ಭಾರತೀಯ ವೈದ್ಯನ ಚಮತ್ಕಾರ,  ಅಮೆರಿಕದಲ್ಲಿ ಕೊರೋನಾ ರೋಗಿಗೆ ಮರುಜನ್ಮ...

ಕೊರೋನಾವೈರಸ್ ನಿಂದ ಶ್ವಾಸಕೋಶವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದ ಮಹಿಳೆಗೆ ಭಾರತದ ಮೂಲದ ವೈದ್ಯರೊಬ್ಬರು ಮರುಜನ್ಮ ನೀಡಿದ್ದಾರೆ.

ಆರ್ಥಿಕತೆ ಮೇಲೆತ್ತಲು ನೋಟು ಮುದ್ರಣ ಸೇರಿ ಎಲ್ಲ ಆಯ್ಕೆ ಪರಿಶೀಲನೆ: ಕೇಂದ್ರ

ಈ ವರ್ಷ ದೇಶದ ಆರ್ಥಿಕ ಪ್ರಗತಿ ಎಷ್ಟಿರಲಿದೆ ಎಂಬುದು ಆರ್ಥಿಕತೆಯ ಚೇತರಿಕೆ ಮೇಲೆ ಅವಲಂಬಿತವಾಗಿದೆ. ಈ ವರ್ಷದ ಎರಡನೇ ಭಾಗದಲ್ಲಿ ಚೇತರಿಕೆ ಆಗುತ್ತದೋ ಅಥವಾ ಮುಂದಿನ ವರ್ಷ ಆಗುತ್ತದೋ ಎಂಬುದರ ಬಗ್ಗೆ ಅನಿಶ್ಚಿತತೆ ಇದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ಹೇಳಿದ್ದಾರೆ. 

ಕೊರೋನಾ ಸೋಂಕಿತರಲ್ಲಿ ಭಾರತಕ್ಕೆ ವಿಶ್ವದಲ್ಲೇ 4ನೇ ಸ್ಥಾನ..!

ಕೊರೋನಾ ನಾಗಾಲೋಟಕ್ಕೆ ಭಾರತ ಬೆಚ್ಚಿಬಿದ್ದಿದೆ, ಗುರುವಾರ ಹೊಸದಾಗಿ 11 ಸಾವಿರ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ 6ನೇ ಸ್ಥಾನದಲ್ಲಿದ್ದ ಭಾರತ ಬ್ರಿಟನ್ ಹಾಗೂ ಸ್ಪೇನ್ ದೇಶಗಳನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ದಾಪುಗಾಲು ಇಟ್ಟಿದೆ.

ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್....!

ಹಲವು ವಿರೋಧಗಳ ನಡುವೆಯೂ ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದ್ದು, ವಿದ್ಯಾರ್ಥಿಗಳ ಮೇಲಿನ ಕಾಳಜಿಗೆ ಮಹತ್ವದ ಕ್ರಮವೊಂದನ್ನು ತೆಗೆದುಕೊಂಡಿದೆ.

ರಕ್ಷಣೆ ಅಂದ್ರೆ ಇದಪ್ಪಾ; ಕ್ಯಾಮೆರಾಗಳಿಗೆ ಅಂಜದೆ ಪಿಪಿ ಕಿಟ್‌ ಧರಿಸಿ ಬಂದ ನಟಿ!

ಪಿಪಿ ಕಿಟ್‌ ವಿತ್ ಮಾಸ್ಕ್‌ ಹಾಗೂ ಗ್ಲೌಸ್‌ ಧರಸಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಟಿ ರಕುಲ್‌ ಪ್ರೀತ್‌ ಲುಕ್‌ ನೋಡಿ ಅಭಿಮಾನಿಗಳು ಭೇಷ್‌ ಎಂದಿದ್ದಾರೆ..

ಹುಚ್ಚ ವೆಂಕಟ್‌ ಮೇಲೆ ಹಲ್ಲೆ ವಿರುದ್ಧ ಧ್ವನಿ ಎತ್ತಿದ ನವರಸನಾಯಕ ಜಗ್ಗೇಶ್!

ಸ್ಯಾಂಡಲ್‌ವುಡ್‌ ಫೈಟಿಂಗ್ ಆಂಡ್ ಫೈರಿಂಗ್ ಸ್ಟಾರ್ ಹುಟ್ಟ ವೆಂಕಟ್‌ ಶ್ರೀರಂಗಪಟ್ಟಣ ಹಾಗೂ ಮಂಡ್ಯದಲ್ಲಿ ಮಾಡಿದ ರಂಪಾಟಕ್ಕೆ ಗೂಸ ತಿಂದಿದ್ದಾರೆ. ಈ ವಿಚಾರದ ಬಗ್ಗೆ ನಟ ಜಗ್ಗೇಶ್‌ ಧ್ವನಿ ಎತ್ತಿದ್ದಾರೆ...

ಟ್ವಿಟ್ಟರ್‌‌‌‌‌ಗೂ ಬಂತು ಏಕ್ ದಿನ್ ಕಾ ಸ್ಟೋರಿ, WhatsApp Status ರೀತಿ!

ಟ್ವಿಟ್ಟರ್‌ನಲ್ಲೂ ನೀವು ಸ್ಟೋರಿ ಹೇಳ್ಕೋಬಹುದು. ಆದರೆ, ಅದಕ್ಕೆ ಹೆಸರು ಮಾತ್ರ ಬದಲಾವಣೆ ಆಗಿದೆ ಅಷ್ಟೇ. ಫ್ಲೀಟ್ ಹೆಸರಿನಲ್ಲಿರುವ ನೂತನ ಫೀಚರ್‌ನಲ್ಲಿ ತೋಚಿದ್ದನ್ನು ಗೀಚಿ ಹಾಕಿಕೊಳ್ಳಬಹುದಾಗಿದ್ದು, 24 ಗಂಟೆ ಬಳಿಕ ಅದು ಕಣ್ಮರೆಯಾಗಲಿದೆ. ಮೊದಲು ಬ್ರೆಜಿಲ್‌ನಲ್ಲಿ ಪ್ರಾಯೋಗಿಕವಾಗಿ ಈ ಫೀಚರ್ ಅನ್ನು ಪ್ರಸ್ತುತಿಪಡಿಸಿದ್ದ ಟ್ವಿಟ್ಟರ್, ಇಟಲಿ ಬಳಿಕ ಈಗ ಭಾರತದಲ್ಲಿ ಪ್ರಯೋಗಕ್ಕೆ ಮುಂದಾಗಿದೆ. ಇಲ್ಲಿನ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ಹೆಜ್ಜೆ ಇಡಲು ಹೊರಟಿದೆ. ಕಳೆದ ತಿಂಗಳು ಘೋಷಣೆ ಮಾಡಿದ್ದನ್ನು ಈಗ ಅನುಷ್ಠಾನಕ್ಕೆ ತರಲು ಹೊರಟಿದೆ. 

ಸಿವಿಲ್ ಸರ್ವೀಸ್ ಪರೀಕ್ಷೆಯ ಟ್ರಿಕ್ಕಿ ಪ್ರಶ್ನೆ ಹಾಗೂ ಫನ್ನಿಯೆಸ್ಟ್ ಉತ್ತರಗಳು...

ಸಂದರ್ಶನಕ್ಕೆ ಹೆಚ್ಚು ಸಮಯ ಇಲ್ಲದೆ ಇರುವುದರಿಂದ ಸಂದರ್ಶನಕ್ಕೆ ನಾಳೆಯಿಂದ ಸಿದ್ಧತೆ ನಡೆಸಲು ಆರಂಭಿಸಿದರೆ ಸಾಕೆಂದು ದಿನ ಮುಂದೂಡಬೇಡಿ.  ನಿಮ್ಮನ್ನ ಕಂಫ್ಯೂಸ್ ಮಾಡುವ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಇಲ್ಲಿ ನಿಮ್ಮ ಪುಸ್ತಕದ ಬದನೆಕಾಯಿ ಕೇಳುವ ಬದಲು, ನಿಮ್ಮ ಜಾಣತನ ಹಾಗೂ ನೀವು ಎಷ್ಟು ಚಾಣಾಕ್ಷವಾಗಿಉತ್ತರಿಸುತ್ತೀರಾ ಎಂದು ಚೆಕ್ ಮಾಡಲು ಇಂತಹ ಪ್ರಶ್ನೆಗಳನ್ನು ಕೇಳುತ್ತಾರೆ. 


ಚಿರಂಜೀವಿ ಕೈಯಲ್ಲಿದ್ದ ಸಿನಿಮಾ ಎಷ್ಟು, ಅರ್ಧಕ್ಕೆ ನಿಂತ ಸಿನಿಮಾ ಏನಾಯ್ತು?...

ಅಕಾಲಿಕ ಮರಣದಿಂದಾಗಿ ಚಿರಂಜೀವಿ ಸರ್ಜಾ ಒಪ್ಪಿಕೊಂಡಿದ್ದ, ಶೂಟಿಂಗ್ ಆಗಬೇಕಿದ್ದ, ರಿಲೀಸ್‌ ಆಗಲು ರೆಡಿಯಾಗಿದ್ದ ಸಿನಿಮಾಗಳ ಕಥೆ ಏನಾಗಿದೆ? ಕರ್ನಾಟಕ ಫಿಲ್ಮಂ ಚೇಂಬರ್‌ 'ಶಿವಾರ್ಜುನ' ಸಿನಿಮಾ ರೀ-ರಿಲೀಸ್‌ ಮಾಡುತ್ತಾ? ಹಲವು ಪ್ರಶ್ನೆಗಳ ಉತ್ತರ ಈ ಸ್ಟೋರಿಯಲ್ಲಿ.

ಬಿಜೆಪಿ ರಾಜ್ಯಾಧ್ಯಕ್ಷರ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರಕ್ಕೆ ಡೋಂಟ್‌ ಕೇರ್..!...

ಸಾಮಾಜಿಕ ಅಂತರದ ಕಾಯ್ದುಕೊಳ್ಳಿ ಎಂದು ಎಷ್ಟೇ ಮನವಿ ಮಾಡಿಕೊಂಡರೂ ನಮ್ಮ ಜನ ಮಾತ್ರ ಕೇಳುತ್ತಲೇ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಕಾರ್ಯಕ್ರಮದಲ್ಲೇ ಸಾಮಾಜಿಕ ಅಂತರ ಮಾಯವಾಗಿದೆ.