Asianet Suvarna News Asianet Suvarna News

ಹೇಳಿದ್ದೇನು, ಆಗಿದ್ದೇನು?: ಸ್ವಿಸ್ ಬ್ಯಾಂಕ್ ವರದಿ ಸಿಕ್ರೇಟ್!

ಸ್ವಿಸ್ ಬ್ಯಾಂಕ್ ಗಳಲ್ಲಿರುವ ಭಾರತೀಯರ ಹಣ

ಪ್ರಧಾನಿ ಮೋದಿಗೆ ಆಶ್ಚರ್ಯ ತರಿಸುವ ವರದಿ ಬಹಿರಂಗ

ಸ್ವಿಸ್ ನ್ಯಾಷನಲ್ ಬ್ಯಾಂಕ್ ವರದಿ ಬಹಿರಂಗ

ಭಾರತೀಯರ ಹಣ ಶೇ.50ರಷ್ಟು ಹೆಚ್ಚಳ
 

ಬೆಂಗಳೂರು(ಜೂ.29): ಕಳೆದ ಲೋಕಸಭೆ ಚುನಾವಣೆ ವೇಳೆ ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ವಾಪಸ್ ತರುವುದಾಗಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಚ್ಚರಿ ಮೂಡಿಸುವಂತಹ ಸುದ್ದಿ ಇದು. 

ಹೌದು, ಅಚ್ಚರಿಯಾದರೂ ನಿಜ. 2017ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತೀಯರ ಹಣ ಶೇ.50ರಷ್ಟು(7 ಸಾವಿರ ಕೋಟಿ) ಹೆಚ್ಚಳವಾಗಿದೆ ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್ ಎನ್ ಬಿ) ಬಿಡುಗಡೆ ಮಾಡಿರುವ ವಾರ್ಷಿಕ ದತ್ತಾಂಶಗಳಿಂದ ಬಹಿರಂಗವಾಗಿದೆ.

2017ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ವಿಶ್ವದ ಒಟ್ಟು ವಿದೇಶಿ ಗ್ರಾಹಕರ ಹಣದಲ್ಲಿ ಶೇ.3ರಷ್ಟು(100 ಲಕ್ಷ ಕೋಟಿ ರುಪಾಯಿ) ಹೆಚ್ಚಳವಾಗಿದೆ. ಈ ಪೈಕಿ ಭಾರತೀಯರ ಹಣ ಶೇ.50ರಷ್ಟು ಹೆಚ್ಚವಾಗಿದೆ ಎಂದು ಸ್ವಿಸ್ ರಾಷ್ಟ್ರೀಯ ಬ್ಯಾಂಕ್ ತಿಳಿಸಿದೆ.ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತೀಯರ ಹಣ ವಾಪಸ್ ತರುವ ಕೇಂದ್ರ ಸರ್ಕಾರದ ಸತತ ಪ್ರಯತ್ನಗಳ ಹೊರತಾಗಿಯೂ ಭಾರತೀಯರ ಹಣ ಶೇ.50ರಷ್ಟ ಹೆಚ್ಚಳವಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಈ ಕುರಿತು ನಿಮ್ಮ ಸುವರ್ಣನ್ಯೂಸ್‌ನ ಲೆಫ್ಟ್ ರೈಟ್ ಆ್ಯಂಡ್ ಸೆಂಟರ್‌ನಲ್ಲಿ ನಡೆದ ಚಚೆರ್ಯ ಸಂಪೂರ್ಣ ವಿವರ ನಿಮಗಾಗಿ 
 

Video Top Stories