Asianet Suvarna News Asianet Suvarna News

ನೆರವು ನೀಡಿದ ಇನ್ಫಿ ಫೌಂಡೇಷನ್, ಯಾರಾಗ್ತಾರೆ ಕಾಂಗ್ರೆಸ್ ಕ್ಯಾಪ್ಟನ್? ಮೇ.10ರ ಟಾಪ್ 10 ಸುದ್ದಿ!

ಕೊರೋನಾ ವಿರುದ್ಧದ ಹೋರಾಟಕ್ಕೆ ಇನ್ಫೋಸಿಸ್ ಫೌಂಡೇಷನ್ 100 ಕೋಟಿ ರೂಪಾಯಿ ನೆರವು ನೀಡಿದೆ. ಇತ್ತ ದಕ್ಷಿಣ ಕೊರಿಯಾ ಸೇರಿದಂತೆ ಹಲವು ರಾಷ್ಟ್ರಗಳು ಭಾರತಕ್ಕೆ ನೆರವು ನೀಡಿದೆ. ಇತ್ತ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕೂಗು ಎದ್ದಿದ್ದು, ಎಐಸಿಸಿ ಅಧ್ಯಕ್ಷ ಯಾರು ಅನ್ನೋ ಕುತೂಹಲ ಮನೆ ಮಾಡಿದೆ. ಆರೋಗ್ಯ ಕುರಿತು ಕಿಚ್ಚ ಸುದೀಪ್ ಮಾತು, ಯಜುವೇಂದ್ರ ಚಹಾಲ್ ದೇಣಿಗೆ ಸೇರಿದಂತೆ ಮೇ.10ರ ಟಾಪ್ 10 ಸುದ್ದಿ ಇಲ್ಲಿವೆ.

Infosys foundation corona donation to Congress top 10 news of May 10 ckm
Author
Bengaluru, First Published May 10, 2021, 5:50 PM IST

ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಸದ್ದು, ಮುಂದಿನ ಎಐಸಿಸಿ ಅಧ್ಯಕ್ಷ ಯಾರು?...

Infosys foundation corona donation to Congress top 10 news of May 10 ckm

ಕೊರೋನಾ ಎರಡನೇ ಅಲೆ ಮಧ್ಯೆ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಭಾರಿ ಸದ್ದುಮಾಡುತ್ತಿದೆ. ಇದೇ ಜೂನ್ 23ಕ್ಕೆ  ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರ ಆಯ್ಕೆ ಸಂಬಂಧ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

ಕೋವಿಡ್‌ ಸೆಂಟರ್‌ ಆದ ಗೋಶಾಲೆ: ಹಾಲು, ಗೋಮೂತ್ರದ ಚಿಕಿತ್ಸೆ, ಆಕ್ಸಿಜನ್‌ಗೂ ಇದೆ ವ್ಯವಸ್ಥೆ!...

Infosys foundation corona donation to Congress top 10 news of May 10 ckm

ಕೊರೋನಾ ಎರಡನೇ ಅಲೆ ಸಂಕಟ ಇಡೀ ದೇಶವನ್ನು ಆವರಿಸಿದೆ. ಈ ಮಹಾಮಾರಿ ನಿಯಂತ್ರಿಸಲು ಎಲ್ಲಾ ರಾಜ್ಯಗಳಲ್ಲೂ ವಿಭಿನ್ನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಲ್ಲಲ್ಲಿ ಕೋವಿಡ್‌ ಕೆಂದ್ರಗಳನ್ನು ನಿರ್ಮಿಸಿ ಜನರಿಗೆ ಚಿಕಿತ್ಸೆ ನೀಡಲಾಗುತ್ತದೆ

ಕೊರೋನಾ ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ದಕ್ಷಿಣ ಕೊರಿಯಾ!...

Infosys foundation corona donation to Congress top 10 news of May 10 ckm

ಕಠಿಣ ಪರಿಸ್ಥಿತಿಯಲ್ಲಿ ಅಮೆರಿಕ, ಬ್ರೆಜಿಲ್, ರಷ್ಯಾ, ಜಪಾನ್ ಹೀಗೆ ವಿಶ್ವದ ನಾನಾ ರಾಷ್ಟ್ರಗಳು ಭಾರತ ನೆರವಿಗೆ ಧಾವಿಸಿದ್ದವು. ಸದ್ಯ ದಕ್ಷಿಣ ಕೊರಿಯಾ ದೇಶ ಈ ಪಟ್ಟಿಗೆ ಸೇರ್ಪಪಡೆಯಾಗಿದೆ.

ಕೋವಿಡ್ ಸಂಕಷ್ಟಕ್ಕೆ ಯುಜುವೇಂದ್ರ ಚಹಲ್ 95,000 ರೂ ದೇಣಿಗೆ..!...

Infosys foundation corona donation to Congress top 10 news of May 10 ckm

ಜಾಗತಿಕ ಪಿಡುಗಾಗಿರುವ ಕೋವಿಡ್ ಎರಡನೇ ಅಲೆಗೆ ಭಾರತ ಅಕ್ಷರಶಃ ನಲುಗಿ ಹೋಗಿದೆ. ಸಂಕಷ್ಟದ ಸುಳಿಗೆ ಸಿಲುಕಿರುವ ಭಾರತಕ್ಕೆ ನೆರವಾಗಲು ಜಗತ್ತಿನಾದ್ಯಂತ ಹಲವು ಕ್ರಿಕೆಟಿಗರು ಮುಂದೆ ಬಂದಿದ್ದಾರೆ. 

ಹಾಸಿಗೆ ಹಿಡಿದಾಗ ಮತ್ತೆ ಎದ್ದು ಬರುತ್ತೇನೆಂಬ ಗ್ಯಾರಂಟಿಯೇ ಇರಲಿಲ್ಲ: ಸುದೀಪ್...

Infosys foundation corona donation to Congress top 10 news of May 10 ckm

ಕಳೆದ ಮೂರು ವಾರಗಳಿಂದ ಸುದೀಪ್ ಬಿಗ್‌ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಸಾರ್ವಜನಿಕವಾಗಿಯೂ ಕಾಣಿಸಿಕೊಳ್ಳುತ್ತಿಲ್ಲ. ಕಾರಣ ಅವರ ಅನಾರೋಗ್ಯ. ಆದರೆ ಈಗ ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಬಳಿಕ ಮೊದಲ ಬಾರಿಗೆ ಮಾತನಾಡಿದ್ದಾರೆ. ಆರೋಗ್ಯ, ಸಿನಿಮಾ, ಕೊರೋನಾ, ಅಡುಗೆ, ಕ್ರಿಕೆಟ್, ಜೀವನ, ಕಷ್ಟ- ನೋವುಗಳನ್ನು ಹಂಚಿಕೊಂಡಿದ್ದಾರೆ. ಓವರ್ ಟು ಸುದೀಪ್....

ಸೋಷಿಯಲ್ ಮೀಡಿಯಾ ಪೋಸ್ಟ್‌ ವ್ಯಂಗ್ಯ ಗುರುತಿಸಲು ಬಂದಿದೆ ಕೃತಕ ಬುದ್ಧಿಮತ್ತೆ ತಂತ್ರ!...

Infosys foundation corona donation to Congress top 10 news of May 10 ckm

ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿನ ವ್ಯಂಗ್ಯ, ಸತ್ಯ, ವಿಡಂಬಣೆ ಅಥವಾ ಮಾಹಿತಿಯೇ ಎಂಬುದನ್ನು ಸರಿಯಾಗಿ ಗ್ರಹಿಸಲು ಆಗುವುದಿಲ್ಲ. ಎಷ್ಟೋ ಸಾರಿ ನಾವು ವ್ಯಂಗ್ಯವಾಗಿರುವ ಪೋಸ್ಟ್‌ಗಳನ್ನು ವಿದ್ವತ್‌ಪೂರ್ಣ ಇಲ್ಲವೇ ಮಾಹಿತಿಯುಕ್ತ ಎಂದು ಭಾವಿಸುತ್ತೇವೆ. ಆದರೆ, ಕಂಪ್ಯೂಟರ್ ವಿಜ್ಞಾನ ಸಂಶೋಧಕರ ತಂಡವೊಂದು, ಇಂಥ ಪೋಸ್ಟ್‌ಗಳಲ್ಲಿನ ವ್ಯಂಗ್ಯವನ್ನು ಗುರುತಿಸುವ ಎಐ ವ್ಯವಸ್ಥೆಯನ್ನು ರೂಪಿಸಿದೆ.

ಕೋವಿಡ್‌ ಹೋರಾಟಕ್ಕೆ ಇನ್ಫಿ ಫೌಂಡೇಶನ್‌ 100 ಕೋಟಿ ರೂ.!...

Infosys foundation corona donation to Congress top 10 news of May 10 ckm

ಕೊರೋನಾ ವಿರುದ್ಧದ ಹೋರಾಟಕ್ಕೆ 100 ಕೋಟಿ ರು. ದೇಣಿಗೆ ನೀಡುವುದಾಗಿ ಬೆಂಗಳೂರು ಮೂಲದ ಇಸ್ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥೆ ಸುಧಾಮೂರ್ತಿ ಭಾನುವಾರ ಘೋಷಣೆ ಮಾಡಿದ್ದಾರೆ. ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಕಳೆದ ವರ್ಷವೂ ಫೌಂಡೇಷನ್‌ 100 ಕೋಟಿ ರು. ದೇಣಿಗೆ ನೀಡಿತ್ತು. ಇದೀಗ ಹೆಚ್ಚುವರಿ 100 ಕೋಟಿ ರು. ಪ್ರಕಟಿಸುವ ಮೂಲಕ ಕೊರೋನಾ ವಿರುದ್ಧದ ಭಾರತದ ಹೋರಾಟಕ್ಕೆ ಇಸ್ಫೋಸಿಸ್‌ ಒಟ್ಟಾರೆ 200 ಕೋಟಿ ರು. ದೇಣಿಗೆ ನೀಡಿದಂತಾಗಲಿದೆ.

ಕೊರೋನಾ ಹೋರಾಟಕ್ಕೆ ಕೈಜೋಡಿಸಿದ ಹೊಂಡಾ ಇಂಡಿಯಾ ; 6.5 ಕೋಟಿ ರೂ ಪ್ಯಾಕೇಜ್ ಘೋಷಣೆ!...

Infosys foundation corona donation to Congress top 10 news of May 10 ckm

ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕೋವಿಡ್ ಆರೈಕೆಯ ಪ್ರತ್ಯೇಕ ಕೇಂದ್ರಗಳು ಮತ್ತು ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ ಸೇರಿದಂತೆ ಕೊರೋನಾ ವಿರುದ್ಧದ ಹೋರಾಟಕ್ಕೆ ಹೊಂಡಾ ಇಂಡಿಯಾ ಕೈ ಜೋಡಿಸಿದೆ. ಇದಕ್ಕಾಗಿ 6.5 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

1 ಸಾವಿರ ಬೆಡ್‌ನ ಕ್ವಾರಂಟೈನ್‌ ಕೇಂದ್ರ: ರೋಗಿಗಳಿಗೆ ರಾಮಾಯಣ, ಮಹಾಭಾರತದ ದರ್ಶನ!...

Infosys foundation corona donation to Congress top 10 news of May 10 ckm

ಮಧ್ಯಪ್ರದೇಶದಲ್ಲಿ ಎರಡನೇ ಕೊರೋನಾ ಅಲೆ ಅಬ್ಬರ ಮುಂದುವರೆದಿದೆ. ಹೀಗಿರುವಾಗಲೇ ರಾಜಧಾನಿ ಭೋಪಾಲ್‌ನಲ್ಲಿ ವಿಶೇಷ ವಿಚಾರವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಮೋತೀಲಾಲ್ ನೆಹರೂ ಸ್ಟೇಡಿಯಂನಲ್ಲಿ ಒಂದು ಸಾವಿರ ಬೆಡ್‌ಗಳ ಕ್ವಾರಂಟೈನ್‌ ಸೆಂಟರ್‌ ಆರಂಭಿಸಲಾಗಿದೆ. 

ಯಾರ ಕರೆಯೂ ಸ್ವೀಕರಿಸದ ನಟಿ ರಚಿತಾ ರಾಮ್‌ ಲಾಕ್‌ಡೌನ್‌ನಲ್ಲಿ ಏನು ಮಾಡುತ್ತಿದ್ದಾರೆ?

Infosys foundation corona donation to Congress top 10 news of May 10 ckm

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್‌ ಲಾಕ್‌ಡೌನ್‌ ಆದ್ರೆ ಸಾಕು ಸೋಷಿಯಲ್ ಮೀಡಿಯಾದಿಂದ ದೂರ ಉಳಿಯುತ್ತಾರೆ. ಅಷ್ಟೇ ಯಾಕೆ ಯಾರೇ ಕರೆ ಮಾಡಿದರೂ ಸ್ವೀಕರಿಸುವುದಿಲ್ಲವಂತೆ. ಜನರ ಸಂಪರ್ಕದಿಂದ ದೂರ ಉಳಿದಿರುವ ರಚ್ಚು ಲಾಕ್‌ಡೌನ್‌ನಲ್ಲಿ ಏನು ಮಾಡುತ್ತಿದ್ದಾರೆ ಗೊತ್ತಾ?
 
Follow Us:
Download App:
  • android
  • ios