ನವದೆಹಲಿ(ಫೆ.28): ಪಾಕಿಸ್ತಾನ ವಶದಲ್ಲಿರುವ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಬಿಡುಗಡೆಗೆ ಭಾರತ ಒತ್ತಾಯಿಸಿದೆ. ಆದರೆ ಈ ಕುರಿತು ಪಾಕಿಸ್ತಾನದೊಂದಿಗೆ ಯಾವುದೇ ಒಪ್ಪಂದಕ್ಕೆ ಭಾರತ ನಿರಾಕರಿಸಿದೆ.

ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯ, ಪೈಲೆಟ್ ಬಿಡುಗಡೆಗಾಗಿ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆಗೆ ಭಾರತ ಸಿದ್ಧವಿಲ್ಲ ಎಂದು ತಿಳಿಸಿದೆ.

ಆದರೆ ವಿಂಗ್ ಕಮಾಂಡರ್ ಅವರನ್ನು  ಸುರಕ್ಷಿತವಾಗಿ ಬಿಡುಗಡೆಗೊಳಿಸುವಂತ ಆಗ್ರಹಿಸಿರುವ ಭಾರತ, ಅಂತಾರಾಷ್ಟ್ರೀಯ ಕಾನೂನಿನ ಪಾಲನೆ ಮಾಡುವುದು ಪಾಕ್ ಕರ್ತವ್ಯ ಎಂದು ಹೇಳಿದೆ.