ರೋಹ್ಟಕ್‌[ಆ.26]: ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ ಡೇರಾ ಸಚ್ಚಾ ಸೌಧಾದ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಂ ಬಾಬಾ 2 ವರ್ಷದಲ್ಲಿ ಸುನಾರಿಯಾ ಜೈಲಿನ ಆವರಣದಲ್ಲಿ ತರಕಾರಿ ಬೆಳೆದು 18 ಸಾವಿರ ರು. ಹಣ ಸಂಪಾದಿಸಿದ್ದಾನೆ.

ಆದರೆ, ಇದಕ್ಕಾಗಿ ಗುರ್ಮೀತ್‌ 15 ಕೆಜಿ ತೂಕ ಕಳೆದುಕೊಂಡಿದ್ದಾನೆ. 2 ವರ್ಷಗಳ ಹಿಂದೆ ತನ್ನ ಇಬ್ಬರು ಭಕ್ತರ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.

ಯಾವುದೇ ಕೌಶಲ ಇಲ್ಲದ ಗುರ್ಮೀತ್‌, ಕಾರ್ಮಿಕ ವರ್ಗದ ಜೈಲುವಾಸಿಗಳೊಂದಿಗೆ ಸೇರಿ ತರಕಾರಿ ಬೆಳೆಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ. ಇದಕ್ಕಾಗಿ ದಿನಕ್ಕೆ 40 ರು. ಸಂಭಾವನೆ ನೀಡಲಾಗುತ್ತಿದೆ.