ಮದುವೆ ಆಸೆ ಹುಟ್ಟಿಸಿ ಐಎಎಫ್ ಅಧಿಕಾರಿಯಿಂದ ಐಐಟಿ ವಿದ್ಯಾರ್ಥಿನಿ ರೇಪ್

First Published 26, Jan 2018, 8:27 AM IST
IIT Student Rape In Kanpur
Highlights

ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರು ವಿವಾಹವಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಉತ್ತರಪ್ರದೇಶ ಕಾನ್ಪುರ ಐಐಟಿ ವಿದ್ಯಾರ್ಥಿನಿಯೊಬ್ಬರು ದೂರಿದ್ದಾರೆ.

ಕಾನ್ಪುರ: ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರು ವಿವಾಹವಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಉತ್ತರಪ್ರದೇಶ ಕಾನ್ಪುರ ಐಐಟಿ ವಿದ್ಯಾರ್ಥಿನಿಯೊಬ್ಬರು ದೂರಿದ್ದಾರೆ.

ಆರೋಪಿಯು ಕಾನ್ಪುರದಲ್ಲಿರುವ ತನ್ನ ವಸತಿ ನಿಲಯಕ್ಕೆ ಬಂದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ದೂರು ನೀಡಿದ್ದು, ಅದರಲ್ಲಿ ಐಎಎಫ್ ಅಧಿಕಾರಿ ಸ್ನೇಹಿತ, ಸೋದರಿ ಮತ್ತು ಅವರ ಸೋದರ ಸಂಬಂಧಿ ಹೆಸರನ್ನೂ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಎಎಫ್ ಅಧಿಕಾರಿಯಾದ ಬಿಹಾರದ ಸರನ್ ಜಿಲ್ಲೆಯ ಸೀತಾಂಶು ಮತ್ತು ಐಐಟಿ ವಿದ್ಯಾರ್ಥಿನಿ ಫೇಸ್‌ಬುಕ್ ಮೂಲಕ ಕಳೆದ ವರ್ಷವಷ್ಟೇ ಪರಸ್ಪರ ಪರಿಚಯವಾಗಿದ್ದರು. ಮೊದಲಿಗೆ ಸಾಮಾಜಿಕ ಮಾಧ್ಯಮದಲ್ಲೇ ಸಮಾಲೋಚಿಸುತ್ತಿದ್ದ ಸೀತಾಂಶು ಕೆಲವು ತಿಂಗಳುಗಳಿಂದ ಯುವತಿಯ ವಸತಿ ನಿಲಯಕ್ಕೆ ಭೇಟಿ ನೀಡಲು ಶುರುವಿಟ್ಟುಕೊಂಡಿದ್ದ. ಈ ಸಂದರ್ಭದಲ್ಲಿ ತನ್ನ ಮೇಲೆ ಸೀತಾಂಶು, ಹಾಸ್ಟೆಲ್ ನಲ್ಲೇ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

loader