Asianet Suvarna News Asianet Suvarna News

ರೈಲು ಶುರುವಾಯ್ತು, ಸೌಂಡ್ ರಹಸ್ಯ ಗೊತ್ತಾಯ್ತು, ಮಲೈಕಾ ಗುಟ್ಟು ರಟ್ಟಾಯ್ತು..ಮೇ 20 ರ ಟಾಪ್ 10

ದೇಶದಲ್ಲಿ ನಿಲ್ಲುತ್ತಿಲ್ಲ ಕೊರೋನಾ ಆರ್ಭಟ/ ಸಂಚಾರಕ್ಕೆ ಭಾರತೀಯ ರೈಲ್ವೆ ಸಿದ್ಧತೆ/ ಪುತ್ರನಿಗೆ ಹೇರ್ ಕಟ್ಟ ಮಾಡಿದ ಸಚಿನ್/ ಫಿಟ್ ನೆಸ್ ಗುಟ್ಟು ಬಿಚ್ಚಿಟ್ಟ ಮಲೈಕಾ/ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಡೆ ನೀಡಿ

Indian Railways Starts to Malaika arora fitness top-10-news-of-may-20
Author
Bengaluru, First Published May 20, 2020, 6:21 PM IST
  • Facebook
  • Twitter
  • Whatsapp

ಬೆಂಗಳೂರು(ಮೇ 20)  ದೇಶದಲ್ಲಿ ಕೊರೋನಾ ಆರ್ಭಟಕ್ಕೆ ಕೊನೆ ಇಲ್ಲ. ಪ್ರಕರಣಗಳ ಸಂಖ್ಯೇ ಏರುತ್ತಲೇ ಇದೆ. ಇನ್ನೇನು ಮಾಡುವುದು ಎಂದು ಭಾರತೀಯ ರೈಲ್ವೆ ಸಂಚಾರ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದೆ. 40 ಕಳೆದರೂ ಚೆಲುವು ಮಾಸದ ಮಲೈಕಾ ಅರೋರಾ ತಮ್ಮ ಫಿಟ್ ನೆಸ್ ಗುಟ್ಟು ಬಿಚ್ಚಿಟ್ಟದಾರೆ. ಮಾಸ್ಟರ್ ಬ್ಲಾಸ್ಟರ್ ತಮ್ಮ ಪುತ್ರನಿಗೆ ಹೇರ್ ಕಟ್ ಮಾಡಿ  ಕೊರೋನಾ ಜಾಗೃತಿ ಸಾರಿದ್ದಾರೆ.. ಮೇ 20 ರ ಟಾಪ್ 10 ಸುದ್ದಿಗಳು ಇಲ್ಲಿವೆ


ಬೆಂಕಿ ಹೊತ್ತಿಸಿದ ಗೋಡ್ಸೆ ಬರ್ತಡೆ, ಬಿಜೆಪಿ ಮೇಲೆ ಕಾಂಗ್ರೆಸ್ ಅಟ್ಯಾಕ್

ಮಹಾತ್ಮಾ ಗಾಂಧೀಜಿ ಅವರನ್ನು ಹತ್ಯೆ ಮಾಡಿದ್ದ ನಾಥೂರಾಮ್ ಗೋಡ್ಸೆ ಜನ್ಮದಿನ ಆಚರಣೆ ಮಾಡಿದ ಹಿಂದೂ ಮಹಾಸಭಾದ ಕಾರ್ಯಕ್ರಮ ಇದೀಗ ವಿವಾದ ಎಬ್ಬಿಸಿದೆ.  ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ವಿವಾದ ಎಬ್ಬಿಸಿದೆ

 

ಬ್ರೇಕಿಂಗ್: SSLC ಪರೀಕ್ಷೆ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಪಿಐಎಲ್‌

ದೇ ಜೂನ್‌ 25ರಿಂದ ನಡೆಸಲು ತೀರ್ಮಾನಿಸಲಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸದಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.  ಈಗಾಗಲೇ SSLC ಪರೀಕ್ಷೆಗಳನ್ನು ಜೂನ್ 25ರಿಂದ ಜುಲೈ 3ರ ವರೆಗೆ ನಡೆಸಲು ಕರ್ನಾಟಕ ಪ್ರೌಢ ಶಿಕ್ಷಣ  ಮಂಡಳಿ ವೇಳಾಪಟ್ಟಿ ಪ್ರಕಟಿಸಿದೆ. ಆದ್ರೆ, ಇದೀಗ ಪರೀಕ್ಷೆಗಳನ್ನು ನಡೆಸದಂತೆ ವಕೀಲ ಲೋಕೇಶ್ ಎನ್ನುವರು ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದಾರೆ.

ಕಂಗನಾ ಎದೆ ಮಚ್ಚೆಯ ಗುಟ್ಟು: ಮಣಿಕರ್ಣಿಕಾ ಚೆಲುವೆಯ ಬಿಂದಾಸ್ ಲುಕ್

ಕಂಗನಾ ಅಂದ್ರೆ ನಾವಂದುಕೊಂಡ ಹಾಗಲ್ಲ. ಒಮ್ಮೊಮ್ಮೆ ಒಂದೊಂಥರ ಇರೋ ಈಕೆ ಲೈಫ್ ಅನ್ನು ಮನಸು ಬಂದ ಹಾಗೆ ಅನುಭವಿಸೋದ್ರಲ್ಲಿ ಎಕ್ಸ್ ಪರ್ಟ್, ಜೊತೆಗೆ ನಮ್ಮ ಊಹೆಗಳನ್ನು ಅಡಿಮೇಲು ಮಾಡೋದ್ರಲ್ಲೂ ಎತ್ತಿದ ಕೈ. ಸೀರೆ ಉಟ್ಕೊಂಡು ಗೌರಮ್ಮನ ಹಂಗಿರ್ತಾಳೆ ಅನ್ನೋ ಹೊತ್ತಿಗೆ ತೊಟ್ಟಿರೋ ಟಾಪ್ ಅನ್ನೇ ಮೇಲೆತ್ತಿ ಎದೆಯಂಚಿನ ಮಚ್ಚೆ ತೋರಿಸೋದಾ ಈ ಮಣಿಕರ್ಣಿಕಾ ಬೆಡಗಿ!

ಪುತ್ರನಿಗೆ ಹೇರ್‌ ಕಟ್‌ ಮಾಡಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌

 

ಲಾಕ್‌ಡೌನ್ ಐಶಾರಾಮಿ ಅಂಗಡಿಗಳಿಂದ ಹಿಡಿದು ಸಲೂನ್ ಶಾಪ್‌ವರೆಗೂ ಎಲ್ಲವೂ ಬಂದಾಗಿದೆ. ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ತಮ್ಮ ಮಗ ಅರ್ಜುನ್‌ ತೆಂಡುಲ್ಕರ್‌ಗೆ ಹೇರ್‌ ಕಟ್‌ ಮಾಡಿದ್ದಾರೆ. 

ವಿಶ್ವಸಂಸ್ಥೆ ಸಮಿತಿಗೆ ಹರ್ಷವರ್ಧನ ಅಧ್ಯಕ್ಷ!

ಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸ್ಥಾನ ಈ ಬಾರಿ ಭಾರತಕ್ಕೆ ಒಲಿದಿದೆ. ಆ ಹುದ್ದೆಯನ್ನು ಆರೋಗ್ಯ ಸಚಿವ ಡಾ| ಹರ್ಷವರ್ಧನ ಅವರು ಮೇ 22ರಂದು ವಹಿಸಿಕೊಳ್ಳಲಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಈ ಹುದ್ದೆ ಅತ್ಯಂತ ಮಹತ್ವದ್ದಾಗಿದ್ದು, ಒಂದು ವರ್ಷ ಅಧಿಕಾರಾವಧಿ ಹೊಂದಿದೆ.

 

ಜೂ.1ರಿಂದ ದೇಶಾದ್ಯಂತ ರೈಲು ಸಂಚಾರ!

ಲಾಕ್‌ಡೌನ್‌ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ರೈಲು ಸಂಚಾರ ಪುನಾರಂಭಿಸಲು ಉದ್ದೇಶಿಸಿರುವ ಭಾರತೀಯ ರೈಲ್ವೆ, ಮೊದಲ ಹಂತದಲ್ಲಿ ಜೂ.1ರಿಂದ 200 ವಿಶೇಷ ರೈಲುಗಳ ಸಂಚಾರ ಆರಂಭಿಸಲಿದೆ. ನಾನ್‌- ಎಸಿ ರೈಲುಗಳು ಇವಾಗಿರಲಿದ್ದು, ಈ ರೈಲುಗಳ ಟಿಕೆಟ್‌ ಬುಕಿಂಗ್‌ ಆನ್‌ಲೈನ್‌ ಮೂಲಕ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರು ತಿಳಿಸಿದ್ದಾರೆ.

 

ಹೆಲ್ತ್ ಬುಲೆಟಿನ್ ಮಾದರಿಯೇ ಬದಲು, ಮುಚ್ಚಿಡುವಂಥದ್ದೇನಿದೆ?

 ರಾಜ್ಯ ಸರ್ಕಾರ ನೀಡಿರುವ ಹೆಲ್ತ್ ಬುಲೆಟಿನ್ ನೀಡುವ ವಿಧಾನವನ್ನು ಬದಲಾಯಿಸಿದೆ. ಸೋಂಕಿನ ಮೂಲ ಏನು? ಸೋಂಕಿತ ವ್ಯಕ್ತಿ ಟ್ರಾವೆಲ್ ಹಿಸ್ಟರಿ ಎಲ್ಲವನ್ನು ತಿಳಿಸಲಾಗುತ್ತಿತ್ತು ಆದರೆ ಇದ್ದಕ್ಕಿದ್ದಂತೆ ಮೇ 20 ರಂದು ಬದಲಾವಣೆ ಮಾಡಲಾಗಿದ್ದು ಕೇವಲ ಜಿಲ್ಲಾವಾರು ವಿವರ ಮಾತ್ರ ನೀಡಿದ್ದಾರೆ. ಇದಕ್ಕೆ ರಾಜ್ಯ ಆರೋಗ್ಯ ಇಲಾಖೆಯೇ ಸ್ಪಷ್ಟನೆ ನೀಡಬೇಕಾಗಿದೆ.

 

ರಚಿತಾ ರಾಮ್ ಸಖತ್ ಟಿಕ್ ಟಾಕ್

ನಟಿ ರಚಿತಾ ರಾಮ್ ಅಭಿಮಾನಿ ಜೊತೆ ಟಿಕ್ ಟಾಕ್ ಮಾಡಿದ ವಿಡಿಯೋ ವೈರಲ್ ಆಗಿದೆ. ಕೆಜಿಎಫ್ 2 ಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಚಿತ್ರ ಅಕ್ಟೋಬರ್‌ನಲ್ಲಿ ರಿಲೀಸ್ ಆಗುತ್ತೆ ಅನ್ನೋ ಸುದ್ದಿ ಬಿಟ್ರೆ ಬೇರೆ ಯಾವ ಅಪ್‌ಡೇಟ್ ಸಿಕ್ಕಿರಲಿಲ್ಲ. ಇದೀಗ ಚಿತ್ರತಂಡ ಮ್ಯೂಸಿಕ್ ಕಂಪೋಸ್ ಮಾಡಲು ಶುರು ಮಾಡಿದೆ. 

46ರ ನಟಿ ಮಲೈಕಾ ಆರೋರಾ ಡಯಟ್‌ ಹಾಗೂ ಫಿಟ್ನೆಸ್‌ !

 

ರನ್​ವೇನಲ್ಲಿ ಸುಖೋಯ್​ ಟೇಕಾಫ್: ನಿಗೂಢ ಶಬ್ದದ ಭಯಕ್ಕೆ ತೆರೆ ಎಳೆದ HAL!

ಬೆಂಗಳೂರಿಗರನ್ನು ಮಟ ಮಟ ಮಧ್ಯಾಹ್ನ ಬೆಚ್ಚಿ ಬೀಳಿಸಿದ್ದ ಶಬ್ಧಕ್ಕೇನು ಕಾರಣ ಎಂಬುವುದು ಕೊನೆಗೂ ಬಯಲಾಗಿದ್ದು, ಸಿಲಿಕಾನ್ ಸಿಟಿ ಜನರು ನಿಟ್ಟುಸಿರು ಬಿಡುವಂತಾಗಿದೆ.

Follow Us:
Download App:
  • android
  • ios