ವಾಷಿಂಗ್ಟನ್(ಅ.16): ಬಡತನ ನಿರ್ಮೂಲನೆ ಎಂದು ಹೇಳುತ್ತಲೇ 70 ವರ್ಷಗಳನ್ನು ದೂಡಿದ ಭಾರತ, ಈ ಕುರಿತು ನಿಜಕ್ಕೂ ಕಾರ್ಯೋನ್ಮುಖವಾಗಿದ್ದು ಯಾವಾಗ ಗೊತ್ತಾ?.

ಭಾರತ 1990ರಿಂದ ಬಡತನ ನಿರ್ಮೂಲನೆಗೆ ಹೆಚ್ಚು ಒತ್ತು ನೀಡಿದ್ದು, ಕಳೆದ 15 ವರ್ಷಗಳಲ್ಲಿ ಶೇ.07ರಷ್ಟು ಪ್ರಗತಿ ಸಾಧಿಸಿದೆ ಎಂದು ವಿಶ್ವ ಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.

1990ರಿಂದ ಬಡತನ ನಿರ್ಮೂಲನೆಗೆ ಒತ್ತು ನೀಡಿದ ಭಾರತ, ಕಳೆದ 15 ವರ್ಷಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವುದು ತೃಪ್ತಿದಾಯಕ ಎಂದು ವಿಶ್ವ ಬ್ಯಾಂಕ್ ಹೇಳಿದೆ.

ಬಡತನ ನಿರ್ಮೂಲನೆ ಜೊತೆಗೆ ಮಾನವ ಅಭಿವೃದ್ಧಿಯಲ್ಲೂ ಭಾರತ ಪ್ರಗತಿ ಸಾಧಿಸುತ್ತಿದ್ದು, ಇದು ಉತ್ತಮ ಬೆಳವಣಿಗೆ ಎಂದು ವಿಶ್ವಬ್ಯಾಂಕ್ ಸಂತಸ ವ್ಯಕ್ತಪಡಿಸಿದೆ.

ಮುಂದಿನ ದಿನಗಳಲ್ಲಿ ಭಾರತ ತನ್ನ ಅರ್ಥ ವ್ಯವಸ್ಥೆಯ ಬಲದಿಂದ ಮತ್ತಷ್ಟು ವೇಗವಾಗಿ ಬಡತನ ನಿರ್ಮೂಲನೆಗೆ ಮುಂದಾಗಲಿದೆ ಎಂದೂ ವಿಶ್ವ ಬ್ಯಾಂಕ್ ಅಂದಾಜಿಸಿದೆ.