Asianet Suvarna News Asianet Suvarna News

IPL ತಂಡಕ್ಕೆ 50 ಕೋಟಿ ನಷ್ಟ, ಕೇರಳ ಸಿಎಂಗೆ 'ಸ್ವಪ್ನ' ಸಂಕಷ್ಟ: ಆ.7ರ ಟಾಪ್ 10 ಸುದ್ದಿ!

ಶಿಕ್ಷಣ ಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿ ಮುನ್ನಡಿ ಬರೆದಿದ್ದಾರೆ. ಇತ್ತ ಚೀನಾ ಗಡಿ ಕಾಯಲು 6 ಉಪಗ್ರಹದ ಅವಶ್ಯಕತೆ ಇದೆ ಎಂದು ಭಾರತೀಯ ಸೇನೆ ಹೇಳಿದೆ.  ಕಾಶ್ಮೀರ ವಿಚಾರದಲ್ಲಿ ಮೂಗುತೂರಿಸಿದ ಟರ್ಕಿಗೆ ಭಾರತ ತಿರುಗೇಟು ನೀಡಿದೆ. ಕೇರಳ ಸಿಎಂ ಜೊತೆ ಸಂಪರ್ಕವಿದೆ ಎಂದು ಚಿನ್ನ ಕಳ್ಳಸಾಗಣೆ ಹಗರಣದ ರೂವಾರಿ ಸ್ವಪ್ನ ಸುರೇಶ್ ಹೇಳಿದ್ದಾರೆ. ಚೀನಾ ಕ್ವಿಟ್‌ ಇಂಡಿಯಾ’ ಆಂದೋಲನ ಕಿಚ್ಚು ಆರಂಭಗೊಂಡಿದೆ. ನೆರವಿಗಾಗಿ ಸೋನು ಸೂದ್‌ನತ್ತ ನೋಡುತ್ತಿದ್ದಾರೆ ಜನ, ಐಪಿಎಲ್ ತಂಡಗಳಿಂದ 50 ಕೋಟಿ ನಷ್ಟ ಸೇರಿದಂತೆ ಆಗಸ್ಟ್ 7ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

IPL 2020 to Kerala Cm top 10 news of August 7
Author
Bengaluru, First Published Aug 7, 2020, 5:07 PM IST

ಚೀನಾ ಮೇಲೆ ಹದ್ದಿನ ಕಣ್ಣಿಡಲು 6 ಉಪಗ್ರಹ ಬೇಕೆಂದ ಭಾರತೀಯ ಸೇನೆ...

IPL 2020 to Kerala Cm top 10 news of August 7

ಚೀನಾ ಸೇನೆಯ ಮೇಲೆ ಹದ್ದಿನ ಕಣ್ಣು ಇರಿಸುವ ಉದ್ದೇಶದಿಂದ 4ರಿಂದ 6 ಉಪಗ್ರಹಗಳ ಅವಶ್ಯಕತೆ ಇದೆ ಎಂದು ಭಾರತದ ಭದ್ರತಾ ಪಡೆಗಳು ಬೇಡಿಕೆ ಇರಿಸಿವೆ. 

ಅಯೋಧ್ಯೆ ಭಾಷಣದಲ್ಲಿ 8 ಕೋಟಿ ಭಾರತೀಯರ ಹೊರಗಿಟ್ಟ ಮೋದಿ; ಆತಂಕ ವ್ಯಕ್ತಪಡಿಸಿದ ತರೂರ್!...

IPL 2020 to Kerala Cm top 10 news of August 7

ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ ಬಳಿಕ ರಾಮ ಮಂದಿರ ನಿರ್ಮಾಣ ಕಾರ್ಯಗಳು ಆರಂಭಗೊಂಡಿದೆ. ಈ ಸಂಭ್ರಮ ದೇಶದಲ್ಲಿ ಮನೆ ಮಾಡಿದೆ. ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾಡಿದ ಭಾಷಣದಲ್ಲಿ ಮೋದಿ, 8 ಕೋಟಿ ಭಾರತೀಯರ ಕುರಿತು ಸೊಲ್ಲೆತ್ತಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಬಳಿಕ ಮೋದಿ 8 ಕೋಟಿ ಮಂದಿಯನ್ನು ಹೊರಗಿಟ್ಟಿದ್ದೇಕೆ? ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರಶ್ನಿಸಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ಮೂಗುತೂರಿಸಿದ ಟರ್ಕಿ, ಭಾರತ ತಿರುಗೇಟಿಗೆ ಸೈಲೆಂಟ್!...

IPL 2020 to Kerala Cm top 10 news of August 7

ಸಂಪೂರ್ಣ ಜಮ್ಮ ಮತ್ತು ಕಾಶ್ಮೀರ ವಿವಾದಿತ ಪ್ರದೇಶ. ಇಲ್ಲಿ ಭಾರತ ಯಾವುದೇ ನಿರ್ಧಾರ ಕೈಗೊಳ್ಳಬೇಕಿದ್ದರೆ ಪಾಕಿಸ್ತಾನದ ಒಪ್ಪಿಗೆ ಅಗತ್ಯ. ಇದು  ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದ ಹಲವು ದಶಕಗಳಿಂದ ಬಿಂಬಿತವಾದ ಅಸತ್ಯ. ಹೀಗಾಗಿ ಕೆಲ ದೇಶಗಳು ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370  ರದ್ದು ಕುರಿತು ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ ಕಾಶ್ಮೀರ ವಿಚಾರದಲ್ಲಿ ಮೂಗುತೂರಿಸಿದ ಟರ್ಕಿಗೆ ಭಾರತ ತಿರುಗೇಟು ನೀಡಿದೆ.

ಕೇರಳ ಸಿಎಂ ಜತೆ 'ಸಂಪರ್ಕ' ಒಪ್ಪಿಕೊಂಡ ಸ್ವಪ್ನಾ ಸುರೇಶ್

IPL 2020 to Kerala Cm top 10 news of August 7

ಚಿನ್ನ ಕಳ್ಳಸಾಗಣೆ ಹಗರಣದ ರೂವಾರಿ ಸ್ವಪ್ನ ಸುರೇಶ್ ತನಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಸಾಮಾನ್ಯ ಸಂಪರ್ಕವಿದೆ ಎಂದು ಎನ್‌ಐಎ ಎದುರು ಬಾಯಿ ಬಿಟ್ಟಿದ್ದಾಳೆ. 

ಹೊಸ ಶಿಕ್ಷಣ ರೀತಿ ಬಗ್ಗೆ ಪ್ರಧಾನಿ ಮಾತು..! ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದ ಮೋದಿ...

IPL 2020 to Kerala Cm top 10 news of August 7

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಕ್ಷಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಶಿಕ್ಷಕರ ಘನತೆಯನ್ನೂ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಐಪಿಎಲ್‌ ತಂಡ​ಗ​ಳಿಗೆ 40-50 ಕೋಟಿ ರುಪಾಯಿ ನಷ್ಟ?...

IPL 2020 to Kerala Cm top 10 news of August 7

ಈ ಬಾರಿಯ ಐಪಿಎಲ್ ಟೂರ್ನಿ ನಡೆದರೂ ಪ್ರತಿ ಫ್ರಾಂಚೈಸಿಗೆ ಕನಿಷ್ಠವೆಂದರೂ 40--50 ಕೋಟಿ ರುಪಾಯಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಭಾರೀ ಮಳೆಗೆ ಮನೆ ನೆಲಸಮ; ಮನೆಯಲ್ಲಿದ್ದ ನಾಲ್ವರು ಅದೃಷ್ಟವಶಾತ್ ಪಾರು...

IPL 2020 to Kerala Cm top 10 news of August 7

ಚಿಕ್ಕಮಗಳೂರಿನಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ. ಭಾರೀ ಮಳೆಗೆ ಮನೆ ನೆಲಸಮಗೊಂಡಿದೆ. ಮನೆಯಲ್ಲಿದ್ದ ನಾಲ್ವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಎನ್‌ಆರ್ ಪುರ ತಾಲೂಕಿನ ಮಡಬೂರು ಗ್ರಾಮದಲ್ಲಿ ಘಟನೆ  ನಡೆದಿದೆ. ಅಶೋಕ್ ಎಂಬುವವರ ಮನೆ ಸಂಪೂರ್ಣ ನಾಶವಾಗಿದೆ. 

ಬೆಡ್‌ ಸಿಕ್ತಿಲ್ಲ': ನೆರವಿಗಾಗಿ ಸೋನು ಸೂದ್‌ನತ್ತ ನೋಡ್ತಿದ್ದಾರೆ ಜನ..!...

IPL 2020 to Kerala Cm top 10 news of August 7

ಬಾಲಿವುಡ್ ನಟ ಸೋನು ಸೂದ್ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮಾಡಿದ ನೆರವಿನಿಂದ ರಿಯಲ್ ಸೂಪರ್ ಹೀರೋ ಎಂದೇ ಕರೆಯಲ್ಪಡುತ್ತಿದ್ದಾರೆ. ಕೊರೋನಾ ಸಂತ್ರಸ್ತರ ನೆರವಿಗೆ ನಿಂತ ಸೋನು ಲಾಕ್‌ಡೌನ್ ಮುಗಿದರೂ ಕಷ್ಟದಲ್ಲಿರುವವರಿಗೆ ನೆರವಾಗುವುದನ್ನು ನಿಲ್ಲಿಸಿಲ್ಲ.

ಮಲಯಾಳಂನಲ್ಲಿ ಮಿಂಚಿದ ಕನ್ನಡದ ಹುಡುಗಿ ರಾಚೆಲ್‌ ಡೇವಿಡ್‌!...

IPL 2020 to Kerala Cm top 10 news of August 7

ಮಾಡೆಲಿಂಗ್‌ ಹಾಗೂ ಜಾಹೀರಾತುಗಳಲ್ಲಿ ಮಿಂಚುತ್ತಿದ್ದ ಕನ್ನಡತಿ ರಾಚೆಲ್‌ ಡೇವಿಡ್‌ ಮಲಯಾಳಂ ಚಿತ್ರಗಳಲ್ಲಿ ಗಮನ ಸೆಳೆಯುವಂತಹ ಪಾತ್ರಗಳನ್ನು ಮಾಡುತ್ತಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡು, ಕನ್ನಡದಲ್ಲೂ ನಟಿಸುವ ಆಸೆ ಹೊತ್ತ, ರಚೆಲ್‌ ಜತೆಗಿನ ಮಾತುಕತೆ.

ಇಂದು ದೇಶಾದ್ಯಂತ ‘ಚೀನಾ ಕ್ವಿಟ್‌ ಇಂಡಿಯಾ’ ಆಂದೋಲನ...

IPL 2020 to Kerala Cm top 10 news of August 7

ಚೀನೀ ವಸ್ತುಗಳಿಗೆ ಬಹಿಷ್ಕಾರದ ಕೂಗು ಜೋರಾಗಿರುವ ಬೆನ್ನಲ್ಲೇ, ದೇಶದ ಉದ್ಯಮಿಗಳ ಸಂಘಟನೆಯಾದ ಅಖಿಲ ಭಾರತ ಉದ್ಯಮಿಗಳ ಕಾನ್ಫಿಡರೇಷನ್‌ ಸಂಘಟನೆ(ಸಿಎಐಟಿ) ಸ್ವಾತಂತ್ರ್ಯ ಹೋರಾಟದ ವೇಳೆ ಬ್ರಿಟಿಷರ ವಿರುದ್ಧ ಕರೆ ನೀಡಲಾಗಿದ್ದ ಕ್ವಿಟ್‌ ಇಂಡಿಯಾ ರೀತಿ ಶುಕ್ರವಾರ ‘ಚೀನಾ ಕ್ವಿಟ್‌ ಇಂಡಿಯಾ’ ಆಂದೋಲನಕ್ಕೆ ಕರೆ ನೀಡಿದೆ.

Follow Us:
Download App:
  • android
  • ios