Asianet Suvarna News Asianet Suvarna News

ಆಗಿ ಹೋಗಿದೆ ರಾಹುಲ್ ಮದುವೆ, ವಧು ಯಾರು?

ಮೋಸ್ಟ್ ಎಲಿಜಬೆಲ್ ಬ್ಯಾಚುಲರ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮದುವೆಯಾಗಿದ್ದಾರೆ. ಸ್ವತಃ ಅವರೇ ನಾನು ಮದುವೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅರೆ ಇದೇನಿದು ಸುದ್ದಿ-ಗದ್ದಲವಿಲ್ಲದೇ ಎಐಸಿಸಿ ಅಧ್ಯಕ್ಷರು ಗೃಹಸ್ಥಾಶ್ರಮ ಸೇರಿದರಾ? ಉತ್ತರ ಇಲ್ಲಿದೆ.

I am married to Congress party says Rahul Gandhi
Author
Bengaluru, First Published Aug 14, 2018, 5:14 PM IST

ಹೈದರಾಬಾದ್[ಆ.14]  ತಮ್ಮ ಮದುವೆ ಬಗ್ಗೆ ತೂರಿಬಂದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ ನನಗೆ ಮದುವೆಯಾಗಿದೆ ಎಂದಿದ್ದಾರೆ. ನಾನು ಕಾಂಗ್ರೆಸ್ ಪಕ್ಷವನ್ನೇ ಮದುವೆಯಾಗಿದ್ದೇನೆ ಎಂದು ರಾಹುಲ್ ಸಂವಾದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಸದ್ಯಕ್ಕೆ ತಮ್ಮ ಗುರಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅಧಿಕಾರದಿಂದ ಕಿತ್ತೆಸೆಯುವುದು. ಮದುವೆಯಾಗುವ ಯಾವುದೇ ಯೋಜನೆಯಿಲ್ಲ ಎಂದು ರಾಹುಲ್ ಹೈದರಾಬಾದ್ ನಲ್ಲಿ ಸಂವಾದ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

48 ವರ್ಷದ ರಾಹುಲ್ ಗಾಂಧಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರಲು ಹೋರಾಟ ಆರಂಭಿಸಿದ್ದಾರೆ. ಈ ಹಿಂದೆ ಕೂಡ ರಾಹುಲ್ ಮದುವೆ ಕುರಿತು ಗಾಳಿ ಸುದ್ದಿಗಳು ಹರಿದಾಡಿದ್ದವು.

Follow Us:
Download App:
  • android
  • ios