ನವದೆಹಲಿ[ ಆ.26] ‘ನಾಥುರಾಮ್ ಗೋಡ್ಸೆಗಿಂತ ಮೊದಲು ನಾನು ಹುಟ್ಟಿದ್ದರೆ, ನನ್ನ ಕೈಯಾರೆ ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡುತ್ತಿದ್ದೆ’ ಹೀಗೊಂದು ಹೇಳಿಕೆ ವಿವಾದದ ಅಲೆ ಎಚ್ಚಿಸಿದೆ. ಅಖಿಲ ಭಾರತೀಯ ಹಿಂದೂ ಮಹಾಸಭಾ (ಎಬಿಎಚ್​ಎಂ)ದ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ದೇಶದ ಮೊದಲ ಹಿಂದೂ ನ್ಯಾಯಾಲಯದ ಸ್ವಯಂಘೋಷಿತ ನ್ಯಾಯಾಧೀಶೆ ಡಾ.ಪೂಜಾ ಶಕುನ್ ಪಾಂಡೆ ಅಲಿಘಡನಲ್ಲಿ  ಇಂಥದ್ವಿದೊಂದು ವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇಷ್ಟಕ್ಕೆ ಸುಮ್ಮನಿರದೆ ಪಾಂಡೆ  ಸ್ವತಂತ್ರ ಭಾರತದಲ್ಲಿ ಯಾರೇ ಮಹಾತ್ಮ ಎಂದು ಹೇಳಿಕೊಂಡು ಓಡಾಡಿದರು ಅವರನ್ನು ಗುಂಡಿಟ್ಟು ಕೊಲಲ್ಲಿ ಎಂಬ ಪ್ರಚೋದನೆಯನ್ನು ನೀಡಿದ್ದಾರಡೆ.

ಗಾಂಧೀಯ ದೇಶ ವಿಭಜನೆಯಿಂದಾಗಿ ದೇಶದ ಲಕ್ಷಾಂತರ ಮಂದಿ ಹಿಂದೂಗಳು ಬಲಿಯಾಗಬೇಕಾಯಿತು. ಒಂದು ವೇಳೆ ಗೋಡ್ಸೆಗಿಂತ ಮೊದಲು ನಾನು ಹುಟ್ಟಿದ್ದರೇ ನನ್ನ ಕೈಯಾರೆ ಗಾಂಧಿಯನ್ನು ಕೊಲ್ಲುತ್ತಿದ್ದೆ. ದೇಶದ ವಿಭಜನೆಗೆ ಮತ್ತು ಲಕ್ಷಾಂತರ ಹಿಂದೂಗಳ ಸಾವಿಗೆ ಗಾಂಧಿಯೇ ಕಾರಣ ಎಂದು ಆರೋಪ ಮಾಡುತ್ತ ಹೇಳಿಕೆ ನೀಡಿದ್ದಾರೆ.

ಮಹಾತ್ಮ ಗಾಂಧಿ ಈ ದೇಶದ ಪಿತಾಮಹಾನಲ್ಲ. ಆ ಬಿರುದನ್ನು ಯಾರು ನೀಡಿದರೋ ನನಗೆ ಗೊತ್ತಿಲ್ಲ. ತಂದೆ ಯಾವುದೇ ಕಾರಣಕ್ಕೂ ತನ್ನ ಇಬ್ಬರು ಮಕ್ಕಳನ್ನು ದೂರ ಮಾಡುವುದಿಲ್ಲ. ಹಿಂದೂಗಳ ಸಾವಿಗೆ ಕಾರಣನಾದ ವ್ಯಕ್ತಿಯಿಂದ ಆ ಬಿರುದನ್ನು ಹಿಂಪಡೆಯಬೇಕು ಎಂಬ ಆಗ್ರಹವನ್ನು ಸಹ ಪಾಂಡೆ ಮಾಡಿದ್ದಾರೆ.

ಇತಿಹಾಸವೇ ಹಾಗೆ, ಅನೇಕ ಸಾರಿ ಸತ್ಯವನ್ನು ನಮ್ಮಿಂದ ಮರೆಮಾಚಿ ಇಡುತ್ತದೆ. ಯಾರು ದೇಶಭಕ್ತ, ಯಾರು ದೇಶಕ್ಕಾಗಿ ರಕ್ತ ಹರಿಸಿದರು ಎಂಬುದನ್ನು ಸ್ಪಷ್ಟವಾಗಿ ಹೇಳಲೂ ಭಾರತದ ಇತಿಹಾಸ ವಿಫಲವಾಗಿದೆ ಎಂಬ ಆರೋಪವನ್ನು ಸಹ ಪಾಂಡೆ ಮಾಡಿದ್ದಾರೆ.