ್ರೀತಿ ಪ್ರೇಮದ ಹೆಸ​ರಿ​ನಲ್ಲಿ ಮತಾಂತ​ರಕ್ಕೆ ಪ್ರಚೋ​ದಿ​ಸು​ವ ‘ಲವ್‌ ಜಿಹಾದ್‌’ ನಿಷೇ​ಧಿಸಿ ಸುಗ್ರೀ​ವಾಜ್ಞೆ ಹೊರ​ಡಿ​ಸ​ಲು ಉತ್ತರ ಪ್ರದೇ​ಶದ ಮುಖ್ಯ​ಮಂತ್ರಿ ಯೋಗಿ ಆದಿ​ತ್ಯ​ನಾಥ್‌ ಚಿಂತನೆ ನಡೆ​ಸಿ​ದ್ದಾರೆ.

IPL 2020: ಇಂದು ಹಾಲಿ ವರ್ಸಸ್ ಮಾಜಿ ಚಾಂಪಿಯನ್ನರ ಕಾದಾಟ...

ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಬಗೆಗಿನ ಕ್ವಿಕ್ ಲುಕ್ ಇಲ್ಲಿದೆ ನೋಡಿ

ಅಭಿಮಾನಿಗಳ ಆಕ್ರೋಶದಿಂದಾಗಿ ಥೀಮ್‌ ಸಾಂಗ್‌ಗೆ ಕನ್ನಡ ಪದ ಬಳಕೆ!...

 13ನೇ ಆವೃತ್ತಿ ಐಪಿಎಲ್‌ ಆರಂಭಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಅಭಿಮಾನಿಗಳಿಗೆ ಜೋಶ್‌ ತುಂಬಲು ಥೀಮ್‌ ಸಾಂಗ್‌ ಬಿಡುಗಡೆ ಮಾಡಿತ್ತು.

ಪ್ರಿಯಾಂಕಾಳ 1 ಇನ್‌ಸ್ಟಾ ಪೋಸ್ಟ್‌ಗೆ ಹತ್ರತ್ರ 2 ಕೋಟಿ..! ಉಳಿದವರೆಷ್ಟು ಪಡೀತಾರೆ ನೋಡಿ

ಸೆಲೆಬ್ರಿಗಳು ಜಾಹೀರಾತು ಕೊಡೋಕೆ ಸಿಕ್ಕಾಪಟ್ಟೆ ಚಾರ್ಜ್ ಮಾಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಇದು ಬಿಡಿ, ತಮ್ಮ ಇನ್‌ಸ್ಟಾ ಖಾತೆಯಲ್ಲಿ ಒಂದು ಫೋಟೋ ಶೇರ್ ಮಾಡ್ಬೇಕಂದ್ರೂ ಕೋಟಿ ಕೋಟಿ ಚಾರ್ಜ್‌ ಮಾಡ್ತಾರೆ. ಸೆಲೆಬ್ರಿಟಿಗಳ ಪೋಸ್ಟ್ ಚಾರ್ಜ್ ಮಾಹಿತಿ ಇಲ್ಲಿದೆ

ಲಕ್ಷ ಬೆಲೆ ಬಾಳುವ ಶೂಗಳನ್ನು ಹೊಂದಿರುವ ಖ್ಯಾತ ನಟರಿವರು!

ಸಿನಿಮಾ ನಟಿಯರಿಗೆ ಹ್ಯಾಂಡ್‌ಬ್ಯಾಕ್‌, ಜಾಕೇಟ್‌ ಹಾಗೂ ಮೇಕಪ್‌ ಮೇಲೆ ಎಷ್ಟು ಕ್ರೇಜ್ ಇರುತ್ತೋ, ಹಾಗೇ ನಟರಿಗೆ ಶೂ ಮತ್ತು ಕಾರು ಮೇಲೆ ಸಿಕ್ಕಾಪಟ್ಟೆ ಕ್ರೇಜ್ ಇರುತ್ತದೆ. ಹಾಗಾದರೆ ಬಾಲಿವುಡ್‌ನಲ್ಲಿ ಅತಿ ದುಬಾರಿ ಶೂಗಳನ್ನು ಹೊಂದಿರುವ ನಟರು ಇವರೆ ನೋಡಿ...

ಡ್ರಗ್ಸ್ ಸಾಗಿಸಲು ಲಿಂಕ್: ಕನ್ನಡದ ಮತ್ತೊಬ್ಬ ಖ್ಯಾತ ಆ್ಯಂಕರ್‌ಗೆ ಸಿಸಿಬಿ ಶಾಕ್...

ಮೊನ್ನೇ ಅಷ್ಟೇ ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಆಗಮಿಸುವಂತೆ ಸೂಚಿಸಿತ್ತು. ಇದೀಗ ಮತ್ತೋರ್ವ   ಖ್ಯಾತ ಆ್ಯಂಕರ್ ಡ್ರಗ್ಸ್‌ ಸಾಗಿಸುವಾಗ ಸಿಕ್ಕಿಬಿದ್ದಿದ್ದಾನೆ.