ಬೆಂಗಳೂರು : 15 ವರ್ಷಗಳ ಹಿಂದೆ ಜಯನಗರದಲ್ಲಿ ಸಣ್ಣದೊಂದು  ಕಚೇರಿ ತೆರೆದು ಹಣಕಾಸು ವ್ಯವಹಾರ ಆರಂಭಿಸಿದ ಐಎಂಎ ಜ್ಯುವೆಲ್ಲರಿ ಮಾಲಿಕ ಮನ್ಸೂರ್ ಖಾನ್ 500 ಕೋಟಿ ರು.ಗಳಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾನೆ. 13  ವರ್ಷಗಳಲ್ಲಿ ತನ್ನ ಉದ್ಯಮವನ್ನು ಶಿಕ್ಷಣ ಸಂಸ್ಥೆ, ಆಸ್ಪತ್ರೆ ಹಾಗೂ ರಿಯಲ್ ಎಸ್ಟೇಟ್ ತನಕ ವಿಸ್ತರಿಸಿತ್ತು. 

ಜಯ  ನಗರ, ಶಿವಾಜಿನಗರದ ಲೇಡಿಕರ್ಜನ್ ರಸ್ತೆಯಲ್ಲಿ ಜ್ಯೂವೆಲ್ಲರಿ ಮಳಿಗೆ, ಆರ್.ಟಿ.ನಗರ ಮತ್ತು ಶಿವಾಜಿ ನಗರದಲ್ಲಿ ಎರಡು ಶಾಲೆ, ಐಎಂಎ ಫ್ರಂಟ್‌ಲೈನ್  ಹೆಸರಿನಲ್ಲಿ 2 ಆಸ್ಪತ್ರೆ ಹಾಗೂ ಸುಮಾರು 15 ಕ್ಕೂ ಹೆಚ್ಚು ಮೆಡಿಕಲ್ ಮಳಿಗೆಯನ್ನು ಹೊಂದಿದ್ದಾನೆ. ತನ್ನ ಉದ್ಯಮ ವಿಸ್ತರಿಸಿ ಕೊಂಡಂತೆ ಮನ್ಸೂರ್ ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಜತೆ ಸ್ನೇಹ ಹೊಂದಿದ್ದ.

ಈ ಹಿಂದೆ ಐಟಿ ದಾಳಿ: ಐಎಂಎ ಗ್ರೂಪ್ ಆಫ್ ಕಂಪನಿಸ್ ಮೇಲೆ 2017 ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿ ಗಳು ದಾಳಿ ನಡೆಸಿದ್ದರು. ಆದಾಯ ತೆರಿಗೆ ಪಾವತಿ ಹಾಗೂ ಶೇಕಡ ಪ್ರಮಾಣದಲ್ಲಿ ಚಿನ್ನಾಭರಣ ರಿಯಾಯಿತಿ ಮಾರಾಟ ಆರೋಪದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.